ಕೇಂದ್ರ ಸರ್ಕಾರ ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಎನ್ನುವ ಯೋಜನೆಯೂ ಒಂದಾಗಿದೆ. ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಹೆಚ್ಚಾಗಿ ಈ ಯೋಜನೆ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೇಂದ್ರಿಕರಿಸಿದೆ.
ಕೇಂದ್ರ ಸರ್ಕಾರ ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಎನ್ನುವ ಯೋಜನೆಯೂ ಒಂದಾಗಿದೆ. ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಹೆಚ್ಚಾಗಿ ಈ ಯೋಜನೆ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೇಂದ್ರಿಕರಿಸಿದೆ.
ಸುಕನ್ಯಾ ಸಮೃದ್ಧಿ ಯೋಜನೆಯಡಿ ಪ್ರತಿವರ್ಷ 6 ಸಾವಿರ ರೂಪಾಯಿ ಜಮೆ ಮಾಡಿದರೆ 15 ವರ್ಷಗಳವರೆಗೆ 90 ಸಾವಿರ ರೂಪಾಯಿ ಆಗುತ್ತದೆ. ನಂತರ ಐದು ಆರು ವರ್ಷಗಳ ಕಾಲ ಕಟ್ಟಬೇಕಾಗಿಲ್ಲ. ಈ ಹಣಕ್ಕೆ ಒಟ್ಟು 1,73,725 ರೂಪಾಯಿ ಬಡ್ಡಿಯಾಗುತ್ತದೆ. ಜಮೆಮಾಡಿದ 90000 ಮತ್ತು ಬಡ್ಡಿ 1,73,725 ರೂಪಾಯಿ ಸೇರಿ ಒಟ್ಟು 2,63,723 ರೂಪಾಯಿ ಸಿಗುತ್ತದೆ. ಈ ಹಣಕ್ಕೆ ಆದಾಯ ತೆರಿಗೆ ಕಾಯ್ದೆ 1961 ರ 80 ಸಿ ಸೆಕ್ಷನ್ ಅಡಿ ತೆರಿಗೆ ವಿನಾಯಿತಿ ನೀಡಲಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯ ವಾರ್ಷಿಕ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ. ಮಗಳು 10 ವರ್ಷಗಳ ನಂತರ ಮಾತ್ರ ಖಾತೆಯನ್ನು ನಿರ್ವಹಿಸಬಹುದೆಂಬ ನಿಯಮ ಮೊದಲು ಇತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಮಗಳು 18 ವರ್ಷಕ್ಕಿಂತ ಮೊದಲು ಖಾತೆಯನ್ನು ನಿರ್ವಹಿಸಲು ಅನುಮತಿ ಇಲ್ಲ.
ಡೀಫಾಲ್ಸ್ ಖಾತೆಯಲ್ಲಿ ಬಡ್ಡಿ ದರ ಬದಲಾಗದು
ವಾರ್ಷಿಕವಾಗಿ ಖಾತೆಯಲ್ಲಿ ಕನಿಷ್ಟ 250 ರೂ. ಈ ಮೊತ್ತ ಠೇವಣಿ ಮಾಡದಿದ್ದಲ್ಲಿ ಖಾತೆಯನ್ನು ಡಿಫಾಲ್ಟ್ ಖಾತೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಹೊಸ ನಿಯಮಗಳ ಪ್ರಕಾರ, ಖಾತೆಯನ್ನು ಮತ್ತೆ ಸಕ್ರಿಯಗೊಳಿಸದಿದ್ದರೆ, ಮುಕ್ತಾಯದವರಗೆ, ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಅನ್ವಯವಾಗುವ ದರದಲ್ಲಿ ಬಡ್ಡಿ ಪಾವತಿ ಮುಂದುವರಿಸಲಾಗುತ್ತದೆ. ಹಿಂದೆ ಡೀಫಾಲ್ಟ್ ಖಾತೆಗಳು ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನ್ವಯವಾಗುವ ದರದಲ್ಲಿ ಬಡ್ತಿ ಗಳಿಸುತ್ತಿದ್ದವು.
ಮಾವು ಉತ್ಪಾದನೆಯಲ್ಲಿ ಶೇ.80ರಷ್ಟು ದಾಖಲೆಯ ಕುಸಿತ ಕಂಡ ಭಾರತ: ಮಾವು ಬೆಳೆಗಾರರಿಗೆ ಸಂಕಷ್ಟ!
PM Kisan 11 ನೇ ಕಂತಿನ ಹಣ ನಿಮ್ಮ ಖಾತೆಗೆ ಇನ್ನೂ ಬಂದಿಲ್ಲವೇ? ಹಾಗಿದ್ದರೆ ಈಗಲೇ ಚೆಕ್ ಮಾಡಿ...
ಈಗ 'ಮೂರನೆ' ಮಗಳ ಖಾತೆಯನೂ ತೆರೆಯಬಹುದು
ಈ ಯೋಜನೆಯಲ್ಲಿ ಮೊದಲು, 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವು ಇಬ್ಬರು ಹೆಣ್ಣುಮಕ್ಕಳ ಖಾತೆಯಲ್ಲಿ ಮಾತ್ರ ಲಭ್ಯವಿತ್ತು. ಈ ಪ್ರಯೋಜನ ಮೂರನೇ ಮಗಳಿಗೆ ಲಭ್ಯವಾಗಲಿಲ್ಲ. ಹೊಸ ನಿಯಮದ ಪ್ರಕಾರ, ಒಂದು ಹೆಣ್ಣು ಮಗುವಿನ ನಂತರ ಇಬ್ಬರು ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಇಬ್ಬರಿಗೂ ಖಾತೆ ತೆರಯಲು ಅವಕಾಶವಿದೆ.
Breaking: ಕೇಂದ್ರ ಸರ್ಕಾರದಿಂದ LPG ಗೆ ನೀಡುತ್ತಿದ್ದ ಸಬ್ಸಿಡಿ ರದ್ದು! ಇನ್ಮುಂದೆ ನಿಮ್ಮ ಖಾತೆಗೆ ಬರಲ್ಲ ಹಣ!
ರೈತರಿಗೆ ಸಿಹಿಸುದ್ದಿ: ಮಾಸಾಂತ್ಯದೊಳಗೆ “ರೈತ ಶಕ್ತಿ ಯೋಜನೆ”ಗೆ ಚಾಲನೆ! ಏನಿದರ ಲಾಭ ಗೊತ್ತೆ?
Share your comments