ರೈತರಿಗೆ ಡಿಸೇಲ್‌ ಖರೀದಿಗೆ ಸರ್ಕಾರ ನೀಡುತ್ತಿದೆ ಸಬ್ಸಿಡಿ..ಖಾತೆಗೆ ನೇರವಾಗಿ ಹಣ ಪಡೆಯಿರಿ

Maltesh
Maltesh
Raitashakti DIesel Subsidy Scheme How to Aplly

ಪ್ರತಿ ಎಕರೆಗೆ ರೂ. 250 ರಂತೆ ಗರಿಷ್ಠ 5 ಎಕರೆಯವರೆಗೆ ಡಿ.ಬಿ.ಟಿ (DBT) ಮೂಲಕ ಡೀಸೆಲ್‌ ಸಹಾಯಧನ ನೀಡುವ “ರೈತಶಕ್ತಿಎಂಬ ಕಾರ್ಯಕ್ರಮವನ್ನು ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿದೆ. ರೈತಶಕ್ತಿ ಯೋಜನೆಯಲ್ಲಿ ಈ ಸಹಾಯಧನ ಲಭ್ಯವಾಗಲಿದ್ದು, ಕೃಷಿ ಇಲಾಖೆ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ. ಬಹು ಮುಖ್ಯವಾಗಿ ಈ ಸೌಲಭ್ಯ ಪಡೆಯಲು ರೈತರು ಫೂಟ್ಸ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಬೇಕಾಗಿದೆ.

ರೈತರ ಹಿಡುವಳಿ ಆಧಾರದ ಮೇಲೆ ಗರಿಷ್ಕ 5 ಎಕರೆಯವರೆಗೆ ಡೀಸೆಲ್‌ ಸಹಾಯಧನ ಒದಗಿಸಲಿದ್ದು, ಫ್ರೂಟ್‌ ಪೋರ್ಟಲ್‌ನಲ್ಲಿ (FRUITS Portal) ನಮೂದಿಸಿರುವ ಹಿಡುವಳಿಯ ಆಧಾರದ ಮೇಲೆ ಸಹಾಯಧನ ವರ್ಗಾವಣೆಯಾಗಲಿದೆ. ಒಂದೊಮ್ಮೆ ಫೂಟ್ಸ್ ಪೋರ್ಟಲ್ ನಲ್ಲಿ ಹೆಸರು ನೋಂದಾವಣೆ ಮಾಡಿಸಿರದಿದ್ದರೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಖಾತೆ, ಪಹಣಿ ವಿವರ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಆಗಸ್ಟ್ 20ರ ಒಳಗೆ ತಮ್ಮ ಹೆಸರು ಸೇರಿಸಬಹುದಾಗಿದೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ತಮ್ಮ ಜಮೀನಿನ ಎಲ್ಲಾ ಸರ್ವೇ ನಂಬರ್‌ಗಳ ವಿಸ್ತೀರ್ಣವನ್ನು ಫೂಟ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಬೇಕು.

ಇದನ್ನೂ ಮಿಸ್‌ ಮಾಡ್ದೆ ಓದಿ: ಹವಾಮಾನ ವರದಿ: ಮತ್ತೇ ಈ 7 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ..!

FRUITS ಪೋರ್ಟಲ್ ನಲ್ಲಿ ನೊಂದಣಿಗೊಂಡ ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಯೋಜನೆಯು ಅರ್ಹತಾಧಾರಿತ ಯೋಜನೆಯಾಗಿರುವುದರಿಂದ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.

ಇದುವರೆಗೆ ಫೂಟ್ ತಂತ್ರಾಂಶದಲ್ಲಿ (FRUITS Portal) ನೋಂದಣಿ ಮಾಡಿಕೊಳ್ಳದ ರೈತರು ಕೂಡಲೇ ನೋಂದಣಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ತಿಳಿಸುತ್ತದೆ.

ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ FRUITS ಪೋರ್ಟಲ್ ನಲ್ಲಿ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಮಾಡಲಾಗುವುದು. FRUITS ಪೋರ್ಟಲ್‌ನಲ್ಲಿ ನಮೂದಿಸಲಾದ ಹಿಡುವಳಿಯ ವಿಸ್ತೀರ್ಣದ ಆಧಾರದ ಮೇಲೆ ರೈತರಿಗೆ ಡೀಸೆಲ್ ಸಹಾಯಧನವನ್ನು ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುವುದು.

FRUITS ತಂತ್ರಾಂಶದಲ್ಲಿ ನೋಂದಾವಣಿಗೊಂಡ ರೈತರು ಹೊಂದಿರುವ ಭೂ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ.250/- ರಂತೆ ಗರಿಷ್ಠ ಐದು ಎಕರೆಗೆ ರೂ.1250/- ರವರೆಗೆ ಡೀಸೆಲ್ ಸಹಾಯಧನವನ್ನು ಒದಗಿಸಲಾಗುವುದು.

ಅರ್ಹ ರೈತರಿಗೆ ಡೀಸೆಲ್‌ ಸಹಾಯಧನದ ಮೊತ್ತವನ್ನು ಸರ್ಕಾರದ DBT ಮೂಲಕ ಆಧಾರದ ಸೀಡೆಡ್ ಬ್ಯಾಂಕ್‌ / ಪೋಸ್ಟ್ ಆಫೀಸ್ ಖಾತೆಗೆ ವರ್ಗಾಯಿಸಲಾಗುವುದು.

ಇದನ್ನೂ ಮಿಸ್‌ ಮಾಡ್ದೆ ಓದಿ: 7 ನೇ ವೇತನ ಆಯೋಗ: ತುಟ್ಟಿಭತ್ಯೆ 4% ರಷ್ಟು ಹೆಚ್ಚಳ ಸಾಧ್ಯತೆ..ಸಂಬಳ ಎಷ್ಟಾಗಲಿದೆ..?

Published On: 25 July 2022, 12:23 PM English Summary: Raitashakti DIesel Subsidy Scheme How to Aplly

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.