ರೈತರೇ ಗಮನಿಸಿ: ಇನ್ನು 7 ದಿನದಲ್ಲಿ ಈ ಮಹತ್ವದ ಕೆಲಸ ಪೂರ್ಣಗೊಳಿಸಿ..ಇಲ್ಲಾಂದ್ರೆ ನಿಮ್ಮ ಖಾತೆಗೆ ಬರಲ್ಲ ಹಣ

Maltesh
Maltesh
Pradhan Mantri Fasal bima Yojana Deadline july 31

ರೈತರು ಮತ್ತು ಅವರ ಕುಟುಂಬಗಳಿಗೆ ನೈಸರ್ಗಿಕ ವಿಕೋಪಗಳಿಂದ ಬೆಳೆ ನಷ್ಟದಿಂದ ರಕ್ಷಣೆ ನೀಡುವುದು ಯೋಜನೆಯ ಉದ್ದೇಶದಿಂದ ಚಾಲ್ತಿಯಲ್ಲಿರುವ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ 'ಬೆಳೆ ವಿಮಾ ಸಪ್ತಾಹ' ಕೊನೆಗೊಳ್ಳಲು ಇನ್ನು 7 ದಿನಗಳು ಮಾತ್ರ ಬಾಕಿ ಇದೆ.

ಇನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ 'ಬೆಳೆ ವಿಮಾ ಸಪ್ತಾಹ', ಮುಂಗಾರು ಹಂಗಾಮಿನಲ್ಲಿ ನೋಂದಣಿಗೆ ಕೊನೆಯ ದಿನಾಂಕ 31 ಜುಲೈ 2022 ಆಗಿದೆ. ಈ ಗಡುವಿನಲ್ಲಿ ರೈತರು ಬೆಳೆ ವಿಮೆಯನ್ನು ಮಾಡಿಸಬೇಕು.. ಇಲ್ಲವಾದಲ್ಲಿ ಅರ್ಹ ರೈತರ ಖಾತೆಗೆ ಬೆಳೆ ವಿಮೆಯ ಮೊತ್ತ ಜಮಾವಣೆ ಆಗೋದಿಲ್ಲ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪ್ರಯೋಜನಗಳು

ನೈಸರ್ಗಿಕ ವಿಕೋಪಗಳಿಂದ ಬೆಳೆಗಳನ್ನು ಕಳೆದುಕೊಂಡ ಯಾವುದೇ ರೈತ ಬೆಳೆ ನಷ್ಟದಿಂದ ಉಂಟಾದ ಎಲ್ಲಾ ನಷ್ಟಗಳಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಪಡೆಯುತ್ತಾನೆ.

ನೈಸರ್ಗಿಕ ವಿಕೋಪಗಳಿಂದಾಗುವ ನಷ್ಟಕ್ಕೆ ಮಾತ್ರ ಪ್ರಯೋಜನಗಳು ಸೀಮಿತವಾಗಿವೆ.

ಪ್ರೀಮಿಯಂ ಮೊತ್ತವನ್ನು ಸರ್ಕಾರಗಳು ಸಹ ಭರಿಸುತ್ತವೆ, ಅದು ರೈತರೊಂದಿಗೆ ರಾಜ್ಯ ಮತ್ತು ಕೇಂದ್ರ. ಈ ಯೋಜನೆಯಿಂದ ರೈತರು ಈಗಾಗಲೇ ಸಾಕಷ್ಟು ಪ್ರಯೋಜನ ಪಡೆದಿದ್ದು, ಕೋಟ್ಯಂತರ ರೈತರು ಇದರ ಲಾಭ ಪಡೆಯುತ್ತಿದ್ದಾರೆ.

ಆಯಾ ತಾಲೂಕಿಗೆ ಸಂಬಂಧಪಟ್ಟ ವಿಮೆ ಮಾಡಿಸುವ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್‌ ಖಾತೆ ಪಾಸ್‌ ಪುಸ್ತಕ, ಆಧಾರ ಕಾರ್ಡ್‌ ನಕಲು ಪತ್ರಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಲಗತ್ತಿಸಬೇಕು.

ಈ ಯೋಜನೆಗೆ ಕೆಲ ಷರತ್ತುಗಳು:

ಯುದ್ಧ ಅಥವಾ ಪರಮಾಣು ವಿಕಿರಣಗಳ ಅಪಾಯದಿಂದಾಗುವ ಬೆಳೆ ಹಾನಿ

ಗಲಭೆಗಳಿಂದಾಗುವ ಬೆಳೆ ಹಾನಿ  

ಕಳ್ಳತನ ಅಥವಾ ಪ್ರಾಣಿಗಳ ಮೇಯುವಿಕೆಯಿಂದಾಗುವ ಬೆಳೆ ಹಾನಿ

PM Kisan: ರೈತರಿಗೆ ಬರೊಬ್ಬರಿ ₹21,924 ಕೋಟಿ ವರ್ಗಾವಣೆ!

ಅರ್ಜಿ ಸಲ್ಲಿಕೆ ಹೇಗೆ?

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ವೆಬ್‌ಸೈಟ್‌ ಲೋಡ್ ಅದ ನಂತರ ರೈತರ ಅರ್ಜಿ ಸಲ್ಲಿಸುವ ವಿಭಾಗಕ್ಕೆ ಹೋಗಿ.

ಅದು ನಿಮ್ಮನ್ನು ಅರ್ಜಿಸಲ್ಲಿಸುವ ಪುಟಕ್ಕೆ ನಿರ್ದೇಶಿಸುತ್ತದೆ. ಮುಂದಿನ ಪುಟದಲ್ಲಿ ಬರುವ ಅಪ್ಲಿಕೇಶನ್ ನಲ್ಲಿ ವಿವರ ತುಂಬಬೇಕು.

ಮೂಲತಃ ಈ ಪುಟದಲ್ಲಿ ತಮ್ಮ ವೈಯುಕ್ತಿಕ ವಿವರಗಳನ್ನು ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಲು ಕೇಳಲಾಗುತ್ತದೆ.

ನಂತರ ಪುಟದ ಕೆಳಭಾಗದಲ್ಲಿರುವ ಉಳಿಸಿ ಹಾಗೂ ಮುಂದುವರಿಯಿರಿ (click and save) ಬಟನ್‌ ಒತ್ತಿ ವಿವರ ನಮೂದಿಸಬೇಕು.

ಜಮೀನಿನ ವಿವರಗಳನ್ನು ಭರ್ತಿ ಮಾಡಿ, ನಿಗದಿತ ಪ್ರೀಮಿಯಂ ಮೊತ್ತ ಪಾವತಿಸಿದ ನಂತರ ನಿಮ್ಮ ಅರ್ಜಿಗಾಗಿ ಒಂದು ಟ್ರಾಕಿಂಗ್ ಸಂಖ್ಯೆ (tracking no.) ಬರುತ್ತದೆ.

ಇದನ್ನು ನಿಮ್ಮ ಅರ್ಜಿಯ ಸ್ಥಿತಿ ಅರಿಯಲು ಉಪಯೋಗಿಸಬಹುದು. ಯಾವುದಾರರೂ ತಪ್ಪುಗಳು ಅಥವಾ ಬದಲಾವಣೆ ಮಾಡಬೇಕಾದ ಸಂದರ್ಭವಿದ್ದರೆ ಅರ್ಜಿಯನ್ನು ನಂತರವೂ ಮಾರ್ಪಡಿಸಬಹುದು.

Published On: 23 July 2022, 04:11 PM English Summary: Pradhan Mantri Fasal bima Yojana Deadline july 31

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.