ಇದಪ್ಪಾ ಸುದ್ದಿ: ರೈತರಿಗೆ ಬರೋಬ್ಬರಿ 10 ಸಾವಿರ ಸೋಲಾರ್‌ ಪಂಪ್‌ಸೆಟ್‌ ನೀಡ್ತಿದೆ ಸರ್ಕಾರ..ನೀವು ಅರ್ಜಿ ಸಲ್ಲಿಸಿ

Maltesh
Maltesh
PM Kusum Component-B Scheme now open in karnataka

PM-KUSUM (Pradhan Mantri Kisan Urja Suraksha evam Uttan Mahaabhiyan), Component-B ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 4424 ಸಂಖ್ಯೆ ಜಾಲಮುಕ್ತ ಸೌರ ಚಾಲಿತ ಕೃಷಿ ಪಂಪ್‌ಸೆಟ್‌ಗಳನ್ನು ಆಳವಡಿಸುವ ಯೋಜನೆಯನ್ನು ಕೆ.ಆರ್.ಇ.ಡಿ.ಎಲ್ ಮೂಲಕ ರಾಜ್ಯ ವ್ಯಾಪ್ತಿಯ ವಿದ್ಯುತ್‌ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ.

ಆನ್‌ಲೈನ್ ಮುಖ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಒದಗಿಸಬೇಕಾದ ವಿವರಗಳನ್ನು ಕೆ.ಆರ್.ಇ.ಡಿ.ಎಲ್ ಅಧಿಕೃತ ವೆಬ್‌ಸೈಟ್‌ ಅನ್ನು ಗಮನಿಸಬಹುದಾಗಿದೆ.

ಜಾಲತಾಣ www.kredi.karnataka.gov.in ನಲ್ಲಿ ತಪ್ಪದೇ ಗಮನಿಸಿ ಅರ್ಜಿ ಸಲ್ಲಿಸುವುದು.

ಪ್ರಮುಖ ಮಾನದಂಡಗಳು :

1) ರೈತರು ಜಮೀನಿನಲ್ಲಿ ಬಾವಿಯನ್ನು ಕೊರೆಸಿ ಸಿದ್ಧವಿರಬೇಕು.

2) ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಮಾತ್ರ ಯೋಜನೆಯು ಅನ್ವಯಿಸುತ್ತದೆ (ಹಾಲಿ ವಿದ್ಯುತ್‌ ಸಂಪರ್ಕವನ್ನು ಹೊಂದಿರುವ ಪಂಪ್‌ಸೆಟ್‌ಗಳು ಅರ್ಹವಿರುವುದಿಲ್ಲ).

3) ಅರ್ಜಿದಾರರು ಒಂದು ಸೌರ ಪಂಪ್‌ಸೆಟ್‌ಗೆ ಮಾತ್ರ ಅರ್ಜಿ ಸಲ್ಲಿಸುವುದು. ಈಗಾಗಲೇ ಇವರ ಅನುದಾನಿತ ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಸೌರ ಪಂಪ್‌ಸೆಟ್ ಪಡೆದಿದ್ದರೆ, ಅಂತಹ ಅರ್ಜಿದಾರರು ಅರ್ಹರಿರುವುದಿಲ್ಲ.

4) ಅರ್ಜಿದಾರರು ಅವರ ವಂತಿಗೆಯನ್ನು ಡಿಡಿ ಮೂಲಕವೆ (MD-KREDL ಹೆಸರಿನಲ್ಲಿ payable at Bengaluru) ಸಲ್ಲಿಸುವುದು, Cheque ಅಥವಾ ಇತರೆ ಆನ್‌ಲೈನ್‌ Payment ಮೂಲಕ ಅರ್ಜಿದಾರರ ವಂತಿಗೆ ಹಣ ಸ್ವೀಕರಿಸಲಾಗುವುದಿಲ್ಲ.

5) ವಿದ್ಯುತ್‌ ಸಂಪರ್ಕವಿಲ್ಲದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಸೌರ ಚಾಲಿತ ಕೃಷಿ ಪಂಪ್‌ಸೆಟ್‌ಗಳನ್ನು ಅಳವಡಿಸಲು ಆದ್ಯತೆ ನೀಡಲಾಗುವುದು.

ರೈತರಿಗೆ ಬೊಂಬಾಟ್‌ ನ್ಯೂಸ್‌: ಕುರಿ, ಮೇಕೆ ಸಾಕಾಣಿಕೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ..ಇಂದೇ ಅರ್ಜಿ ಸಲ್ಲಿಸಿ

6) ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇ.5 ರಷ್ಟು ಮೀಸಲಾತಿ ಒದಗಿಸಲಾಗುತ್ತಿದೆ. ಸಾಮಾನ್ಯ ಹಾಗೂ ಪ.ಜಾ/ಪ.ಪಂ' ವರ್ಗದಲ್ಲಿ ಸೂಚಿಸಲಾಗಿರುವ ವಂತಿಗೆ ಮೊತ್ತವನ್ನು ಆಯಾ ವಿಶೇಷ ಚೇತನ ವರ್ಗದವರು ಅವರ ವಂತಿಗೆಯನ್ನು ಪಾವತಿಸುವುದು,

7) ಕೆ.ಆರ್.ಐ.ಡಿ.ಎಲ್ ಅಧಿಕೃತ ಜಾಲತಾಣ www.kredi.karnataka.gov.in ದಲ್ಲಿ ಮಾತ್ರ ಲಭ್ಯವಾಗುವ ಲಿಂಕ್‌ ಮೂಲಕವೇ ದಿನಾಂಕ: 15.07,2022, ಬೆಳಗ್ಗೆ 10.30ರ ನಂತರ ಆನ್‌ಲೈನ್ ಅರ್ಜಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ: 8095132100 ಮೂಲಕ ಸಂಪರ್ಕಿಸಬಹುದಾಗಿದೆ.

ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಒದಗಿಸಬೇಕಾದ ಅಗತ್ಯ ಮಾಹಿತಿಗಳು:

ಅ) ಭೂ ಮಾಲಿಕತ್ವವುಳ್ಳ ಅರ್ಜಿದಾರರ ಹೆಸರು

ಆ) ವಾಸಸ್ಥಳ ಮತ್ತು ವಿಳಾಸ: ಗ್ರಾಮ, ತಾಲ್ಲೂಕು, ಜಿಲ್ಲೆ

ಇ) ಆಧಾರ್ ಸಂಖ್ಯೆ

ಈ) ದೂರವಾಣಿ ಸಂಖ್ಯೆ

ಉ) ಭೂ ದಾಖಲೆಗಳ ವಿವರಗಳು: ಆರ್.ಟಿ.ಸಿ, ಸರ್ವೆ ನಂ., ಗ್ರಾಮ, ತಾಲೂಕು, ಹೋಬಳಿ, ಗ್ರಾಮಪಂಚಾಯತಿ, ಜಿಲ್ಲೆ

ಊ) ವಂತಿಗೆ ವಿವರ: ಡಿ.ಡಿ. ಸಂಖ್ಯೆ ಹಾಗೂ ದಿನಾಂಕ ( ಕೋಷ್ಟಕದಲ್ಲಿ ನಮೂದಿಸಿದಂತೆ ಸೌರ ಪಂಪ್‌ಸೆಟ್ ಸಾಮರ್ಥ್ಯ ಕ್ಕೆ ಅನುಗುಣವಾಗಿ ಡಿ.ಡಿ ಯನ್ನು MD KREDL ರವರ ಹೆಸರಿಗೆ payable at Bengaluru ಪಡೆಯುವುದು

ಖು) ಅರ್ಜಿದಾರರ ಬ್ಯಾಂಕ್ ಖಾತೆ ವಿವರ: ಅರ್ಜಿದಾರರ ಹೆಸರು, ಬ್ಯಾಂಕ್ ಹೆಸರು, ಬ್ಯಾಂಕ್ ಶಾಖೆ ಹೆಸರು, ಖಾತೆಯ ಸಂಖ್ಯೆ, ಐ.ಎಫ್.ಎಸ್.ಸಿ ಕೋಡ್, ಖಾತೆಯ ಮಾದರಿ

ಎ) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗದವರು ಜಾತಿ ಪ್ರಮಾಣ ಪತ್ರದ ವಿವರಗಳು: ಆರ್.ಡಿ. ಸಂಖ್ಯೆ

ಐ) ರೇಷನ್ ಕಾರ್ಡ್ ವಿವರಗಳು: ಕಾರ್ಡ್ ಸಂಖ್ಯೆ, ಎ.ಪಿ.ಎಲ್/ಬಿ.ಪಿ.ಎಲ್. ಒ) ವಿಶೇಷ ಚೇತನ ಅನ್ವಯಿಸಿದಲ್ಲಿ, Unique Disability ID ಪ್ರತಿ ಅಥವಾ District Disabled Welfare _Officer ರವರಿಂದ ನೀಡಲಾದ Disability Certificate ದಾಖಲೆ ಪ್ರತಿ.

ಇಂತಹ ಹೆಚ್ಚಿನ ಕೃಷಿ ಸಂಬಂಧಿತ ಸುದ್ದಿಗಳು ಹಾಗೂ ಮಾಹಿತಿಗಾಗಿ www.kannada.krishijagran.com ಭೇಟಿ ನೀಡಿ.. ನಿರಂತರ ಸಂಪರ್ಕಕ್ಕಾಗಿ ನಮ್ಮ ವೆಬ್‌ಸೈಟ್‌ ಅನ್ನು ಸಬ್‌ಸ್ಕ್ರೈಬ್‌ ಮಾಡಿ. ಇನ್ನು ನೀವು ಕೃಷಿ ಸಂಬಧಿತ ಲೇಖನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದರೆ ದಯವಿಟ್ಟು ನಮಗೆ kannada@krishijagran.com. ಇಮೇಲ್ ಮಾಡಿ. ನಿಮ್ಮ ಮಾಹಿತಿಯುಕ್ತ ಬರಹಗಳಿಗೆ ನಾವು ವೇದಿಕೆಯೊದಗಿಸುತ್ತೇವೆ.

Published On: 19 July 2022, 11:26 AM English Summary: PM Kusum Component-B Scheme now open in karnataka

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.