ರೈತರಿಗೆ ತಿಂಗಳಿಗೆ 3 ಸಾವಿರ ರೂ ಪೆನ್ಷನ್‌..ಪಡೆಯುವುದು ಹೇಗೆ..?

Maltesh
Maltesh
PM Kisan Maan Dhan Yojana: How to get 3 thousand rupees per month pension for farmers..?

ಪ್ರಧಾನಮಂತ್ರಿ ಕಿಸಾನ್ ಮಾನ್‌ ಧನ್‌ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರ ವೃದ್ಧಾಪ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಗಾಗಿ, ಸರ್ಕಾರ ವಿನ್ಯಾಸಗೊಳಿಸಿದ ಪೆನ್ಷನ್‌ ಯೋಜನೆಯಾಗಿದೆ.  ಈ ಯೋಜನೆಯಲ್ಲಿ  18 ರಿಂದ 40 ವರ್ಷ ವಯಸ್ಸಿನ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಪ್ರಧಾನಮಂತ್ರಿ ಕಿಸಾನ್ ಮಾನ್‌ ಧನ್‌ ಯೋಜನೆಯ ಎಂದರೇನು..?

ಪ್ರಧಾನಮಂತ್ರಿ ಕಿಸಾನ್ ಮಾನ್‌ ಧನ್‌ ಯೋಜನೆಯ ಕುರಿತು ನೋಡುವುದಾದದರೆ ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ. ಈ ಯೋಜನೆಯಲ್ಲಿ ನೋಂದಾಯಿಸಿಕೊಂಡ ಯಾವುದೇ ರೈತರಿಗೆ 60 ವರ್ಷದ ನಂತರ ಮಾಸಿಕ 3 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ. 18 ವರ್ಷದಿಂದ 40 ವರ್ಷದವರೆಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ತುಂಬಿದ ನಂತರ ರೈತರು ತಿಂಗಳಿಗೆ 3000 ರೂ.ವರೆಗೆ ಪಿಂಚಣಿ ಪಡೆಯುತ್ತಾರೆ.

ಪೋಸ್ಟ್‌ ಆಫೀಸ್‌ ಸ್ಕೀಂ: ಮಕ್ಕಳ ಹೆಸರಲ್ಲಿ ಈ ಖಾತೆ ಓಪನ್‌ ಮಾಡಿದ್ರೆ ತಿಂಗಳಿಗೆ ₹2500  ಆದಾಯ

ಈ ಯೋಜನೆಗೆ ಅಗತ್ಯವಿರುವ ದಾಖಲೆಗಳು

ಮೊಬೈಲ್ ಸಂಖ್ಯೆ

ಪಾಸ್‌ಪೋರ್ಟ್ ಗಾತ್ರದ ಫೋಟೋ

ವಯಸ್ಸಿನ ಪ್ರಮಾಣಪತ್ರ

ಆದಾಯ ಪ್ರಮಾಣಪತ್ರ

ಆಧಾರ್ ಕಾರ್ಡ್

ಗುರುತಿನ ಚೀಟಿ

ಬ್ಯಾಂಕ್ ಖಾತೆ ಪಾಸ್‌ಬುಕ್

ಪಿಎಂ ಕಿಸಾನ್‌ ಬಿಗ್‌ ಅಪ್‌ಡೇಟ್‌: 12ನೇ ಕಂತು ಯಾವಾಗ ರಿಲೀಸ್‌ ಆಗುತ್ತೆ..?

ಗಮನಿಸಿಬೇಕಾದ ಅಂಶಗಳು

ಈ ಕಂತುಗಳನ್ನು ಹೆಸರನ್ನು ನೋಂದಾಯಿಸಿಕೊಂಡ ರೈತರು 60 ವರ್ಷ ವಯಸ್ಸಿನವರೆಗೆ ಕಂತನ್ನು ನಿಯಮಿತವಾಗಿ  ಪಾವತಿಸಬೇಕು. ಹಾಗೂ ಅದು 60 ವರ್ಷಗಳ ನಂತರ ಅದು ನಿಲ್ಲುತ್ತದೆ ನಮಂತರ ಪೆನ್ಷನ್‌ ಆರಂಭವಾಗುತ್ತದೆ.

ಪಿಎಂ ಕಿಸಾನ್ ಮಂಧನ್ ಯೋಜನೆ 2022: ಪಿಎಂ ಕಿಸಾನ್ ಮಂಧನ್ ಯೋಜನೆಗೆ ನೋಂದಾಯಿಸುವುದು ಹೇಗೆ

ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿ

ಬಿಗ್‌ನ್ಯೂಸ್‌: ಸರ್ಕಾರದಿಂದ 116 ಕೋಟಿ ರೂ ರಿಲೀಸ್‌..ಇನ್ನೆರಡು ದಿನಗಳಲ್ಲಿ ರೈತರ ಖಾತೆ ಸೇರುತ್ತೆ ಬೆಳೆ ಪರಿಹಾರ

ಆಧಾರ್ ಕಾರ್ಡ್ ಮತ್ತು ಪ್ರತಿಯನ್ನು ಸಲ್ಲಿಸಿ 

2 ಫೋಟೋಗಳು ಮತ್ತು ಬ್ಯಾಂಕ್ ಪಾಸ್ಬುಕ್ ಕೂಡ ಅಗತ್ಯವಿರುತ್ತದೆ

ಈ ಎಲ್ಲಾ ವಿವರಗಳನ್ನು ಸಲ್ಲಿಸಿ ನೀಡಿದ ನಂತರ ರೈತರ ವಿಶಿಷ್ಟ ಪಿಂಚಣಿ ಸಂಖ್ಯೆ ಮತ್ತು ಪಿಂಚಣಿ ಕಾರ್ಡ್ ಅನ್ನು ರಚಿಸಲಾಗುತ್ತದೆ.

ಸೂಚನೆ: ನೋಂದಣಿಗಾಗಿ ರೈತರು ಯಾವುದೇ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಮತ್ತು ಅರ್ಜಿದಾರರು ಉಳಿತಾಯ ಬ್ಯಾಂಕ್ ಖಾತೆ ಅಥವಾ PM ಕಿಸಾನ್ ಖಾತೆಯನ್ನು ಹೊಂದಿರಬೇಕು.

Published On: 14 September 2022, 12:15 PM English Summary: PM Kisan Maan Dhan Yojana: How to get 3 thousand rupees per month pension for farmers..?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.