ರೈತರಿಗೆ ಸಿಹಿಸುದ್ದಿ: ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರ ನೀಡುತ್ತಿದೆ ₹10,000 ಸಬ್ಸಿಡಿ..!

Kalmesh T
Kalmesh T
Millets: 10,000 subsidy will be available from the state government

ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ಸರ್ಕಾರವು ಸಿರಿಧಾನ್ಯ ಬೆಳೆಗಾರರಿಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ.

ಮತ್ತಷ್ಟು ಓದಿರಿ:  ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ಸರ್ಕಾರವು 'ರೈತ ಸಿರಿ ಯೋಜನೆ' ಜಾರಿ ಮಾಡಿದೆ. ಈ ಯೋಜನೆಯಡಿ ಸಿರಿಧಾನ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಿಸಲು ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಅನುದಾನವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ.

ಸಿರಿಧಾನ್ಯ ಬೆಳೆಯುವ ರೈತರಿಗೆ ಸಹಾಯಧನ

ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪ್ರೋತ್ಸಾಹಧನವನ್ನು 2 ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು. ಊದಲು ನವಣೆ, ಹಾರಕ, ಸಾಮೆ ಮತ್ತು ಬರಗು ಸಿರಿಧಾನ್ಯಗಳಿಗೆ ಮಾತ್ರ ಒತ್ತು ನೀಡಲಾಗುವುದು.

ಈ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಿಗಲಿದೆ ಬರೋಬ್ಬರಿ 37,500 ರೂ ಸಬ್ಸಿಡಿ

ಮಿನಿ ಟ್ರ್ಯಾಕ್ಟರ್, ಟಿಲ್ಲರ್ ಖರೀದಿಗೆ ಸಿಗಲಿದೆ ಬರೋಬ್ಬರಿ ಶೇ. 90 ರಷ್ಟು ಸಬ್ಸಿಡಿ..!

ಮೊದಲ ಕಂತಿನ ಪ್ರೋತ್ಸಾಹಧನ 6000 ರೂಪಾಯಿಯನ್ನು ಸಿರಿಧಾನ್ಯ ಬಿತ್ತನೆ ಮಾಡಿದ 30 ದಿನಗಳ ನಂತರ ಬೆಳೆಯನ್ನು ಜಿಪಿಎಸ್‌(GPS) ಆಧಾರಿತ ಫೋಟೋ ಪರಿಶೀಲಿಸಿ ರೈತರ ಖಾತಗೆ ಜಮೆ ಮಾಡಲಾಗುತ್ತದೆ. 

2ನೇ ಕಂತಿನ ಪ್ರೋತ್ಸಾಹಧನ ₹4,000ವನ್ನು ನಂತರದಲ್ಲಿ ಜಮೆ ಮಾಡಲಾಗುವುದು. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ ನೀಡುವುದು.

ಫಲಾನುಭವಿಗಳ ಅರ್ಹತೆ:

ಫಲಾನುಭವಿಯು ರೈತರಾಗಿದ್ದು, ಅವರ ಹೆಸರಲ್ಲಿ ಜಮೀನನ್ನು ಹೊಂದಿರಬೇಕು.

ಜಂಟಿ ಖಾತೆ ಹೊಂದಿದ್ದಲ್ಲಿ, ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು.

ತಂದೆ ಅಥವಾ ತಾಯಿ ಹೆಸರಲ್ಲಿ ಜಮೀನಿದ್ದು, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ಅರ್ಜಿ ಸಲ್ಲಿಸಬೇಕು.

ಮಹಿಳೆಯ ಹೆಸರಲ್ಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಮಾನ್ಯ ಮಾಡಬಾರದು, ಮಹಿಳೆಯ ಹೆಸರಲ್ಲಿಯೇ ಅರ್ಜಿ ಸಲ್ಲಿಸುವುದನ್ನು ಉತ್ತೇಜಿಸಬೇಕು.

ಫಲಾನುಭವಿ ರೈತರು ಸಿರಿಧಾನ್ಯಗಳಾದ ಊದಲು, ನವಣೆ, ಹಾರಕಾ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು ಪ್ರಮುಖ ಬೆಳೆಯಾಗಿ ಬೆಳೆದಿರಬೇಕು.

PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ

ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

* ವಸತಿ ಪ್ರಮಾಣಪತ್ರ, * ಆದಾಯ ಪ್ರಮಾಣಪತ್ರ , * ಭೂ ದಾಖಲೆಗಳು , * ವಿಳಾಸ ಪುರಾವೆ , * ಆಧಾರ್ ಕಾರ್ಡ್, * ಬ್ಯಾಂಕ್ ಖಾತೆ ಪಾಸ್ ಬುಕ್

ರೈತ ಸಿರಿ ಯೋಜನೆ ಅರ್ಜಿ ಪ್ರಕ್ರಿಯೆ

ಸರ್ಕಾರಿ ಅಧಿಕಾರಿಗಳ ಪ್ರಕಾರ, ಅರ್ಹ ಪಲಾನುಭವಿಗಳು ರಾಜ್ಯ ಪೋರ್ಟಲ್‌ನಲ್ಲಿ ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಬೇಕು.

ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು https://raitamitra.karnataka.gov.in/info-2/Raita+Siri/  ನಲ್ಲಿ ಪರಿಶೀಲಿಸಬಹುದು.

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

Published On: 22 May 2022, 03:36 PM English Summary: Millets: 10,000 subsidy will be available from the state government

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.