ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ! Kisan Credit Card ನ ಮೂಲಕ ದೊರೆಯಲಿದೆ ಈ ಸೌಲಭ್ಯ

Kalmesh T
Kalmesh T
Loan up to 3 Lakhs at Low Interest Rate! This facility is available through Kisan Credit Card

ಕಿಸಾನ್ ಕ್ರೆಡಿಟ್ ಕಾರ್ಡ್‌ (Kisan Credit Card)  ಯೋಜನೆಯಡಿ ಅತಿ ಕಡಿಮೆ ಬಡ್ಡಿದರದಲ್ಲಿ ಬೆಳೆ ಸಾಲ ನೀಡಲಾಗುತ್ತದೆ. ಈ ಮೂಲಕ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈ ಸಾಲಗಳಿಗೆ ವಿಧಿಸುವ ಬಡ್ಡಿ ಎಷ್ಟು, ಸರಕಾರದಿಂದ ಎಷ್ಟು ಸಹಾಯಧನ ದೊರೆಯಲಿದೆ ಎಂಬ ಕುರಿತ ವಿವರ ಇಲ್ಲಿದೆ.

Kisan Credit Card ಯೋಜನೆಯಡಿ ರೈತರು ಒಂದು ವರ್ಷದವರೆಗೆ ಅಥವಾ ನಿಗದಿತ ಅವಧಿವರೆಗೆ ವಾರ್ಷಿಕ ಶೇ. 7ರ ದರದಲ್ಲಿ ಸರಳ ಬಡ್ಡಿ ಪಾವತಿಸಬೇಕಾಗುತ್ತದೆ. ಒಂದು ವೇಳೆ ನಿಗದಿತ ಅವಧಿಗೂ ಮೊದಲೇ ನೀವು ಸಾಲ ಮರುಪಾವತಿ ಮಾಡಿದರೆ, ಬಡ್ಡಿದರದಲ್ಲಿ ಶೇ.3ರಷ್ಟು ಕಡಿತವಾಗುತ್ತದೆ. ಅಂದರೆ, ನೀವು ಕೇವಲ ಶೇ. 4ರ ಬಡ್ಡಿ ಪಾವತಿಸಿದಂತಾಗುತ್ತದೆ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ವಿಫಲವಾದರೆ ಕಿಸಾನ್ ಕ್ರೆಡಿಟ್ ಕಾರ್ಡ್ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಬೆಳೆ ಸಾಲಗಳಿಗೆ ಮರುಪಾವತಿ ಅವಧಿಯನ್ನ ನಿರೀಕ್ಷಿತ ಕೊಯ್ಲು ಮತ್ತು ಮಾರುಕಟ್ಟೆ ಅವಧಿಗೆ ಅನುಗುಣವಾಗಿ ನಿಗದಿಪಡಿಸಬಹುದು.

ಇದನ್ನೂ ಓದಿ:

ಕೇಂದ್ರದಿಂದ ಪ್ರತಿ ತಿಂಗಳು ರೈತರಿಗೆ 3000 ರೂ. ಪಿಂಚಣಿ! ಪಿಎಂ ಕಿಸಾನ್ ಮನ್‌ಧನ್‌ ಯೋಜನೆಯಲ್ಲಿದೆ ರೈತರಿಗೆ ಸಹಾಯ

ಮೀನುಗಾರರ ಆದಾಯ ಹೆಚ್ಚಿಸಲು Pm ಮತ್ಸ್ಯ ಸಂಪದ ಯೋಜನೆ! ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಿರಿ!

ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ? (Kisan Credit Card)

ಅಲ್ಪಾವಧಿಯ ಔಪಚಾರಿಕ ಸಾಲ ನೀಡುವ ಸಲುವಾಗಿ ಕೇಂದ್ರ ಸರಕಾರ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆಯನ್ನು 1998 ರಲ್ಲಿ ಪರಿಚಯಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉತ್ತರ ಪ್ರದೇಶದ ಚಿತ್ರಕೂಟಿನಲ್ಲಿ ಪ್ರಧಾನಿ ಕಿಸಾನ್ ಯೋಜನೆ ಅಡಿಯಲ್ಲಿ Kisan Credit Card ಯೋಜನೆಯನ್ನ ಎಲ್ಲಾ ಫಲಾನುಭವಿಗಳಿಗೆ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಈ ಕಾರ್ಯಕ್ರಮದಡಿ 25 ಲಕ್ಷಕ್ಕೂ ಹೆಚ್ಚು ಕಿಸಾನ್‌ ಕ್ರೆಡಿಟ್‌ ಕಾರ್ಡ್ (ಕೆಸಿಸಿ) ಒದಗಿಸಲಾಗಿದ್ದು, ರೈತರಿಗೆ ಕೆಸಿಸಿ ಒದಗಿಸುವ ಕಾರ್ಯವನ್ನು 2 ಸಾವಿರಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳಿಗೆ ವಹಿಸಲಾಗಿದೆ.

333 ರೂ. Deposit ಮಾಡಿ 16 ಲಕ್ಷ ಪಡೆಯಿರಿ! ಇಲ್ಲಿದೆ Bumper ಅವಕಾಶ

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಯಾರು ಅರ್ಹರು?

ಎಲ್ಲ ರೈತರು, ವ್ಯಕ್ತಿಗಳು / ಜಂಟಿ ರೈತರು, ಗುತ್ತಿಗೆ ರೈತರು, ಹತ್ತು ರೈತರು ಒಳಗೊಂಡಿರುವ ಜಂಟಿ ಹೊಣೆಗಾರಿಕೆ ಗುಂಪುಗಳು Kisan Credit Card ಮೂಲಕ ಸಾಲ ಪಡೆಯಬಹುದು. ಇವರು ಒಂದು ಅವಧಿಗೆ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. KCC ಸಾಲ ಪಡೆದ ರೈತರ ಬೆಳೆಗಳಿಗೆ ಬೆಳ ವಿಮೆ ಕೂಡ ಲಭ್ಯವಿರುತ್ತದೆ.

ಅಗತ್ಯ ದಾಖಲೆಗಳು!
ಮತದಾರರ ಗುರುತಿನ ಚೀಟಿ / ಪ್ಯಾನ್ ಕಾರ್ಡ್ / ಪಾಸ್‌ಪೋರ್ಟ್ / ಆಧಾರ್ ಕಾರ್ಡ್ ಚಾಲನಾ ಪರವಾನಗಿ ಇತ್ಯಾದಿ.

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

Good News.. ಡ್ರೋನ್ ಬಳಕೆಗಾಗಿ 477 ಕೀಟನಾಶಕಗಳಿಗೆ ಗ್ರೀನ್ ಸಿಗ್ನಲ್..!

ಕೆಸಿಸಿ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿದಾರರು ಬ್ಯಾಂಕ್ ಅಥವಾ ಕೃಷಿ ಇಲಾಖೆಯ ಹತ್ತಿರದ ಶಾಖೆಗಳನ್ನ ಸಂಪರ್ಕಿಸಬಹುದು. ಗುರುತಿನ ಮತ್ತು ವಿಳಾಸದ ಪುರಾವೆಯೊಂದಿಗೆ ಅರ್ಜಿ ನಮೂನೆಯನ್ನ ಭರ್ತಿ ಮಾಡಿ ಸಲ್ಲಿಸಬೇಕು. ಇದಲ್ಲದೆ ಇ-ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ರೈತರು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.

Pearl-Fish Farming! Profitable Business! ಮಹಿಳೆಯೊಬ್ಬಳು ರೂ 20,00,000 ಕಿಂತ ಹೆಚ್ಚು ಗಾಳಿಸುತ್ತಾಳೆ!

Small Savings ಬಡ್ಡಿ ದರ..ಮಹತ್ವದ ಮಾಹಿತಿ ನೀಡಿದ ಹಣಕಾಸು ಸಚಿವಾಲಯ

Published On: 23 April 2022, 11:01 AM English Summary: Loan up to 3 Lakhs at Low Interest Rate! This facility is available through Kisan Credit Card

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.