ವಿವಿಧ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಯಲು ಸಹಾಯಧನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ

ಸಮಗ್ರ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ಕೊಳವೆ ಬಾವಿ ಕೊರೆಯಲು ಅರ್ಜಿ ಆಹ್ವಾನಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಒಣ (ಖುಷ್ಕಿ) ಜಮೀನಿಗೆ ಕೊಳವೆ ಬಾವಿ ಮೂಲಕ ನೀರಾವರಿ ಸೌಲಭ್ಯ ಒದಗಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸೆಪ್ಟೆಂಬರ್ 9 ರೊಳಗಾಗಿ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಸಲ್ಲಿಸಬೇಕು.

ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಹಾಗೂ ಭೂ ಒಡೆತನ ಯೋಜನೆಯಡಿ ಮಂಜೂರಾತಿ ನೀಡಿರುವ ಒಣ ಭೂಮಿ (ಖುಷ್ಕಿ) ಜಮೀನಿಗೆ ವೈಯಕ್ತಿಕ ಕೊಳವೆ ಬಾವಿಗಳನ್ನು ಕೊರೆಸಿ, ಪಂಪ್ ಸೆಟ್ ಅಳವಡಿಸಿ, ವಿದ್ಯುದ್ಧೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಯೋಜನೆಯಡಿ 6 ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ. 4.50 ಲಕ್ಷಗಳಿದ್ದು ಉಳಿದ 24 ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ. 3.50 ಲಕ್ಷಗಳಿದ್ದು, ಈ ಪೈಕಿ ಸಹಾಯಧನ ಕ್ರಮವಾಗಿ ರೂ. 4.00 ಲಕ್ಷ ಹಾಗೂ ರೂ. 3.00 ಲಕ್ಷ ಹಾಗೂ 50 ಸಾವಿರ ರೂಪಾಯಿ  ಸಾಲವಾಗಿರುತ್ತದೆ. ಕೊಳವೆಬಾವಿಗಳ ವಿದ್ಯುದ್ಧೀಕರಣಕ್ಕಾಗಿ ಘಟಕ ವೆಚ್ಚದ ಪೈಕಿ ಪ್ರತಿ ಕೊಳವೆ ಬಾವಿಗೆ ರೂ. 50 ಸಾವಿರ ರೂಪಾಯಿ ನೇರವಾಗಿ ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗುವುದು.

ಫಲಾನುಭವಿಗಳಿಗೆ ಕಲ್ಪಿಸಲಾಗುವ ಸೌಲಭ್ಯಗಳು

ಫಲಾನುಭವಿಯು ಕನಿಷ್ಟ ಪಕ್ಷ 1-1/2 ಯಿಂದ 5-00 ಎಕರೆ ಒಣ ಭೂಮಿ (ಖುಷ್ಕಿ ಜಮೀನು) ಹೊಂದಿರಬೇಕು. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕನಿಷ್ಟ 1-00 ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಸೌಲಭ್ಯ ಕಲ್ಪಿಸಲಾಗುವುದು. ಕೊಳವೆ ಬಾವಿಯನ್ನುಎಸ್ಕಾಂಗಳ ವತಿಯಿಂದ ವಿದ್ಯುದ್ದೀಕರಣ ಗೊಳಿಸಲಾಗುವುದು. ಘಟಕ ವೆಚ್ಚದ ಪೈಕಿ ರೂ. 0.50 ಲಕ್ಷ ಅವಧಿ ಸಾಲವಾಗಿರುತ್ತದೆ. ಸಾಲದ ಮೊತ್ತವನ್ನು ಶೇ.6ರ ಬಡ್ಡಿ ದರದಲ್ಲಿ 16 ಅರ್ಧ ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು

ಅರ್ಹತೆ:

ಅರ್ಜಿದಾರರು ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ ಮತ್ತು ಸಂಬಂಧಿತ ಜಾತಿಗೆ ಸೇರಿದವರಾಗಿರಬೇಕು. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು 21 ವರ್ಷ ಮೇಲ್ಪಟ್ಟ ವಯೋಮಾನದವರಾಗಿರಬೇಕು. ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿರಬಾರದು. ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿದ್ದಲ್ಲಿ, ಅಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ.

ನಿಯಮಗಳು:

ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ. 1,50,000/- ಹಾಗೂ ನಗರ ಪ್ರದೇಶದಲ್ಲಿ ರೂ.2,00,000/- ಮಿತಿಯೊಳಗಿರಬೇಕು. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅರ್ಜಿ, ಭಾವಚಿತ್ರ, ಜಾತಿ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಆದಾಯ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಆಧಾರ್ ಕಾರ್ಡ್ ಹಾಗೂ  ಬ್ಯಾಂಕ್ ಪಾಸ್ಬುಕ್ ಇರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗಿ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು..

ಅರ್ಜಿಯನ್ನು ಆನ್ಲೈನ್ ಮೂಲಕ ಭರ್ತಿ ಮಾಡಬೇಕು. ಆನ್ಲೈನ್ ಮೂಲಕ್ ಭರ್ತಿ ಮಾಡಲು https://adijambava.online/apl-ganga-kalyana.php ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅರ್ಜಿ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಜಿಲ್ಲೆಯ ಹೆಸರು, ಅರ್ಜಿದಾರನ ಭಾವಚಿತ್ರ, ಹೆಸರು, ಸೇರಿದಂತೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 080-22215222 ಗೆ ಕರೆ ಮಾಡಬಹುದು.

 ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ  ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಡಿಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು https://ksskdc.kar.nic.in/schemes/ ಲಿಂಕ್ ಮೇಲೆ ಕ್ಲಿಕ್ ಮಾಡಿ  ಸೆಪ್ಟೆಂಬರ್ 20 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಮೇಲಿನ ಲಿಂಕ್ ಕ್ಲಿಕ್ ಮಾಡಿದಾಗ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಪೇಜ್ ತೆರೆಯಲ್ಪಡುತ್ತದೆ. ಅಲ್ಲಿ ಅಪ್ಲೈ ಮೇಲೆ ಕ್ಲಿಕ್ ಮಾಡಿ ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

 ಬಂಜಾರಾ ಸಮುದಾಯದ ರೈತರಿಂದ online  ಮೂಲಕ  ಅರ್ಜಿ ಆಹ್ವಾನ

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವಯಿತಿಂದ 2021-22ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ ಕೊರೆಯಲು ಪರಿಶಿಷ್ಚ ಜಾತಿಯ ಬಂಜಾರ/ ಲಂಬಾಣಿ ಸಮುದಾಯದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಯಲು ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ರೈತರು ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಕೋರಲಾಗಿದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಯಸುವ ಆಸಕ್ತ ರೈತರುhttp://ktdcl.in/web4/online/onlineapp.php ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತಾಂಡಾ ಅಭಿವೃದ್ಧಿ ನಿಗಮದ ಪೇಜ್ ಓಪನ್ ಆಗುತ್ತದೆ ಅಲ್ಲಿ ಗಂಗಾ ಕಲ್ಯಾಣ ಯೋಜನೆ ಮೇಲೆ ಕ್ಲಿಕ್ ಮಾಡಬೇಕು. ಆಗ ಗಂಗಾ ಕಲ್ಯಾಣ ಯೋಜನೆ ಪೇಜ್ ತೆರೆಯಲ್ಪಡುತ್ತದೆ.ಅಥವಾ http://ktdcl.in/web4/ganga.php  ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಗಂಗಾ ಕಲ್ಯಾಣ ಪೇಜ್ ಓಪನ್ ಆಗುತ್ತದೆ. ಅಲ್ಲಿ ಎಲ್ಲಾ ಮಾಹಿತಿ ನೀಡಲಾಗಿರುತ್ತದೆ. ಎಲ್ಲಾ ಮಾಹಿತಿಗಳನ್ನು ಓದಿಕೊಳ್ಳಬೇಕು.  ಹೆಸರು, ತಂದೆಯ ಹೆಸರು, ಮೊಬೈಲ್ ನಂಬರ್, ವಿದ್ಯಾರ್ಹತೆ, ಪೂರ್ಣ ವಿಳಾಸ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ,  ಸೇರಿದಂತೆ ಇನ್ನಿತರ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು.

Published On: 08 September 2021, 02:29 PM English Summary: Ganga kalayan scheme subsidy to farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.