ಒಣ ದ್ರಾಕ್ಷಿ ಎಂದರೆ ಮಕ್ಕಳಿಗೆ ಪಂಚಪ್ರಾಣ ಎನ್ನಬಹುದು. ಯಾವುದೇ ಕೇಕ್ ಅಥವಾ ಬೇರೆ ತಿಂಡಿಗಳಲ್ಲಿ ಇರುವಂತಹ ಒಣ ದ್ರಾಕ್ಷಿಯನ್ನು ಮಕ್ಕಳು ಮೊದಲು ಹೆಕ್ಕಿಕೊಂಡು ತಿನ್ನುವರು. ದ್ರಾಕ್ಷಿಗಳನ್ನು ಒಣಗಿಸಿ ತಯಾರಿಸುವ ಒಣದ್ರಾಕ್ಷಿಯು ನೈಸರ್ಗಿಕವಾಗಿ ತುಂಬಾ ಸಿಹಿ ಹೊಂದಿರುತ್ತದೆ. ಈ ಒಣ ದ್ರಾಕ್ಷಿಯಿಂದ ಕೇಕ್ ಹೇಗೆ ತಯಾರಿಸಬೇಕೆಂಬುದರ ಬಗ್ಗೆ ಇಲ್ಲಿ ತಿಳಿಸುತ್ತಿದ್ದೇನೆ.
ಬೇಕಾಗುವ ಪದಾರ್ಥಗಳು:
ಮೈದಾ ಹಿಟ್ಟು 450 ಗ್ರಾಂ
ಬೇಕಿಂಗ ಪಾವಡರ್ 1 ಚಮಚ
ಬೇಕಿಂಗ್ ಸೋಡಾ 1 ಚಮಚ
ಬೆಣ್ಣೆ 175 ಗ್ರಾಂ
ಒಣದ್ರಾಕ್ಷಿ 175 ಗ್ರಾಂ
ಸ್ವಲ್ಪಡ್ರೈ ಫ್ರುಟ್ಸ್
ಮೊಸರು ಎರಡು ಚಮಚ
200 ಗ್ರಾಂ ಸಕ್ಕರೆ
ಸ್ವಲ್ಪ ಹಾಲು
ಮಾಡುವ ವಿಧಾನ:
ಮೈದಾ ಹಿಟ್ಟಿಗೆ ಬೆಣ್ಣೆ ಸೇರಿಸಿ ಕಲಸಿ. ಬೇಕಿಂಗ್ ಸೋಡಾ, ಬೇಕಿಂಗ್ ಪಾವಡರ್, ಒಣದ್ರಾಕ್ಷಿ, ಡ್ರೈ ಫ್ರುಟ್ಸ್, ಸಕ್ಕರೆ ಮೊಸರು ಎಲ್ಲ ಹಾಕಿ ಕಲಸಿ.
ಹಾಲನ್ನು ಸೇರಿಸಿ ಚೆನ್ನಾಗಿ ಕಲಸಿ. ಹೀಗೆ ತಯಾರಾದ ಪೇಸ್ಟನ್ನು ಪಾತ್ರೆಗೆ ಹಾಕಿ ಓವನ್ನಲ್ಲಿ ಒಂದುವರೆ ಗಂಟೆ ಕಾಲ ಗಟ್ಟಿಯಾಗುವವರೆಗೆ ಬೇಯಿಸಿ.
ನಂತರ ಓವನ್ಆಫ್ ಮಾಡಿ ಕೇಕನ್ನು ತೆಗೆದು ಕಟ್ ಮಾಡಿ ಸರ್ವ್ ಮಾಡಿ.
ಲೇಖಕರು: ಶುಗಪ್ತಾ ಅ ಶೇಖ
Share your comments