ಪಪ್ಪಾಯಿ ಬಹುಪಯೋಗಿ ಹಣ್ಣು. ಪಪ್ಪಾಯಿಯನ್ನು ಹಾಗೇ ತಿನ್ನಬಹುದು. ಪ್ರೂಟ್ ಸಲಾಡ್‌ಗಳಲ್ಲಿ ಬಳಸಬಹುದಲ್ಲದೆ ವಿಧ ವಿಧವಾದ ಆಹಾರ ಪದಾರ್ಥಗಳಲ್ಲಿ ಬಳಸಬಹುದು. ಪಪ್ಪಾಯಿ ಕಾಯಿಯನ್ನು ತರಕಾರಿಯಂತೆ ಕೂಡ ಬಳಸುತ್ತಾರೆ. ಅದರ ಹಸಿರು ಸಿಪ್ಪೆ ಗೀರಿದಾಗ ಬಿಳಿಯ ಬಣ್ಣದ ರಸವೊಂದು ಸ್ರವಿಸುತ್ತದೆ. ಇದನ್ನು ಸಂಗ್ರಹಿಸಿ ಸಂಸ್ಕರಿಸಿದಾಗ ‘ಪೆಪೇನ್ ‘ ಎಂಬ ಕಿಣ್ವ ದೊರೆಯುತ್ತದೆ. ಇದಕ್ಕೆ ದೇಶ ವಿದೇಶಗಳಲ್ಲಿ ಬೇಡಿಕೆ ಇದೆ. ಅನೇಕ ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ.
ಇದರ ಬೀಜದಲ್ಲಿ ಗರ್ಭನಿರೋಧಕ ಔಷಧಿ ಗುಣ ಹೊಂದಿದ್ದು ತಿನ್ನಲು ಯೋಗ್ಯವಾಗಿದೆ. ಎಲೆಯೂ ಸಹ ತರಕಾರಿ ರೂಪದಲ್ಲಿ ಉಪಯೋಗಿಸುತ್ತಿದ್ದು, ವೆಸ್ಟ್ ಇಂಡೀಸ್ ದೇಶದವರು ಇದರ ಎಲೆಯನ್ನು ಬೇಯಿಸಿ ಪಾಲಕ್ ಸೊಪ್ಪಿನ ಹಾಗೇ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ. ಮನೆಯ ಹಿತ್ತಲಲ್ಲಿ ಒಂದು ಮರವಿದ್ದರೆ ಧಾರಳ ಪಪ್ಪಾಯಿ ಲಭ್ಯ.
ಪಪ್ಪಾಯಿ ಮೌಲ್ಯವರ್ಧನೆ ಒಂದು ಉದ್ದಿಮೆಯಾಗಿ ಬೆಳೆದಿದೆ. ಪಪ್ಪಾಯಿ ಜ್ಯೂಸ್, ಕ್ಯಾಂಡಿ, ಜೆಲ್ಲಿ, ಜಾಮ್, ಟೂಟಿಫ್ರೂಟಿ, ಸಲಾಡ್ ಮುಂತಾದವುಗಳನ್ನು ಮಾಡಬಹುದು. ಇದಲ್ಲದೆ ಇದರಿಂದ ಬರ್ಫಿ, ಉಪ್ಪಿನಕಾಯಿ, ಸೀಕರಣೆ, ಚಟ್ನಿ, ಬೀರ್, ಮುಂತಾದವು ಮಾಡಬಹುದು.
ಪಪ್ಪಾಯಿ ಜ್ಯೂಸ್ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು: ಪಪ್ಪಾಯಿ ಹಣ್ಣು, ಸಕ್ಕರೆ, ಏಲಕ್ಕಿ ಪುಡಿ.
ಮಾಡುವ ವಿಧಾನ : ಪಪ್ಪಾಯಿಯನ್ನು ಚೆನ್ನಾಗಿ ತೊಳೆದು ತೊಟ್ಟಿನ ಭಾಗ ಕತ್ತರಿಸಿ ತೆಗೆಯಿರಿ. ಉಳಿದ ಹಣ್ಣನ್ನು ಸಿಪ್ಪೆ, ಬೀಜಗಳನ್ನು ಬೇರ್ಪಡಿಸಿ ಸಣ್ಣ ಹೋಳುಗಳಾಗಿ ಕತ್ತರಿಸಿ ಮಿಕ್ಸಿಗೆ ಹಾಕಬೇಕು. ಬಳಿಕ ಸಕ್ಕರೆಪುಡಿ, ನಿಂಬೆರಸ ಬೇರಿಸಿ ಸೇವಿಸಬೇಕು.
ಪಪ್ಪಾಯಿ ಹಲ್ವ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು : ಪಪ್ಪಾಯಿ ಹಣ್ಣು, ಸಕ್ಕರೆ, ಅರ್ಧಕಪ್ ತುಪ್ಪ, ಏಲಕ್ಕಿ ಪುಡಿ, ಎಸೆನ್ಸ್.
ಮಾಡುವ ವಿಧಾನ : ಪಪ್ಪಾಯಿ ಹಣ್ಣನ್ನು ಸಿಪ್ಪೆ ತೆಗೆದಿಟ್ಟುಕೊಳ್ಳಬೇಕು. ಸಕ್ಕರೆಯನ್ನು ದಪ್ಪ ತಳದ ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಒಲೆಯ ಮೇಲಿಡಬೇಕು. ಸಕ್ಕರೆ ಪಾಕ ಗಟ್ಟಿಯಾದಾಗ ಪಪ್ಪಾಯಿ ಹಣ್ಣನ್ನು ಹಾಕಿ ಮುಗಚಬೇಕು.
ನೀರಿ ಅರಿ ಗಟ್ಟಿಯಾದಾಗ ತುಪ್ಪ ಹಾಕಬೇಕು. ತಳಬಿಟ್ಟು ಬಂದಾಗ ತುಪ್ಪ ಸವರಿನ ತಟ್ಟೆಯಲ್ಲಿ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ.
ಟ್ಯೂಟಿಫ್ರೂಟಿ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು : ಚೆನ್ನಾಗಿ ಬಲಿತ ಪರಂಗಿ/ ಕಾಯಿ ಪಪ್ಪಾಯ-1 ಬಟ್ಟಲು, ಸಕ್ಕರೆ – 1 1/2 ಬಟ್ಟಲು, ಸಿಟ್ರಿಕ್ ಆಮ್ಲದ ಹರಳುಗಳು- 2 ಚಿಟಿಕೆ, ನೀರು - 1/2 ಬಟ್ಟಲು.
ಮಾಡುವ ವಿಧಾನ : ಪರಂಗಿ ಅಥವಾ ಕಾಯಿ ಪಪ್ಪಾಯಿಯನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ, ಶುದ್ಧ ಬಟ್ಟೆಯಲ್ಲಿ ಕಟ್ಟಿ ಕುದಿಯುವ ನೀರಿನಲ್ಲಿ 10 ನಿಮಿಷ ಅದ್ದಿ ತೆಗೆದು ನಂತರ ತಣ್ಣನೆಯ ನೀರಿನಲ್ಲಿ ಮುಳಗಿಸಿ ತೆಗೆದಿಟ್ಟುಕೊಳ್ಳಿ.
1/2 ಲೀಟರ್ ನೀರಿಗೆ ಸಕ್ಕರೆಯನ್ನು ಹಾಕಿ ಕುದಿಸಿ ಪಾಕವನ್ನು ಸೋಸಿಕೊಂಡು ಬಣ್ಣವನ್ನು ಹಾಕಿ ಕುದಿಸಿ ಪಾಕವನ್ನು ಸೋಸಿಕೊಂಡು ಬಣ್ಣವನ್ನು ಹಾಕಿ.
ಪಪ್ಪಾಯದ ತುಂಡುಗಳನ್ನು 24 ಗಂಟೆಗಳ ಕಾಲ ಪಾಕದಲ್ಲಿ ನೆನೆಸಿ ಮಾರನೆ ದಿನ ತುಂಡುಗಳನ್ನು ಪಾಕದಿಂದ ಪ್ರತ್ಯೇಕಿಸಿ ನಂತರ ಪಾಕವನ್ನು 15-20 ನಿಮಿಷ ಕುದಿಸಿ.
ಪಪ್ಪಾಯದ ತುಂಡುಗಳನ್ನು ಪಾಕಕ್ಕೆ ಮತ್ತೆ ಸೇರಿಸಿ 24 ಗಂಟೆಗಳ ಕಾಲ ನೆನೆಸಿ. ಮರುದಿನವೂ ಇದೇ ರೀತಿ ಮಾಡಿ. ನಾಲ್ಕನೇ ದಿನಕ್ಕೆ ಸಿಟ್ರಿಕ್ ಆಮ್ಲ ಹಾಕಿ ಒಂದು ಎಳೆಯ ಪಾಕ ಬರುವಷ್ಟು ಕುದಿಸಿ.
ನಂತರ ತುಂಡುಗಳನ್ನು ಪುನಃ ಪ್ರತ್ಯೇಕಿಸಿ ಒಣಗಿಸಬೇಕು. ಗಾಳಿಯಾಡದ ಧಾರಕಗಳಲ್ಲಿ ಸಂಗ್ರಹಿಸಿಡಬೇಕು. ಇದನ್ನು ಸಿಹಿ ತಿಂಡಿಗಳಲ್ಲಿ, ಪಾಯಸಗಳಲ್ಲಿ ಮತ್ತು ಫ್ರೂಟ್ ಸಲಾಡ್‌ಗಳಲ್ಲಿ ಅಲಂಕಾರಕ್ಕಾಗಿ ಉಪಯೋಗಿಸಬಹುದು. ಬೇಕರಿಗಳಿಗೆ ಒದಗಿಸಿ ಆದಾಯವನ್ನು ಗಳಿಸಬಹುದು.
Share your comments