1. ಪಶುಸಂಗೋಪನೆ

Ornamental fish farming: ಉತ್ಸಾಹ ಹಾಗೂ ಉದ್ಯೋಗಕ್ಕಾಗಿ ಅಲಂಕಾರಿಕ ಮೀನು ಸಾಕಾಣಿಕೆ

Kalmesh T
Kalmesh T
Ornamental fish farming for hobby and occupation

ಮನೆಯ ಅಂದದ ಜೊತೆಗೆ ಉತ್ತಮ ಉದ್ಯಮವನ್ನೂ ಮಾಡಲು ಅನುಕೂಲಕರವಾದದ್ದು ಈ ಅಲಂಕಾರಿಕ ಮೀನು ಸಾಕಾಣಿಕೆ. ಇಲ್ಲಿದೆ ಈ ಕುರಿತಾದ ಲೇಖನ...

Snake Farming: ಹಾವು ಸಾಕಣೆ ಮಾಡಿ 100 ಕೋಟಿ ಸಂಪಾದನೆ ಮಾಡುತ್ತಿರುವ ಗ್ರಾಮ! ಎಲ್ಲಿ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳ ಸಮೂಹಕ್ಕೆ ಅಲಂಕಾರಿಕ ಮೀನುಗಳ ಸಾಕಾಣಿಕೆ ಕೂಡ ಜನಪ್ರೀಯಗೊಳ್ಳುತ್ತಿದೆ. ಇದಕ್ಕೆ ಕಾರಣಗಳೆಂದರೆ ಮೀನುಗಳು ಇತರೆ ಪ್ರಾಣಿಗಳಂತೆ ಬೊಗಳುವದಾಗಲಿ ಅಥವಾ ಕಿರಿಚುವದು ಇಂತಹ ಯಾವುದೇ ರೀತಿಯ ಶಬ್ಬವನ್ನುಂಟು ಮಾಡುವದಿಲ್ಲ.

ನಾಯಿ, ಬೆಕ್ಕುಗಳಿಗೆ ಹೆಚ್ಚಿನ ಸ್ಥಳ ಬೇಕಾಗುತ್ತದೆ ಜೊತೆಗೆ ಗಲೀಜು ಕೂಡ ಮಾಡುತ್ತವೆ. ಇತರೇ ಪ್ರಾಣಿಗಳನ್ನು ಹೋಲಿಸಿದರೆ ಅಲಂಕಾರಿಕ ಮೀನು ಸಾಕಾಣಿಕೆಗೆ ಅತೀ ಕಡಿಮೆ ಖರ್ಚಾಗುತ್ತದೆ.

ಹವ್ಯಾಸಗಳಲ್ಲಿ ಫೋಟೋಗ್ರಫಿ ನಂತರ ಅಲಂಕಾರಿಕ ಮೀನುಗಳನ್ನು ಸಾಕುವುದು ಎರಡನೇ ಅತೀ ದೊಡ್ಡ ಹವ್ಯಾಸವೆಂದು ಹೇಳಲಾಗುತ್ತಿದೆ.

ಕೆಲ ಅಧ್ಯಯನಗಳ ಪ್ರಕಾರ ಅಲಂಕಾರಿಕ ಮೀನು ಸಾಕಾಣಿಕೆಯಿಂದ ಮನುಷ್ಯನ ಮನಸ್ಸು ಹಾಗೂ ಆರೋಗ್ಯದ ಮೇಲೆ ಅನೇಕ ಲಾಭದಾಯಕ ಪರಿಣಾಮಗಳಿವೆ.

ಅವುಗಳಲ್ಲಿ ಪ್ರಮುಖವಾದವುಗಳೆಂದರೆ;

  1. ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಮನೆಯಲ್ಲಿ ಅಥವಾ ಕೆಲಸದ ಕಛೇರಿಗಳಲ್ಲಿ ಇರುವ ಅಲಂಕಾರಿಕ ಮೀನಿನ ಟ್ಯಾಂಕ್‌ಗಳು ಇದ್ದಲ್ಲಿ ಅವು ಮನೆಯಲ್ಲಿ ಶಾಂತಿ ಹಾಗೂ ಕಛೇರಿಗಳಲ್ಲಿನ ಕೆಲಸದ ಒತ್ತಡವನ್ನು ಕಡಿಮೆಗೊಳಿಸಿ ಮನಸ್ಸಿಗೆ ಮುದ ನೀಡುತ್ತವೆ.

  1. ಸುಗಮವಾದ ರಕ್ತ ಸಂಚಾರ ಹಾಗೂ ರಕ್ತದ ಪರಿಚಲನೆಯನ್ನು ಮಾಡುತ್ತದೆ

ಫಿಶ್ ಟ್ಯಾಂಕ್‌ಗಳಲ್ಲಿನ ಕೇವಲ ನೀರು ಹಾಗೂ ಕಲ್ಲುಗಳನ್ನು ಗಮನಿಸುತ್ತಿದ್ದರೆ ಅದು ಸುಮಾರು 3% ರಷ್ಟು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಅದೆ ರೀತಿ ಮೀನುಗಳಿದ್ದು ಅವುಗಳ ಚಲನೆಯನ್ನು ಗಮನಿಸಿದಾಗ ಸುಮಾರು 7% ರಷ್ಟು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ.

  1. ಪರಿಪೂರ್ಣವಾದ ನಿದ್ದೆ ಮಾಡಬಹುದು

ಬೆಡ್‌ ರೂಮ್‌ಗಳಲ್ಲಿ ಅಥವಾ ನಮ್ಮ ಹಾಸಿಗೆ ಹತ್ತಿರ ಫಿಶ್ ಟ್ಯಾಂಕ್‌ಗಳಿರುವುದರಿಂದ ಸಕಾರಾತ್ಮಕ ಯೋಚನೆಗಳು ಹೆಚ್ಚಾಗಿ ನಕಾರಾತ್ಮಕ ಯೋಚನೆಗಳು ದೂರವಾಗುತ್ತವೆ.

ಇದರಿಂದ ಪರಿಪೂರ್ಣವಾದ ನಿದ್ದೆ ಮಾಡಬಹುದು. ಒಂದು ವೇಳೆ ಬೆಡ್‌ ರೂಮ್‌ಗಳಲ್ಲಿ ನಿಗದಿತ ಸ್ಥಳಾವಕಾಶ ಇಲ್ಲದಿದ್ದರೆ, ಮೀನುಗಳು ಓಡಾಡುವ ವಿಡಿಯೋಗಳನ್ನು ನೋಡುವುದರಿಂದ ಕೂಡ ನಿದ್ದೆ ಸರಾಗವಾಗಿ ಬರುತ್ತದೆ.

  1. ಚಿಂತೆ ಮತ್ತು ನೋವನ್ನು ಕಡಿಮೆಗೊಳಿಸುತ್ತದೆ

ನಾವು ಗಮನಿಸುತ್ತಿರುವ ಹಾಗೆ ಅನೇಕ ಆಸ್ಪತ್ರೆಗಳಲ್ಲಿ ಫಿಶ್ ಟ್ಯಾಂಕ್‌ಗಳನ್ನು ಕೇವಲ ಅಲಂಕಾರಕ್ಕಾಗಿ ಸಾಕಿರುವುದಿಲ್ಲ. ಈ ಅಲಂಕಾರಿಕ ಮೀನುಗಳನ್ನು ನೋಡುವದರಿಂದ ರೋಗಿಗಳು ಅನುಭವಿಸುತ್ತಿರುವ ನೋವು ಎಷ್ಟೋ ಮಟ್ಟಿಗೆ ಕಡಿಮೆ ಆಗುತ್ತದೆ.

ಇದಲ್ಲದೇ ಮಾನಸಿಕವಾಗಿ ಬಳಲುತ್ತಿರುವ ರೋಗಿಗಳ ಮನಸ್ಸನ್ನು ಆಕರ್ಷಿಸಿ ಅವರ ಮನಸ್ಸಿಗೆ ಮುದ ನೀಡುತ್ತವೆ.

  1. ತುಂಟುತನ ಕಡಿಮೆ ಮಾಡುತ್ತದೆ

ಅತಿಯಾದ ತುಂಟುತನ ಮಾಡುವ ಮಕ್ಕಳನ್ನು ಆಕರ್ಷಿಸಿ ಅವರ ತುಂಟುತನ ಕಡಿಮೆ ಮಾಡಿ ಮಕ್ಕಳು ಸಮಾಧಾನವಾಗಿ ನಿದ್ರಿಸುವಂತೆ ಮಾಡುತ್ತದೆ.

  1. ವರ್ತನೆಯಲ್ಲಿ ಸುಧಾರಣೆ

ಅಲ್ಜಮೇರ್’ಸ ರೋಗಗ್ರಸ್ಥರು ಈ ಮೀನುಗಳ ಓಡಾಟವನ್ನು ಗಮನಿಸಿದಾಗ ಅವರ ವರ್ತನೆಯಲ್ಲಿ ಸುಧಾರಣೆ ಕಾಣಬಹುದಾಗಿದೆ.

  1. ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಮನೆಯಲ್ಲಿ ಅಥವಾ ಕಛೇರಿಯಲ್ಲಿ ನಾವು ಅಲಂಕಾರಿಕ ಮೀನುಗಳನ್ನು ಗಮನಿಸಿದಾಗ ನಮ್ಮ ಮನಸ್ಸು ಶಾಂತವಾಗಿ ಅನೇಕ ಕ್ರಿಯಾತ್ಮಕ ಯೋಚನೆಗಳು ಬರುವುದರಿಂದ ಕೆಲಸದ ಸಾಮರ್ಥ್ಯ ಹೆಚ್ಚಾಗುತ್ತದೆ.

ಅಲಂಕಾರಿಕ ಮೀನುಗಳಿಗೆ ಅತಿ ಹೆಚ್ಚು ಬೇಡಿಕೆ ಇರುವುದರಿಂದ ಆ ಬೇಡಿಕೆಯನ್ನು ಪೂರೈಸಲು ಅಲಂಕಾರಿಕ ಮೀನಿನ ಉತ್ಪಾದನೆಯೂ ಕೂಡ ಹೆಚ್ಚಾಗಬೇಕಿದೆ. ಈ ಅವಶ್ಯಕತೆ ಅನೇಕ ಯುವಕರಿಗೆ ಹಾಗೂ ಗ್ರಾಮೀಣ ಮಹಿಳೆಯರಿಗೆ ಉದ್ಯೋಗದ ಮೂಲ ಕೂಡ ಆಗುತ್ತದೆ.

ಇದರಿಂದ ಮಹಿಳೆಯರು ಹಾಗೂ ಯುವಕರು ಸ್ವಾವಲಂಬಿಯಾಗುವದಲ್ಲದೇ ನಿರುದ್ಯೋಗ ಸಮಸ್ಯೆಗೆ ಇನ್ನೊಂದು ಪರಿಹಾರ ಒದಗಿಸಿದಂತಾಗುತ್ತದೆ.

Published On: 30 March 2023, 02:13 PM English Summary: Ornamental fish farming for hobby and occupation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.