1. ಪಶುಸಂಗೋಪನೆ

ಕುರಿ, ಕೋಳಿ ಸಾಕಾಣಿಕೆ ಘಟಕ ಸ್ಥಾಪಿಸಲು ಅರ್ಜಿ ಅಹ್ವಾನ! ಸಬ್ಸಿಡಿ ಕೂಡ ಲಭ್ಯ..

Kalmesh T
Kalmesh T
Invitation for application for establishment of sheep and chicken breeding unit!

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಕುರಿ, ಕೋಳಿ ಸಾಕಾಣಿಕೆ ಘಟಕ ಸ್ಥಾಪಿಸಲು ಅರ್ಜಿ ಅಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿರಿ: ರೈತರಿಗೆ ಗುಡ್‌ನ್ಯೂಸ್‌: ರೈತರಿಂದ ಗೋಮೂತ್ರ, ಸಗಣಿ ಖರೀದಿಸಲು ಮುಂದಾದ ಸರ್ಕಾರ! ಬೆಲೆ ಎಷ್ಟು ಗೊತ್ತೆ?

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಉದ್ಯಮಶೀಲತೆ ಅಭಿವೃದ್ದಿ ಕಾರ್ಯಕ್ರಮಕ್ಕಾಗಿ ಕೇಂದ್ರ ಸರ್ಕಾರದ ವತಿಯಿಂದ 2021-22ನೇ ಸದರಿ ಯೋಜನೆಯ ಮಾರ್ಗಸೂಚಿಯನ್ವಯ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ,

ಬೆಂಗಳೂರು ಇಲ್ಲಿಂದ ಅಸಕ್ತ ವ್ಯಕ್ತಿಗಳು, ರೈತ ಉತ್ಪಾದಕ ಸಂಸ್ಥೆಗಳು Joint liabilities groups ಸ್ವ-ಸಹಾಯ ಸಂಘಗಳು, Section (8) ತಡಿ ನೋಂದಾಯಿತಿ ಕಂಪನಿಗಳಿಂದ ಈ ಕೆಳಕಂಡ ಉದ್ಯಮಶೀಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಉಡುಗೊರೆ; ಈ ಯೋಜನೆಯಡಿ ದೊರೆಯಲಿದೆ ₹1.50 ಲಕ್ಷ! ಯಾರು ಅರ್ಹರು ಗೊತ್ತೆ?

  • ಗ್ರಾಮೀಣ ಕೋಳಿ ಸಾಕಾಣಿಕ ವಿಧಾನದಲ್ಲಿ 1000 ಕಡಿಮೆ ವಚ್ಚದ ಕೋಳಿ ತಳಿಗಳ ಮಾತೃ ಕೋಳಿಗಳ ಫಾರಂ ಸ್ಥಾಪನ, ಹ್ಯಾಚರಿ, ಮಾತೃಕೋಳಿಗಳ ಮರಿಗಳ ಬ್ರೂಡಿಂಗ್ ಮತ್ತು ಸಾಕಾಣಿಕಾ ಘಟಕ ಸ್ಥಾಪನೆ.
  • 500 ಹೆಣ್ಣು, 25 ಗಂಡು ಕುರಿ/ಮೇಕೆ ತಳಿ ಸಂವರ್ಧನಾ ಘಟಕವನ್ನು ಸ್ಥಾಪಿಸಿ ಕುರಿ/ಮೇಕೆ ಮರಿಗಳ ಉತ್ಪಾದನನೆ.
  • 100 ಹಣ್ಣು, 10 ಗಂಡು ಹಂದಿಗಳ ತಳಿ ಸಂವರ್ಧನಾ ಘಟಕ ಆರಂಭಿಸಿ ಹಂದಿ ಮರಿಗಳ ಉತ್ಪಾದನೆ ಮತ್ತು ಕೊಬ್ಬಿಸುವಿಕೆ.
  • ಮೇವು ಬೆಲ್ಲ/ರಸ ಮೇವು ಘಟಕ ಹಾಗೂ ಟಿ.ಎಂ.ಆರ್. ಘಟಕಗಳನ್ನು ಸ್ಥಾಪಿಸಲು ಉದ್ಯಮಶೀಲರನ್ನು ಪ್ರೋತ್ಸಾಹಿಸಿ ಪಶು ಆಹಾರ ಮತ್ತು ಮೇವಿನ ಉತ್ಪಾದನೆಯನ್ನು ಉತ್ತೇಜಿಸುವುದು.
  • ಆಸಕ್ತಿಯ ಅಭಿವ್ಯಕ್ತಿಗಳನ್ನು ಪರಿಶೀಲಿಸಿ, ಮೌಲ್ಯಮಾಪನ ಮಾಡಿ ಅರ್ಹತೆಗೆ ಅನುಗುಣವಾಗಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಲಾಗುವುದು. ಅನುದಾನದ ಲಭ್ಯತೆಗೆ ಅನುಗುಣವಾಗಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿಯಲ್ಲಿ ಸಹಾಯ ಧನ ನೀಡಲಾಗುವುದು.

ಹೈನುಗಾರಿಕೆಯಲ್ಲಿ ಯಶಸ್ಸು ಪಡೆದ ವಿಜಯಪುರದ ಯುವ ರೈತ! ಸಾಕಾಣಿಕೆ, ಸಂಪಾದನೆ ಎಲ್ಲದರ ಕುರಿತು ಇಲ್ಲಿದೆ ವಿವರ

  • ಪ್ರತಿ ಯೋಜನೆಗೆ ಉಲ್ಲೇಖಿಸಿರುವ ಸಬ್ಸಿಡಿಯ ಸೀಲಿಂಗ್ ವರಗೆ 50% ಬಂಡವಾಳ ಸಹಾಯಧನವನ್ನು (back ended subsidy) SIDBI ಯಿಂದ ಎರಡು ಸಮಾನ ಕಂತುಗಳಲ್ಲಿ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗುತ್ತದೆ.
  • ಆಸಕ್ತ ಫಲಾನುಭವಿಗಳು Online Portal WWW.nlm.udyamimitra.in ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.
  • ಆಸಕ್ತ ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲಾ ಉಪ ನಿರ್ದೇಶಕರು/ಸಹಾಯಕ ನಿರ್ದೇಶಕರು ತಾಲ್ಲೂಕು ಮಟ್ಟ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ರವರನ್ನು ಸಂಪರ್ಕಿಸಬಹುದು.
  • ಮತ್ತಷ್ಟು ಹೆಚ್ಚಿನ ಮಾಹಿತಿಗಾಗಿ ಈ ಸಹಾಯವಾಣಿ ನಂಬರ್ ಗೆ ಕರೆ ಮಾಡಿ:+91 82771 00200 Pashu helpline number
Published On: 12 August 2022, 03:14 PM English Summary: Invitation for application for establishment of sheep and chicken breeding unit!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.