Cattle's managements in summer : ಬೇಸಿಗೆಯಲ್ಲಿನ ತೀವೃ ಬಿಸಿಲಿನ ಪರಿಣಾಮದಿಂದ ಜಾನುವಾರುಗಳನ್ನು ರಕ್ಷಿಸುವ ಕುರಿತು ಇಲ್ಲಿದೆ ಮಹತ್ವದ ಮಾಹಿತಿ
ನಮ್ಮ ದೇಶದಲ್ಲಿ ಬೇಸಿಗೆಯಲ್ಲಿ ಉಷ್ಣಾಂಶ ಕೆಲವೊಂದು ಪ್ರದೇಶಗಳಲ್ಲಿ 40-45ಲಿಅ ವರೆಗೂ ಇರುತ್ತದೆ. ಆದರೆ ಹಾಲು ಉತ್ಪಾದಿಸುವ ಜಾನುವಾರುಗಳಲ್ಲಿ ಉಷ್ಣಾಂಶ 27-28ಲಿಅ ನಿರ್ಣಾಯಕ ಉಷ್ಣಾಂಶವಾಗಿರುತ್ತದೆ.
ಅಂದರೆ ಈ ಉಷ್ಣಾಂಶದಲ್ಲಿ ಮಿಶ್ರತಳಿ ಆಕಳು ಮತ್ತು ಎಮ್ಮೆಗಳ ಮೇಲೆ ಯಾವ ಒತ್ತಡವು ಇರುವುದಿಲ್ಲ, ಹಾಗಾಗಿ ಈ ಉಷ್ಣಾಂಶಕ್ಕೆ ಆರಾಮ ವಲಯ ಎಂದು ಕರೆಯುತ್ತಾರೆ.
ಯಾವಾಗ ಉಷ್ಣಾಂಶ 27ಲಿಅ ಗಿಂತ ಜಾಸ್ತಿ ಆಗುತ್ತದೆಯೊ ಆವಾಗ ಉಷ್ಣಾಂಶ ಒತ್ತಡ ಪ್ರಾರಂಭವಾಗುತ್ತದೆ. ಉಷ್ಣಾಂಶ ಒತ್ತಡದಲ್ಲ್ಲಿ ಆದ್ರತೆ ಕೂಡ ಗಮನಾರ್ಹ ಅಂಶವಾಗಿರುತ್ತದೆ.
ಭಾರತ ದೇಶವು ಹಾಲಿನ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಈ ಹಾಲು ಮುಖ್ಯವಾಗಿ ಮಿಶ್ರ ತಳಿ ಆಕಳು ಮತ್ತು ಎಮ್ಮೆಗಳಿಂದ ಬರುತ್ತದೆ. ಯವಾಗ ಮಿಶ್ರ ತಳಿ ಆಕಳು ಮತ್ತು ಎಮ್ಮೆಗಳು ಆರಾಮ ವಲಯದಿಂದ ಹೊರಬರುತ್ತವೆ.
ಆ ಸಮಯದಲ್ಲಿ ಬಿಸಿಲಿನ ಒತ್ತಡ/ಉಷ್ಣಾಂಶದ ಒತ್ತಡಕ್ಕೆ ಮಿಶ್ರತಳಿ ಆಕಳು ಮತ್ತು ಎಮ್ಮೆಗಳ ಹಾಲಿನ ಉತ್ಪಾದನೆಯಲ್ಲಿ 50% ವರೆಗೂ ಕಡಿಮೆಯಾಗಬಹುದು ಮತ್ತು ಅವುಗಳ ಸಂತಾನೋತ್ಪತ್ತಿ (ಬೆದೆಗೆ ಬರದಿರುವ ಅಥವಾ ಮುಖಬೆದೆ ತೋರಿಸುವ ತೊಂದರೆಗಳು ಕೂಡ ಸಾಮಾನ್ಯವಾಗಿ ಕೇಳಿಬರುತ್ತದೆ) ಮೇಲೂ ಸಹ ಪ್ರಭಾವ ಬೀರುತ್ತವೆ
ಎಮ್ಮೆಗಳು ಬೇಸಿಗೆಯಲ್ಲಿ ಉಷ್ಣಾಂಶದ ಒತ್ತಡಕ್ಕೆ ಹೆಚ್ಚಾಗಿ ಒಳಗಾಗುತ್ತವೆ
ಮಿಶ್ರತಳಿ ಆಕಳು ಮತ್ತು ಎಮ್ಮೆ ಬೇಸಿಗೆಯಲ್ಲಿ ಬಿಸಿಲಿನ ಒತ್ತಡ / ಉಷ್ಣಾಂಶ ಒತ್ತಡಕ್ಕೆ ಹೆಚ್ಚಾಗಿ ಒಳಗಾಗುತ್ತವೆ. ನಮ್ಮ ದೇಸಿ ಆಕಳುಗಳು ಭಾರತದ ಉಷ್ಣಹವಾಮಾನಕ್ಕೆ ಹೊಂದಿಕೊಂಡಿರುತ್ತವೆ. ಆದರೆ ಮಿಶ್ರತಳಿಗಳು ಉಷ್ಣ ಹವಾಮಾನಕ್ಕೆ ಪೂರ್ಣಪ್ರಮಾಣದಲ್ಲಿ ಹೊಂದಿಕೊಂಡಿರುವುದಿಲ್ಲ.
ಆದರೆ ಎಮ್ಮೆಗಳು ಯಾವುದೇ ಆಗಿರಲಿ ಬಿಸಿಲನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ ಇರುತ್ತದೆ. ಎಮ್ಮೆಗಳ ಮೈ ಬಣ್ಣವು ಇಂತಹ ತಾಪಮಾನ ಬೇಸಿಗೆಯ ಹೆಚ್ಚಾಗಲು ಸಹಾಯವಾಗಿರುತ್ತದೆ. ಕಪ್ಪು ಬಣ್ಣದ ಚರ್ಮ ಹೆಚ್ಚು ಸೂರ್ಯ ವಿಕಿರಣಗಳನ್ನು ಹಾಗೂ ಉಷ್ಣತೆಯನ್ನು ಹೀರಿಕೊಳ್ಳುತ್ತದೆ.
ಎಮ್ಮೆಗಳಲ್ಲಿ ಹಸು ಹಾಗೂ ಮನುಷ್ಯರಿಗೆ ಹೋಲಿಸಿದರೆ ಬೆವರಿನ ಗ್ರಂಥಿಗಳು ಕಡಿಮೆ ಇರುತ್ತವೆ. ಆದ್ದರಿಂದ ಎಮ್ಮೆಗಳು ತಮ್ಮ ಶರೀರದಿಂದ ಬಿಡುಗಡೆಯಾದ ದೇಹದ ತಾಪಮಾನವನ್ನು ಹೊರಹಾಕುವುದಕ್ಕೆ ಬಹಳ ಒತ್ತಡ ಉಂಟಾಗುತ್ತದೆ.
ಸಾಮಾನ್ಯವಾಗಿ ಉಷ್ಣಾಂಶ ಜಾಸ್ತಿಯಾದಾಗ ಜಾನುವಾರುಗಳು ಉಷ್ಣಾಂಶವನ್ನು ಆವೆಯಾಗುವ ಮೂಲಕ ಹೊರಹಾಕಲು ಜೋರಾಗಿ ಉಸಿರಾಡುತ್ತವೆ ಮತ್ತು ಬೆವರುತ್ತವೆ. ಇದರಿಂದ ಅವುಗಳ ಆಹಾರದಿಂದ ಪಡೆದ ಶಕ್ತಿ ವ್ಯಯವಾಗುತ್ತದೆ. ಈ ರೀತಿ ಆಹಾರದ ಶಕ್ತಿ ವ್ಯಯ ಆಗುವುದರಿಂದ ಸುಮಾರು 50% ವರೆಗೂ ಹಾಲು ಉತ್ಪಾದನೆಯಲ್ಲಿ ಕಡಿಮೆಯಾಗಬಹುದು.
ಜಾನುವಾರುಗಳು ಉಷ್ಣಾಂಶ ಒತ್ತಡದಲ್ಲಿದ್ದಾಗ ಈ ಕೆಳಗಿನ ಚಿಹ್ನೆಗಳನ್ನು ನಾವು ಕಾಣಬಹುದು
- ಆಹಾರ ಸ್ವೀಕರಿಸುವುದರಲ್ಲಿ ಅಥವಾ ಮೇವು ಮೇವು ತಿನ್ನುವುದರಲ್ಲಿ ಕಡಿಮೆಯಾಗುವುದು
- ನೀರು ಕುಡಿಯುವುದು ಹೆಚ್ಚಾಗುತ್ತದೆ
- ಜಾನುವಾರುಗಳ ಚಯಾಪಚಯ ಕ್ರಿಯೆಯ ದರದಲ್ಲಿ ಬದಲಾವಣೆ
- ಜಾನುವಾರುಗಳ ನಿರ್ವಹಣೆ ಅವಶ್ಯಕತೆ ಬದಲಾವಣೆಯಾಗುವುದು
- ಆವಿಯಾಗುವಿಕೆಯ ನಷ್ಟ ಹೆಚ್ಚಾಗುತ್ತದೆ
- ರಕ್ತದಲ್ಲಿರುವ ಹಾರ್ಮೋನುಗಳ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ
- ದೇಹದ ಉಷ್ಣಾಂಶ ಹೆಚ್ಚಾಗುತ್ತದೆ.
ಜಾನುವಾರುಗಳಲ್ಲಿ ಈ ಬೇಸಿಗೆಯ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಅವುಗಳ ಉತ್ಪಾದಕತೆಯನ್ನು ಸುಧಾರಿಸಲು ನಾವು ವಾತಾವರಣದ ತಾಪಮಾನವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೆ ಜಾನುವಾರುಗಳನ್ನು ಸಾಕುವುದರಲ್ಲಿ ಕೆಲವು ನಿರ್ವಹಣೆ ಕ್ರಮಗಳನ್ನು ಅಳವಡಿಸಿಕೊಂಡರೆ, ಅವುಗಳ ಉತ್ಪಾದನೆ ಬೇಸಿಗೆಯಲ್ಲೂ ಚೆನ್ನಾಗಿರುತ್ತದೆ.
- ಬೇಸಿಗೆಗೆ ಅನುಕೂಲವಾಗುವಂತಹ ಕೊಟ್ಟಿಗೆಯ ವಿನ್ಯಾಸ
- ಜಾನುವಾರುಗಳನ್ನು ತಣ್ಣಗಾಗಿಸುವ ಅಥವಾ ತಂಪಾಗಿಸುವ ವ್ಯವಸ್ಥೆ
- ಉಷ್ಣಾಂಶ ಅಥವಾ ಬಿಸಿಲಿನ ಒತ್ತಡವನ್ನು ಸಹಿಸುವಂತಹ ತಳಿಗಳ ಆಯ್ಕೆ
- ಅಧಿಕ ಶಕ್ತಿ ಹೊಂದಿರುವ ಆಹಾರ ನೀಡುವುದು
ಕೊಟ್ಟಿಗೆಯ ವಿನ್ಯಾಸದಲ್ಲಿ ಈ ಕೆಳಗಿನ ಅಂಶಗಳನ್ನು ಗಮನಹರಿಸಬೇಕಾಗುತ್ತದೆ
1. ಕೊಟ್ಟಿಗೆಯ ದಿಕ್ಕು: ಕೊಟ್ಟಿಗೆಯ ಉದ್ದನೆಯ ಭಾಗವು ಪೂರ್ವ ಪಶ್ಚಿಮ ದಿಕ್ಕಿನಲ್ಲಿ ಇರುವುದರಿಂದ ತಂಪಾದ ವಾತಾವರಣವಿರುವುದು ಮತ್ತು ಕೊಟ್ಟಿಗೆ ದಿನದ ಬಹು ಭಾಗದಲ್ಲಿ ನೆರಳಿನಲ್ಲಿ ಇರುತ್ತದೆ. ಅದರಿಂದ ಉಷ್ಣಾಂಶದ ಒತ್ತಡ ಕಡಿಮೆಯಾಗುತ್ತದೆ.
2. ಕೊಟ್ಟಿಗೆಯ ಅಗಲ ಮತ್ತು ಉದ್ದ: ಕೊಟ್ಟಿಗೆಯಲ್ಲಿ ಶಿಫಾರಸು ಮಾಡಲಾದ ನೆಲಹಾಸು ಜಾಗಕ್ಕಿಂತ ಹೆಚ್ಚಿನ ಜಾಗವನ್ನು ಬಿಸಿಲಿನ ಪ್ರದೇಶದಲ್ಲಿ ಇರಬೇಕಾಗುತ್ತದೆ. ಶಿಫಾರಸ್ಸು ಮಾಡಲಾದ ನೆಲಹಾಸು ಜಾಗ ಕರುಗಳಿಗೆ 1.5 ಣo 2 m2, ವಯಸ್ಕ ಹೋರಿ ಅಥವಾ ಕೋಣ 7 m2 ಮೀಟರ್ ಸ್ಕ್ವೇರ್, ವಯಸ್ಕ ಆಕಳು/ ಎಮ್ಮೆ 4 ಣo 5 m2 ಮತ್ತು ಕೊಟ್ಟಿಗೆಯ ಅಗಲ 6 ಮೀಟರ್ ಇರಬೇಕಾಗುತ್ತದೆ. ಒಂದು ಆಕಳು /ಎಮ್ಮೆ ಗೆ ಕನಿಷ್ಠ 5.5 x 9.0 ಅಡಿ (ಅಗಲ * ಉದ್ದ) ಜಾಗ ಇರಬೇಕಾಗುತ್ತದೆ. ಇದರ ಜೊತೆಗೆ ಸ್ವಚ್ಛ ಪಕ್ಕ ನೆಲ ಮತ್ತು ಸರಿಯಾದ ಹರಿವು ಇರಬೇಕಾಗುತ್ತದೆ.
3. ಕೊಟ್ಟಿಗೆಯ ಎತ್ತರ ಮತ್ತು ಮೇಲ್ಛಾವಣೆ: ಬಿಸಿಲಿನ ಪ್ರದೇಶಗಳಲ್ಲಿ ಕೊಟ್ಟಿಗೆ ಎತ್ತರ ಕನಿಷ್ಠ ಮೂರರಿಂದ ಐದು ಮೀಟರ್ ಇರಬೇಕು. ಕೊಟ್ಟಿಗೆಯ ಮೇಲ್ಛಾವಣೆ ಆಕಾರ ಇಂಗ್ಲಿಷ್ ಅಕ್ಷರ ‘ಂ’ ಆಕಾರದಲ್ಲಿದ್ದರೆ ಬಿಸಿಲಿನ ಪ್ರದೇಶಗಳಿಗೆ ಬಹು ಸೂಕ್ತವಾದದ್ದು.
ಏಕೆಂದರೆ ಇಲ್ಲಿ ಎರಡು ಕಡೆ ಇಳಿಜಾರು ಇರುವುದರಿಂದ ಬಿಸಿಲು ಯಾವಾಗಲೂ ಒಂದು ಕಡೆ ಮಾತ್ರ ಕೇಂದ್ರೀಕೃತವಾಗಿರುತ್ತದೆ ಮತ್ತು ಮತ್ತೊಂದು ಕಡೆ ಬಿಸಿಲಿನ ಪ್ರಮಾಣ ಕಡಿಮೆ ಇರುತ್ತದೆ. ಕೊಟ್ಟಿಗೆ ಮೇಲೆ ಸುಮಾರು ನಾಲ್ಕರಿಂದ ಆರು ಇಂಚು ಒಣ ಹುಲ್ಲನ್ನು ಹಾಕುವುದರಿಂದ ಕೊಟ್ಟಿಗೆ ಉಷ್ಣಾಂಶವನ್ನು ಕಡಿಮೆ ಮಾಡಬಹುದು.
ಕಟ್ಟಿಗೆ ಮೇಲ್ಚಾವಣಿ ಬಿಸಿಲಿಗೆ ಉತ್ತಮವಾದದ್ದು. ಅಸ್ಬೇಷ್ಟೋಸ್ ಶೀಟ್ ಹಾಕುವುದರಿಂದ ಬಿಸಿಲಿನ ಪ್ರಮಾಣವನ್ನು ತಗ್ಗಿಸಬಹುದು. ಕೊಟ್ಟಿಗೆಯ ಸುತ್ತಮುತ್ತಲಿನ ಪ್ರದೇಶವು ಹಸಿರಿನಿಂದ ಕೂಡಿದ್ದರೆ ಕೊಟ್ಟಿಗೆಯು ಬಿಸಿಲಿನ ತಾಪವನ್ನು ಕಡಿಮೆಮಾಡಬಹುದು. ಕೊಟ್ಟಿಗೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಗಿಡಗಳನ್ನು ಬೆಳೆಸುವುದು ತುಂಬಾ ಸೂಕ್ತ.
ಬೇಸಿಗೆಯಲ್ಲಿ ಆಹಾರದ ನಿರ್ವಹಣೆ
ಬೇಸಿಗೆಯಲ್ಲಿ ಜಾನುವಾರುಗಳಿಗೆ ಆಹಾರ ನೀಡುವಾಗ ಮೂರು ಬಹುಮುಖ್ಯ ಅಂಶಗಳನ್ನು ಗಮನಿಸಬೇಕಾಗುತ್ತದೆ. ಅವುಗಳೆಂದರೆ
- ಜಾನುವಾರುಗಳಿಗೆ ಆಹಾರವನ್ನು ದಿನಕ್ಕೆ ಹೆಚ್ಚು ಬಾರಿ ನೀಡುವುದು (ಮೂರರಿಂದ ನಾಲ್ಕು ಬಾರಿ)
- ಜಾನುವಾರುಗಳಿಗೆ ತಂಪಾದ ಸಮಯದಲ್ಲಿ ಅಂದರೆ ಬೆಳಗ್ಗೆ, ಸಂಜೆ ಮತ್ತು ರಾತ್ರಿ ಆಹಾರ ಮತ್ತು ಮೇವು ನೀಡುವುದು. ಜಾನುವಾರುಗಳನ್ನು ಸಾಧ್ಯವಾದರೆ ಬೆಳಗ್ಗೆ 11 ಗಂಟೆಗೆ ಒಳಗೆ ಹಾಗೂ ಸಂಜೆ 4 ಗಂಟೆಯ ನಂತರ ಮೇಯಲು ಬಿಡಬೇಕು. ದಿನದ ಗರಿಷ್ಠ ಉಷ್ಣತೆಯ ಅವಧಿಯಲ್ಲಿ ಸೂರ್ಯನ ಕಿರಣಗಳು ಪ್ರಕರವಾಗಿರುವಾಗ ಹೊರಗಡೆ ಮೇಯಲು ಬಿಡಬಾರದು. ಬೇಸಿಗೆಯಲ್ಲಿ, ಹವಾಮಾನವು ಬಿಸಿಯಾಗಿರುವಾಗ ಮತ್ತು ಪ್ರಾಣಿಗಳ ದೇಹವು ತುಂಬಾ ಬೆವರುವಾಗ, ಅವುಗಳಿಗೆ ಪೊಟ್ಯಾಸಿಯಂ ಮತ್ತು ಸೋಡಿಯಂ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು.
- ಶುದ್ಧವಾದ ಮತ್ತು ತಂಪಾದ ನೀರನ್ನು ಹೇರಳವಾಗಿ ದಿನವಿಡಿ ನೀಡಬೇಕು. ಇದರ ಜೊತೆಗೆ ಜಾನುವಾರುಗಳಿಗೆ ಹೆಚ್ಚಿನ ಪ್ರೋಟೀನ್ ಅಂದರೆ ಸಸಾರಜನಕ ಇರುವ ಆಹಾರವನ್ನು ನೀಡಬಾರದು. ಬೇಸಿಗೆಯಲ್ಲಿ ಆಹಾರದಲ್ಲಿ ಪ್ರತಿಶತ 18 ಅಥವಾ ಕಡಿಮೆ ಪ್ರೊಟೀನ್ ಅಂಶ ಇರಬೇಕು. ಜಾನುವಾರುಗಳಿಗೆ ಹೆಚ್ಚು ನಾರಿನಂಶ ಇರುವ ಹಸಿರು ಹುಲ್ಲು ಮತ್ತು ಪೌಷ್ಟಿಕ ಒಣಹುಲ್ಲನ್ನು ನೀಡಬೇಕು.
- ಬೇಸಿಗೆಯಲ್ಲಿ ಜಾನುವಾರುಗಳಿಗೆ ಕೆಲವು ಖನಿಜಗಳ ಅವಶ್ಯಕತೆ ಹೆಚ್ಚಾಗಿರುವುದರಿಂದ ಖನಿಜ ಮಿಶ್ರಣವನ್ನು ದಿನಕ್ಕೆ 50 ಗ್ರಾಂ ನೀಡುವುದು ಅತಿ ಅವಶ್ಯಕವಾಗಿರುತ್ತದೆ. ಕೆಲವು ಜೀವಸತ್ವಗಳು ಉದಾಹರಣೆಗೆ ವಿಟಮಿನ್ ‘ಸಿ’ ಮತ್ತು ‘ಬಿ-ಕಾಂಪ್ಲೆಕ್ಸ್’ ಜಾನುವಾರುಗಳಿಗೆ ಕೊಡುವುದರಿಂದ ಬೇಸಿಗೆಯ ಬೇಗೆಯಿಂದ ಕುಂಠಿತವಾಗುವ ಜಾನುವಾರುಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬಹುದು.
- ಜಾನುವಾರುಗಳನ್ನು ಬೇಸಿಗೆಯಲ್ಲಿ ತಂಪಾಗಿಸುವ ವ್ಯವಸ್ಥೆ. ಜಾನುವಾರುಗಳಲ್ಲಿ ಸುತ್ತಲಿನ ಉಷ್ಣಾಂಶ ಹೆಚ್ಚಾದಂತೆ ಬೆವರು ಗ್ರಂಥಿಗಳು ಸಕ್ರಿಯವಾಗುತ್ತವೆ. ಚರ್ಮದ ಮೇಲಿಂದ ಒಂದು ಗ್ರಾ ಬೆವರು ಆವೆಯಾದರೆ 590 ಕ್ಯಾಲೋರಿ ಶಕ್ತಿ ಖರ್ಚಾಗುತ್ತದೆ. ಬಿಸಿಲಿನ ತಾಪಮಾನ ತಗ್ಗಿಸಲು ಮತ್ತೊಂದು ಕ್ರಿಯೆ ಎಂದರೆ ಅದು ತೀವ್ರವಾದ ಉಸಿರಾಟ ಅಥವಾ ಫ್ಯಾಟಿಂಗ್. ಇದರಲ್ಲಿ ಬಾಯಿ ಮತ್ತು ಶ್ವಾಸಕೋಶಗಳಿಂದ ತೇವಾಂಶ ಆವಿಯಾಗುತ್ತದೆ. ಈ ಉಸಿರಾಟದ ತೀವ್ರತೆಯಿಂದ ಚಯಾಪಚಯ ಕ್ರಿಯೆಯಲ್ಲಿ ಹೆಚ್ಚು ಶಾಖ ಉತ್ಪತ್ತಿಯಾಗುತ್ತದೆ. ಈ ಶಾಖದ ಹೊರೆಯನ್ನು ತಗ್ಗಿಸಲು ಜಾನುವಾರುಗಳು ಹೆಚ್ಚಿನ ಆಹಾರ ಮತ್ತು ಮೇವನ್ನು ತಿನ್ನುವುದಿಲ್ಲ.
- ದಿನಕ್ಕೊಂದು ಬಾರಿ ಜಾನುವಾರುಗಳನ್ನು ತಣ್ಣೀರಿನಿಂದ ಮೈ ತೊಳೆಯಬೇಕು. ನೀರನ್ನು ಸ್ಪ್ರೇಯರ್ ಮತ್ತು ಸ್ಪ್ರಿಂಕ್ಲರ್ಗಳ ಮೂಲಕ ಜಾನುವಾರುಗಳ ದೇಹಕ್ಕೆ ಸಿಂಪಡಿಸುವುದು ಉತ್ತಮವಾದದ್ದು ಅಥವಾ ಮಧ್ಯಾಹ್ನದ ಹೊತ್ತಿನಲ್ಲಿ ಎರಡು-ಮೂರು ಬಾರಿ ಮೈಮೇಲೆ ತಣ್ಣಗಿನ ನೀರನ್ನು ಹರಿಸಬೇಕು/ಎರಚಬೇಕು. ಎಮ್ಮೆಗಳನ್ನು ಪ್ರತಿನಿತ್ಯ ಮಧ್ಯಾಹ್ನದಲ್ಲಿ ನೀರಿನಲ್ಲಿ ಈಜಾಡಲು ಬಿಡಬೇಕು.
- ನೀರನ್ನು ನೆಲ ಮತ್ತು ಮೇಲ್ಛಾವಣಿಗೆ ಸಿಂಪಡಿಸುವುದು ಉತ್ತಮವಾದದ್ದು. ಮೇಲ್ಛಾವಣಿಗೆ ದಿನದ ಅಧಿಕ ಉಷ್ಣಾಂಶವಿರುವ ಸಮಯದಲ್ಲಿ ನಿರಂತರವಾಗಿ ಸಿಂಪಡಿಸುವುದರಿಂದ ಕೊಟ್ಟಿಗೆಯ ಉಷ್ಣಾಂಶವನ್ನು ಕಡಿಮೆಗೊಳಿಸಬಹುದು. ಕೊಟ್ಟಿಗೆಯಲ್ಲಿ ಫ್ಯಾನ್ಗಳನ್ನು ಅಳವಡಿಸುವುದು ಉತ್ತಮ.
ಬೇಸಿಗೆಯಲ್ಲಿ ಎಮ್ಮೆಗಳ ನಿರ್ವಹಣೆ
ಎಮ್ಮೆಗಳ ಮೈ ಬಣ್ಣ ಕಪ್ಪಾಗಿರುವುದರಿಂದ ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು ಆಕಳುಗಳಂತೆ ತಡೆದುಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಎಮ್ಮೆಗಳ ದೇಹದ ಶಾರೀರಿಕ ಕ್ರಿಯೆಗಳಲ್ಲಿ ಬದಲಾವಣೆಗಳಾಗಿ ಅವು ಸರಿಯಾಗಿ ಬೆದೆಗೆ ಬರುವುದಿಲ್ಲ, ಗರ್ಭಧರಿಸುವುದಿಲ್ಲ ಹಾಗೂ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಆದ್ದರಿಂದ ಎಮ್ಮೆಗಳನ್ನು ಮಧ್ಯಾಹ್ನದ ಸಮಯದಲ್ಲಿ ನೀರಿನಲ್ಲಿ (ಕೆರೆ, ಹೊಂಡಗಳಲ್ಲಿ) ಬಿಡುವುದು ಉತ್ತಮ
ಅಥವಾ ದಿನದಲ್ಲಿ ಎಮ್ಮೆಗಳ ಮೈ ಮೇಲೆ 4-5 ಬಾರಿ ನೀರು ಹಾಕಬೇಕು. ಮೇಲಿಂದ ಮೇಲೆ ಸಾಕಷ್ಟು ತಂಪಾದ ನೀರನ್ನು ಕುಡಿಸಬೇಕು. ಎಮ್ಮೆಗಳನ್ನು ತಂಪಾದ ಜಾಗದಲ್ಲಿ ಕಟ್ಟಬೇಕು. ತಂಪೊತ್ತಿನಲ್ಲಿ (ಬೆಳಿಗ್ಗೆ, ಸಾಯಂಕಾಲ ಹಾಗೂ ರಾತ್ರಿ) ಮೇಯಿಸಬೇಕು. ಇದರಿಂದ ಎಮ್ಮೆಗಳ ದೇಹದ ಮೇಲೆ ಯಾವುದೇ ತೊಂದರೆಯಾಗುವುದಿಲ್ಲ.
ಈ ಮೇಲೆ ತಿಳಿಸಿದ ಎಲ್ಲಾ ಕ್ರಮಗಳನ್ನು ಬೇಸಿಗೆ ಒತ್ತಡದಿಂದ ಆಗುವ ನಷ್ಟವನ್ನು ಕಡಿಮೆ ಮಾಡುವುದರಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ಇವುಗಳಲ್ಲಿ ಒಂದನ್ನು ಅಥವಾ ಹೆಚ್ಚು ಕ್ರಮಗಳನ್ನು ಕೈಗೊಂಡಲ್ಲಿ ಜಾನುವಾರುಗಳಲ್ಲಿ ಹಾಲು ಉತ್ಪಾದನೆ ಹಾಗೂ ಸಂತಾನೋತ್ಪತ್ತಿ ಸಮಸ್ಯೆಗಳು ಕಡಿಮೆಯಾಗುವುದು. ಅಲ್ಲದೆ ರೈತರಿಗೆ ಹೆಚ್ಚಿನ ಲಾಭವನ್ನು ನೀಡಲು ನೆರವಾಗುವುದು.
Share your comments