ಸಾಕಾಣೆ ಮೀನಿನ ಅನುವಂಶಿಯ ಬದಲಾವಣೆಯ ಮಟ್ಟವು ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಪಾಲಿಸುವ ಸಂತಾನೋತ್ಪತ್ತಿಯ ವಿಧಾನಗಳು ಹಾಗೂ ಮೂಲ ವಂಶದ ಫ್ರೌಢಾವಸ್ಥೆ ಮಿನಿನ ನಿರ್ವಹಣೆಯ ಆಧಾರದ ಮೇಲೆ ಅವಲಂಬಿಸಿರುತ್ತದೆ. ಮೀನು ತಲಿ ಅಭಿವೃದ್ಧಿಯಲ್ಲಿ ಪ್ರೌಢಾವಸ್ಥೆಯ ಮೀನುಗಳ ನಿರ್ವಹಣೆಯು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪ್ರೌಢ ಮೀನುಗಳ ನಿರ್ವಹಣೆ ಪರಿಣಾಮಕಾರಿಯಾಗದಿದ್ದಲ್ಲಿ ನಕಾರಾತ್ಮಕ ಗುಣಗಳಾದ ಕುಂಠಿತ ಬೆಳವಣಿಗೆ, ರೋಗ ಪ್ರತಿನಿರೋಧಕಶಕ್ತಿ ಕಡಿಮೆಯಾಗುವುದು, ಫಲಭರಿತತೆಯಲ್ಲಿ ಕುಂಠಿತ ಮುಂತಾದ ಪರಿಣಾಮಗಳು ಕಂಡುಬರುತ್ತವೆ.
- ಮುಂದಿನ ಪೀಳಿಗೆಗೆ ನೆರವಾಗುವ ಫ್ರೌಢಾವಸ್ಥೆಯ ಮೀನುಗಳ ಸಂಖ್ಯೆಯನ್ನು ಆದಷ್ಟು ಹೆಚ್ಚಿಸಬೇಕು
- ಪ್ರತಿಯೊಂದು ಪೀಳಿಗೆಯಲ್ಲೂ ಕೆಲವೇ ಕೆಲವು ಪ್ರೌಢಾವಸ್ಥೆಯ ಮೀನುಗಳನ್ನು ಬಳಸುವುದರಿಂದ ಸ್ವಭಾವ ಸಿದ್ದತಿ ಉಂಟಾಗುವ ಸಾಧ್ಯತೆ ಹೆಚ್ಚಿದೆ (ಕನಿಷ್ಟ ಪಕ್ಷ 50 ಜೋಡಿಗಳು ಬಂದಿರಬೇಕು)
- ಪ್ರತಿಯೊಂದು ಗುಂಪಿನ ಮೊಟ್ಟೆಯಿಂದ ಉತ್ಪಾದಿಸಿದ ಮೀನುಮರಿಗಳಿಂದ ಸಮಪ್ರಮಾಣದಲ್ಲಿ ಮುಂದಿನ ಪ್ರೌಢಾವಸ್ಥೆ ಮೀನುಗಳನ್ನಾಗಿ ಬೆಳೆಸಲು ತೆಗೆದಿಡಬೇಕು. ಈ ರೀತಿ ಮಾಡುವುದರಿಂದ ಪ್ರತಿಯೊಂದು ಪ್ರೌಢ ಮೀನು ಮುಂದಿನ ಪೀಳಿಗೆಗೆ ಬಲವರ್ಧನೆ ಹೆಚ್ಚಿಸುವ ಸಾದ್ಯತೆ ಇದೆ.
- ಯೋಜಿತ ಆಯ್ಕೆಯ ಕಾರ್ಯಕ್ರಮವಿಲ್ಲದೆ ಇದ್ದಲ್ಲಿ ಮರಿ ಮಾಡಿಸಲು ಆರಿಸಿದ ಮೀನು ಹಾಗೂ ಮುಂದಿನ ಪ್ರೌಢಾವಸ್ಥೆಗಾಗಿ ಉಪಯೋಗಿಸುವ ಮೀನನ್ನು ಕೈಗೆ ಸಿಕ್ಕಂತೆ ಆರಿಸಬೇಕು
- ಕೊನೆಯಲ್ಲಿ ಉಳಿದ ಮೀನುಗಳನ್ನು ಮುಂದಿನ ಪೀಳಿಗೆಗೆ ಪ್ರೌಢಾವಸ್ಥೆ ಮೀನುಗಳಾಗಿ ಉಪಯೋಗಿಸುವ ಪದ್ದತಿಯಿಂದ ಗುಣಮಟ್ಟ ಕುಂಠಿತಗೊಳ್ಳುವ ಸಾಧ್ಯತೆಯಿದೆ.
- ಸಾಧ್ಯವಾದಷ್ಟು ಮಟ್ಟಿಗೆ ಪ್ರೌಢಾವಸ್ಥೆ ಮೀನುಗಳನ್ನು ಅವುಗಳ ವಯಸ್ಸಿನ ಆಧಾರದ ಮೇಲೆ ವಿಂದಡಿಸಿ ಇಡಲು ಪ್ರಯತ್ನಿಸಬೇಕು. ಹೀಗೆ ಮಾಡುವುದರಿಂದ ವಂಶಾವಳಿ ಕಾದಿರಿಸಲು ಅನುಕೂಲವಾಗುತ್ತದೆ. ಅಲ್ಲದೆ ಬೇರೆ ವರ್ಷಗಳ ಮೀನುಗಳನ್ನು ಉಪಯೋಗಿಸುವುದರಿಂದ ಗುಣಮಟ್ಟ ಹೆಚ್ಚಿಸುವ ಸಾಧ್ಯತೆಯಿದೆ
- ಮೀನುಮರಿ ಉತ್ಪಾದನಾ ಕೇಂದ್ರಗಳು ಮುಂದಿನ ಪೀಳಿಗೆಗೆ ಕಾರಣವಾಗುವ ಪ್ರೌಢಾವಸ್ಥೆ ಮೀನುಗಳ ಸಂಖ್ಯೆ ಹಾಗೂ ಅವುಗಳ ವಯಸ್ಸನ್ನು ದಾಖಲು ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಪ್ರೌಢಾವಸ್ಥೆ ಮೀನುಗಳ ಅನುವಂಶಿಯ ನಿರ್ವಹಣೆಯ ಒಂದು ಸಮಂಜಸ ಮಾಹಿತಿ ದೊರೆಯುತ್ತದೆ.
- ಹೊಸ ತಳಿಯನ್ನು ನಿಖರವಾಗಿ ಮೌಲ್ಯಮಾಪನ ಮಾಡದೇ ಈಗಿನ ಪ್ರೌಢಾವಸ್ಥೆ ಬೆರೆಸಬಾರದು
ಪ್ರೌಢಾವಸ್ಥೆ ಮೀನುಗಳ ಸಾಗಾಣಿಕೆ:
- ಪ್ರೌಢಾವಸ್ಥೆ ಹೊಂದಿದ ಮೀನುಗಳನ್ನು ಅನುವಂಶಿಯ ಅಭಿವೃದ್ಧಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಬೇಕಾಗುತ್ತದೆ
- ದಪ್ಪನಾದ ಪ್ಲಾಸ್ಟಿಕ್ ಚೀಲಗಳನ್ನು (150x75 ಸೆಂ.ಮೀ. ಅಳತೆಯುಳ್ಳ) ದುಂಡಾದ ತೊಟ್ಟಿಯಲ್ಲಿರಿಸಿ ಅದಕ್ಕೆ 30 ಲೀಟರ್ ನೀರನ್ನು ಹಾಕಿ. 20 ಪಿ.ಪಿ.ಎಂ. ನಂತೆ ಬೆಂಜೋಕೇನ್ ರಾಸಾಯನಿಕವನ್ನು ಬೆರೆಸಬೇಕು.
- ಒಂದು ಚೀಲದಲ್ಲಿ ಅಂದಾಜು 5 ಕೆ.ಜಿ. ತೂಕದ (500 ಗ್ರಾಂ ನಿಂದ 1 ಕೆ.ಜಿ. ತೂಕವುಳ್ಳ) ಮೀನುಗಳನ್ನು ಯಶಸ್ವಿಯಾಗಿ 600 ಕಿ.ಮೀ. ದೂರದವರೆಗೆ (16 ಗಂಟೆಗಳ ಕಾಲ) ಕೊಂಡೊಯ್ಯಬಹುದು
ಮೀನುಗಳ ಆಯ್ಕೆ ಮತ್ತು ಜೊತೆಗೂಡಿಸುವಿಕೆ
ದೊಡ್ಡ ಗೆಂಡೆ ಮೀನುಗಳು ಸಾಮಾನ್ಯವಾಗಿ ಎರಡು ವರ್ಷಗಳ ಬೆಳವಣಿಗೆಯ ನಂತರ ಪಕ್ವವಾಗುತ್ತದೆ. ಸಾಮಾನ್ಯಗೆಮಡೆ ಮೀನು 6 ರಿಂದ 8 ತಿಂಗಳಲ್ಲಿ ಪಕ್ವವಾಗುತ್ತದೆ. ಪೂರ್ಣಪಕ್ವವಾದ ಮತ್ತು ಮೀನುಮರಿ ಮಾಡಲು ತಯಾರಾಗಿರುವ ಮೀನುಗಳನ್ನು ಪ್ರಚೋದನೆಯಿಂದ ಮರಿ ಮಾಡಲು ಆಯ್ಕೆ ಮಾಡಿಕೊಳ್ಳಬೇಕು.
- ವಯಸ್ಕ ಹೆಣ್ಣು ಮೀನಿನ ಹೊಟ್ಟೆ ಉಬ್ಬಿಕೊಂಡಿದ್ದು, ಮೃದುವಾಗಿದ್ದು, ಹೊಟ್ಟೆಯ ಕೆಳಭಾಗದಲ್ಲಿ ಕೆಂಪಾಗಿರುತ್ತದೆ. ಹೊಟ್ಟೆ ಭಾಗದಲ್ಲಿ ಸ್ವಲ್ಪ ಒತ್ತಡ ಕೊಟ್ಟರೆ ಕೆಲವು ಮೊಟ್ಟೆಗಳು ಹೊರಬರುತ್ತವೆ
- ಪಕ್ವವಾದ ಗಂಡು ಮೀನಿನ ಹೊಟ್ಟೆಯ ಭಾಗವನ್ನು ಅದುಮಿದರೆ ಶುಕ್ಲ ದ್ರವ ಹೊರಗೆ ಬರುತ್ತದೆ
- ಗಂಡು ಮತ್ತು ಹೆಣ್ಣು ಮೀನುಗಳನ್ನು ಅಂಕಿ ಪ್ರಕಾರ 2:1 ಮತ್ತು ತೂಕದ ಪ್ರಕಾರ 1:1 ಪ್ರಮಾಣದಲ್ಲಿ ಜೋಡಣೆ ಮಾಡಿ ಪರಿಣಾಮಕಾರಿ ಗರ್ಭದಾರಣೆ ಕೈಗೊಳ್ಳಬಹುದು
- ಚುಚ್ಚುಮದ್ದು ಕೊಟ್ಟ ನಂತರ ಜೋಡಿಗಳನ್ನು ಮರಿಮಾಡುವ ಬಟ್ಟೆಯ ತೊಟ್ಟಿಯ (ಹಾಪಾ) ಒಳಗೆ ಬಿಡಬೇಕು
- ಕೆಲವು ಗಂಡು ಮತ್ತು ಹೆಣ್ಣು ಮೀನುಗಳನ್ನು ಒಟ್ಟಿಗೆ ಬಿಟ್ಟು ಸಾಮೂಹಿಕವಾಗಿ ಮರಿಮಾಡಿಸುವ ವಿಧಾನವೂ ಅಬ್ಯಾಸದಲ್ಲಿದೆ
ಚುಚ್ಚು ಮದ್ದು ಕೊಡುವ ಪ್ರಮಾಣ
- ಆಯ್ಕೆ ಮಾಡಿದ ಹೆಣ್ಣು ಮೀನಿಗೆ ಎರಡು ಬಾರಿ ಚುಚ್ಚುಮದ್ದು ನೀಡಲಾಗುತ್ತದೆ. ಒಂದು ಪ್ರಚೋದನೆಗೆ, ಮತ್ತೊಂದು ಅಂತಿಮ ಪರಿಣಾಮಕ್ಕಾಗಿ ಗಂಡು ಮೀನಿಗೆ ಒಂದೇ ಬಾರಿ ಪ್ರಚೋದನೆಗೆ ಚುಚ್ಚುಮದ್ದು ಕೊಡಲಾಗುವುದು
- ಗೆಂಡೆ ಮೀನಿನ ಪಿಟ್ಯುಟರಿ ಗ್ರಂಥಿಯನ್ನು ಒಂದು ಕೆ.ಜಿ. ತೂಕದ ಮೀನಿಗೆ 2.3 ಮಿ.ಗ್ರಾಂ. ಮತ್ತು 5.8 ಮಿ. ಗ್ರಾಂ ಪ್ರಮಾಣದಲ್ಲಿ ಅನುಕ್ರಮವಾಗಿ ಮೊದಲನೆ ಮತ್ತು ಎರಡನೇ ಚುಚ್ಚುಮದ್ದಿನ ಮುಖಾಂತರ ಹೆಣ್ಣು ಮೀನಿಗೆ ನೀಡಬೇಕು. ಎರಡು ಚುಚ್ಚುಮದ್ದುಗಳ ಅಂತರ ಸುಮಾರು 6 ತಾಸುಗಳು
- ಗಂಡು ಮೀನಿಗೆ ಒಂದು ಕೆ.ಜಿ ತೂಕಕ್ಕೆ 2.3 ಮಿ. ಗ್ರಾಂ ಪ್ರಮಾಣದಲ್ಲಿ ಹೆಣ್ಣು ಮೀನಿಗೆ ಎರಡನೆ ಚುಚ್ಚುಮದ್ದು ಕೊಡುವ ಸಮಯದಲ್ಲಿ ನೀಡಬೇಕು
- ಗೆಂಡೆ ಮೀನಿನ ಪಿಟ್ಯುಟರಿ ಬದಲಾಗಿ ಸಮುದ್ರದ ಮೀಸೆ ಮೀನಿನ ಗ್ರಂಥಿಯನ್ನು ಸಹ ಉಪಯೋಗಿಸಬಹುದು
- ಹೆಣ್ಣು ಮೀನಿಗೆ 1 ಕೆ.ಜಿ ತೂಕಕ್ಕೆ 15-20 ಮಿ.ಗ್ರಾಂ ಮತ್ತು ಗಂಡು ಮೀನಿಗೆ ಒಂದು ಕೆ. ಜಿ ತೂಕಕ್ಕೆ 10 ಮಿ. ಗ್ರಾಂ ಪ್ರಮಾಣದಲ್ಲಿ ಉಪಯೋಗಿಸಬಹುದು
- ಇತ್ತೀಚಿಗೆ ಕೃತಕ ಹಾರ್ಮೋನುಗಳ ಲಭ್ಯವಿದ್ದು ಸುಲಭವಾಗಿ ಪ್ರಚೋದನೆ ಮಾಡಬಹುದು. “ಓವಾಪ್ರಿಮ್” ಎನ್ನುವ ನವೀನ ಔಷಧಿಯನ್ನು ಯಥೇಚ್ಚವಾಗಿ ಗೆಂಡೆ ಮೀನುಮರಿ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ.
- ಈ ಔಷಧ ದ್ರಾವಣ ರೂಪದಲ್ಲಿರುವುದರಿಂದ ನೇರವಾಗಿ ಸಿರೆಂಜ್‍ನಲ್ಲಿ ತೆಗೆದುಕೊಂಡು ಮೀನಿನ ದೇಹಕ್ಕೆ ಚುಚ್ಚಬಹುದು. “ಓವಾಪ್ರಿಮ್” ನಿಂದ ಹೆಚ್ಚು ಮೊಟ್ಟೆ ಮತ್ತು ಮರಿಗಳನ್ನು ಪಡೆಯಬಹುದು
ಪ್ರಬೇಧ |
ಪ್ರಮಾಣ (ಮಿ.ಲೀ./ಕಿ.ಗ್ರಾಂ. ಮೀನು ದೇಹತೂಕಕ್ಕೆ) |
ಹೆಣ್ಣುಮೀನು |
|
ಕಾಟ್ಲಾ |
0.40-0.50 |
ರೋಹು |
0.30-0.04 |
ಮೃಗಾಲ್ |
0.25-0.30 |
ಬೆಳ್ಳಿಗೆಂಡೆ/ ಹುಲ್ಲುಗೆಂಡೆ |
0.50-0.70 |
ದೊಡ್ಡತಲೆ ಗೆಂಡೆ ಮೀನು/ಬಾಟ/ಕೆಮ್ಮೀನು |
0.50 |
ಗಂಡು ಮೀನು |
|
ಮೇಲಿನ ಪ್ರಭೇಧದ ಎಲ್ಲಾ ಗಂಡು ಮೀನುಗಳಿವೆ |
0.10-0.15 |
ತಾಯಿ ಗೆಂಡೆ ಮೀನಿಗೆ ಒಲ್ಲೆಯ ಪರಿಪೂರಕ ಆಹಾರ ಮತ್ತು ಉತ್ತಮ ನೀರಿನ ಗುಣಮಟ್ಟ ಒದಗಿಸುವುದರಿಂದ ಒಂದು ಹೆಣ್ಣು ಗೆಂಡೆ ಮೀನನ್ನು ಒಂದೇ ಋತುವಿನಲ್ಲಿ 3-4 ಬಾರಿ ಸಂತಾನೋತ್ಪತ್ತಿಗೆ ಉಪಯೋಗಿಸಬಹುದು. ಹೀಗೆ ಮಾಡುವುದರಿಂದ 1 ಕೆ.ಜಿ ಹೆಣ್ಣು ಮೀನಿನಿಂದ ಸುಮಾರು 4-5 ಲಕ್ಷ ಮರಿಗಳನ್ನು ಉತ್ಪಾದಿಸಬಹುದು
ಮೀನು ಮೊಟ್ಟೆಯಿಡುವಿಕೆ
- ಸಾಮಾನ್ಯವಾಗಿ ಗೆಂಡೆ ಮೀನುಗಳು ಎರಡನೆ ಚುಚ್ಚುಮದ್ದು ನೀಡಿದ ಎಮಟು ಗಂಟೆಯ ನಂತರ ಮೊಟ್ಟೆಯಿಡುತ್ತವೆ
- ಮರುದಿನ ಬೆಳಿಗ್ಗೆ ಮೀನುಗಳನ್ನು ಹೊರ ತೆಗೆದು ಮೊಟ್ಟೆಗಳನ್ನು ಮರಿಮಾಡುವ ಜಾಡಿ ಅಥವಾ ಸಣ್ಣ ಕಣ್ಣಿನ ಒಳ ಹಾಪಾಗಳಿಗೆ ವರ್ಗಾಯಿಸಬೇಕು
- ದೊಡ್ಡ ಗೆಂಡೆ ಮೀನುಗಳು ಪಿಟ್ಯೂಟರಿ ಚುಚ್ಚುಮದ್ದು ಕೊಟ್ಟನಂತರ ಮೊಟ್ಟೆಯಿಡುತ್ತವೆ
- ಬೆಳ್ಳಿಗೆಂಡೆ ಹಾಗೂ ಹುಲ್ಲುಗೆಂಡೆ ಮೀನುಗಳು ಚುಚ್ಚುಮದ್ದುಇನ ನಂತರವೂ ಮೊಟ್ಟೆಯಿಡುವುದಿಲ್ಲ. ಆದುದರಿಂದ ಅವುಗಳ ಹೊಟ್ಟೆಯ ಮೇಲೆ ಸ್ವಲ್ಪ ಒತ್ತಡ ಹೇರಿ ಮೊಟ್ಟೆಗಳನ್ನು ಹೊರಬರುವಂತೆ ಹೊಟ್ಟೆಯ ಭಾಗವನ್ನು ಒತ್ತಿ ತೆಗೆದು ಕೃತಕ ಗರ್ಭದಾರಣೆ ಮಾಡಿಸಬೇಕು
- ಫಲಿತ ಮೊಟ್ಟೆಗಳು ನೀರನ್ನು ಹೀರಿಕೊಂಡು ದಪ್ಪವಾಗುತ್ತವೆ, ನಂತರ ಜಾಡಿ ಅಥವ ಒಳ ಹಾಪಕ್ಕೆ ವರ್ಗಾಯಿಸಬೇಕು
- ಜಲಸಸ್ಯಗಳು ಮತ್ತು ಇತರೆ ನಾರಿನಂತಹ ವಸ್ತುಗಳನ್ನು ಹಾಪದಲ್ಲಿ ಒದಗಿಸುವುದರಿಂದ ಸಾಮಾನ್ಯ ಗೆಂಡೆಯ ಮೊಟ್ಟೆಗಳು ಅವುಗಳಿಗೆ ಅಂಟಿಕೊಳ್ಳುವ ಹಾಗೆ ಮೊಟ್ಟೆಗಳನ್ನು ಇಡುತ್ತದೆ. ನಂತರ ಇವುಗಳನ್ನು ಮರಿಮಾಡಲು ಹಾಪಾಗಳಿಗೆ ವರ್ಗಾಯಿಸಬೇಕು
ಮರಿ ಮಾಡಿಸುವುದು
- ಫಲಿತ ಮೊಟ್ಟೆಗಳು ಸರಿಯಾಗಿ ನೀರಿನಲ್ಲಿ ಮುಳುಗಿರಬೇಕು. ದೊಡ್ಡ ಗೆಂಡೆ ಮೀನುಗಳ ಮೊಟ್ಟೆಗಳು ನೀರಿನ ಉಷ್ಣಾಂಶವನ್ನು ಅವಲಂಬಿಸಿ ಮೊಟ್ಟೆಯಿಟ್ಟ 15-18 ಗಂಟೆಗಳಲ್ಲಿ ಮರಿಯಾಗುತ್ತವೆ. ಸಾಮಾನ್ಯ ಗೆಂಡೆ ಮೀನಿನ ಮೊಟ್ಟೆಗಳು ಮರಿಯಾಗಲು 24 ರಿಂದ 36 ಗಂಟೆಗಳ ಕಾಲ ಬೇಕಾಗುತ್ತದೆ
- ನಂತರ ಮೊಟ್ಟೆಯ ಹೊರ ಪದರಗಳು ಹಾಗೂ ಜಲಸಸ್ಯಗಳನ್ನು ಜಾಡಿ ಅಥವಾ ಒಳ ಹಾಪದಿಂದ ತೆಗೆದುಹಾಕಬೇಕು
- ಹೊರ ಹಾಪಾದಲ್ಲಿ ಸುಮಾರು ಮೂರು ನಾಲ್ಕು ದಿವಸಗಳ ಅಂದರೆ ಅವು ಸಂಪೂರ್ಣ ಬಂಡಾರವನ್ನು ಆಹಾರವಾಗಿ ಉಪಯೋಗಿಸಿಕೊಳ್ಳುವವರೆಗೆ ಬಿಡಬೇಕು. ನಂತರ ಅವುಗಳನ್ನು ಪಾಲನಾ ತೊಟ್ಟಿಗಳಿಗೆ (ನರ್ಸರಿ ಕೊಳಗಳಿಗೆ) ವರ್ಗಾಯಿಸಬೇಕು
ಚೀನಿಯ ಮಾದರಿ ಹ್ಯಾಚರಿ
ದೊಡ್ಡ ಗೆಂಡೆ ಮೀನುಮರಿ ಉತ್ಪಾದನಾ ಕೇಂದ್ರಗಳಲ್ಲಿ ಚೀನಿಯ ಮಾದರಿ ಹ್ಯಾಚರಿಯನ್ನು ಬಳಸಲಾಗುತ್ತಿದೆ. ಕಡಿಮೆ ಜಾಗದಲ್ಲಿ ಮತ್ತು ಕಡಿಮೆ ಶ್ರಮದಲ್ಲಿ ನಿರ್ವಹಿಸಬಹುದಾಗಿದೆ. ಮೊಟ್ಟೆಯಿಂದ ಮರಿಬರುವ ಪ್ರಮಾಣ ಉತ್ತಮ. ಹ್ಯಾಚರಿಯು ಒಂದು ಮೊಟ್ಟೆಬಿಡುವ ತೊಟ್ಟಿ, 2-3 ಮೊಟ್ಟೆಯಿಂದ ಮರಿ ಹೊರತರುವ ತೊಟ್ಟಿಗಳು ಮತ್ತು ಒಂದು ಮರಿ ಸಂಗ್ರಹಣಾ ತೊಟ್ಟಿಯನ್ನು ಹೊಂದಿರುತ್ತದೆ. ನೀರು ಸರಾಗವಾಗಿ ಹರಿದು ಬರುವ ಸಾಧ್ಯತೆ ಇಲ್ಲದಿದ್ದಲ್ಲಿ ಒಂದು ನೀರು ಸಂಗ್ರಹಣಾ ತೊಟ್ಟಿ ಬೇಕಾಗುತ್ತದೆ.
ಮೊಟ್ಟೆ ಬಿಡುವ ತೊಟ್ಟಿ:
- ಸಿಮೆಂಟ್ ಮತ್ತು ಇಟ್ಟಿಗೆಯಿಂದ ರಚಿಸಲಾಗಿರುವುದ, ವೃತ್ತಾಕಾರ, 8-9 ಮಿ. ವ್ಯಾಸ ಹಾಗೂ 1-15 ಮೀ. ಆಳ
- ತೊಟ್ಟಿಯ ಕೇಂದ್ರದ ಕಡೆ ಇಳಿಜಾರು, ಕೇಂದ್ರದಿಂದ ಮೊಟ್ಟೆ ಹೊರಹೋಗುವ ಕೊಳವೆಗೆ ಜೋಡಿಸಲಾಗುವುದು
- ತೊಟ್ಟಿಯ ಗೋಡೆಗೆ ನೀರು ಬಿಡುವ ಕೊಳವೆಗಳನ್ನು ಜೋಡಿಸಿ ನೀರು ಸುತ್ತುವಂತೆ ಮಾಡುವುದು. ಮೀನುಗಳಿಗೆ ಹರಿಯುವ ನೀರಿನ ವಾತಾವರಣ ಸೃಷ್ಟಿಸಿ ಮೀನು ಮೊಟ್ಟೆಯಿಡಲು ಸಹಕಾರಿಯಾಗುವುದು
- ತೊಟ್ಟಿಯ ಒಳಗೆ ಮೇಲಿನಿಂದ ಕಾರಂಜಿಯಂತೆ ಸಹ ನೀರು ಬಿಡಲಾಗುವುದು
- ತೊಟ್ಟಿಯಲ್ಲಿ ಒಂದು ಬಾರಿಗೆ 100 ಕೆ.ಜಿ ತಳಿ ವರ್ಧಕಗಳನ್ನು ಉಪಯೋಗಿಸಿ 50-60 ಲಕ್ಷ ಮೊಟ್ಟೆ ಉತ್ಪಾದಿಸಬಹುದು
ಮೊಟ್ಟೆಯಿಂದ ಮರಿ ಹೊರತರುವ ತೊಟ್ಟಿ
- ವೃತ್ತಾಕಾರ, 3-4 ಮಿ. ವ್ಯಾಸ ಮತ್ತು 1 ಮೀ. ಆಳ
- ತೊಟ್ಟಿಯಲ್ಲಿ ನಿರಂತರ ನೀರಿನ ಹರಿವನ್ನು ಹಾಗೂ ನೀರು ಸುತ್ತುವಿಕೆಯನ್ನು ಕಾಯ್ದುಕೊಳ್ಳಲು ತೊಟ್ಟಿಯ ತಳಭಾಗದಲ್ಲಿ ಅಲ್ಲಲ್ಲಿ ರಂಧ್ರಗಳಿರುವ 3 ವೃತ್ತಾಕಾರದ ಕೊಳವೆ ಸಾಲುಗಳಲ್ಲಿ ನೀರು ಬಿಡಲಾಗುವುದು. ಹೀಗೆ ಮಾಡುವುದರಿಂದ ನೀರಿನಲ್ಲಿ ಹೆಚ್ಚು ಗಾಳಿ ಕರಗುವುದು ಮತ್ತು ಮೊಟ್ಟೆಗಳು ಒಂದು ಕಡೆ ಸಂಗ್ರಹಗೊಳ್ಳದೆ ನಿರಂತರ ತೇಲುತ್ತಿರುತ್ತವೆ
- ತೊಟ್ಟಿಯ ಮಧ್ಯಭಾಗದಲ್ಲಿ ನೈಲಾನ್ ಬಲೆಯಿಂದ ಆವರಿಸಿದ ವೃತ್ತಾಕಾರದ ರಚನೆ
- ಕೇಂದ್ರದಲ್ಲಿ ನೀರು ಹೊರಹೋಗುವ ಕೊಳವೆಯಿದ್ದು, ತೊಟ್ಟಿಯಲ್ಲಿ ನೀರಿನ ಮಟ್ಟಕ್ಕೆ ಅನುಗುಣವಾಗಿ ಇದರ ಎತ್ತರವನ್ನು ಹೆಚ್ಚು ಕಡಿಮೆ ಮಾಡಬಹುದು
- ಮೊಟಟೆಯಿಂದ ಹೊರಬಂದ ಮೀನುಮರಿಗಳನ್ನು ಮರಿ ಸಂಗ್ರಹಣಾ ತೊಟ್ಟಿಯಲ್ಲಿ ಸಂಗ್ರಹಿಸಲು ಅನುಕೂಲವಾಗುವಂತೆ ಕೊಳವೆ ಜೋಡಣೆ
ಮೀನುಮರಿ ಉತ್ಪಾದನಾ ಕಾರ್ಯ
- ಪ್ರಾರಂಭಿಸುವ ಮೊದಲು ಮೊಟ್ಟೆ ಬಿಡುವ ತೊಟ್ಟಿಯಲ್ಲಿ ನೀರು ಸಂಗ್ರಹಿಸಿ ತೊಟ್ಟಿಯಲ್ಲಿ ನೀರು ಸುತ್ತುವಂತೆ ಮಾಡುವುದು
- ಹೆಣ್ಣು ಮತ್ತು ಗಂಡು ತಳಿ ವರ್ಧಕಗಳಿಗೆ ಪಿಟ್ಯುಟರಿ ಅಥವಾ ಓವಾಪ್ರಿಮ್ ಚುಚ್ಚುಮದ್ದು ನೀಡಿದ ನಂತರ ಈ ತೊಟ್ಟಿಯಲ್ಲಿ ಬಿಡುವುದು
- ತೊಟ್ಟಿಯಲ್ಲಿ ನಿರಂತರವಾಗಿ ನೀರು ಹರಿಯುವಿಕೆಯಿಂದ ನದಿಯ ವಾತಾವರಣ ಸೃಷ್ಟಿಸಿ ಮೀನು ಮೊಟ್ಟೆಯಿಡಲು ಪ್ರಚೋದನೆ ಮಾಡುವುದು
- ಮೀನು ಮೊಟ್ಟೆಯಿಟ್ಟ ನಂತರ ಮೊಟ್ಟೆಗಳನ್ನು ಮರಿ ಹೊರ ತರುವ ತೊಟ್ಟಿಗೆ ವರ್ಗಾಯಿಸುವುದು. ಒಂದು ಬಾರಿಗೆ 200-250 ಲೀ. ಅಥವಾ 15 ರಿಂದ 25 ಲಕ್ಷ ಮೊಟ್ಟೆಗಳನ್ನು ಹಾಕಬಹುದು
- ಮೊಟ್ಟೆಯಿಂದ ಮರಿ ಹೊರಬರಲು 16-20 ಗಂಟೆಗಳಾಗುತ್ತದೆ. ಮೊಟ್ಟೆಯ ಹೊರಕವಚವು ಹರಿಯುವ ನೀರಿನಲ್ಲಿ ಕ್ರಮೇಣ ಕರಗಿ ಹೊರಹೋಗುವುದು
- ಒಂದು ಬಾರಿ ಮೀನುಮರಿ ಉತ್ಪಾದಿಸಲು 4-5 ದಿನ ಬೇಕಾಗುವುದು. ನಂತರ ಈ ಕಾರ್ಯವನ್ನು ಪುನರಾವರ್ತಿಸಬಹುದು
- ಒಂದು ಮೀನುಮರಿ ಉತ್ಪಾದನಾ ಋತುವುನಲ್ಲಿ5-7 ಕೋಟಿ ಮೀನುಮರಿ ಉತ್ಪಾದಿಸಬಹುದು
- ಹ್ಯಾಚರಿ ನಿರ್ಮಿಸಲು ಕನಿಷ್ಟ ರೂ.2 ಲಕ್ಷ ಬಂಡವಾಳ ಅವಶ್ಯವಿದೆ
ಸ್ಪಾನ್ ಮೀನುಮರಿಗಳ ಪಾಲನೆ
- ಸಾಮಾನ್ಯವಾಗಿ ರಾಜ್ಯದ ಮೀನುಮರಿ ಉತ್ಪಾದನಾ ಕೇಂದ್ರಗಳಲ್ಲಿ ಪ್ರೌಢಾವಸ್ಥೆಯ ವಿವಿಧ ಗೆಂಡೆ ಜಾತಿಯ ಮೀನುಗಳನ್ನು ಉಪಯೋಗಿಸಿ ಸ್ಪಾನ್ ಮೀನು ಮರಿಗಳನ್ನು ಉತ್[ಪಾದಿಸಲಾಗುತ್ತಿದೆ
- ಸ್ಪಾನ್ ಮೀನು ಮರಿಗಳು 6 ಮಿ.,ಇ. ಉದ್ದವಿದ್ದು ಉತ್ಪಾದನಾ ಕೆರೆ/ಕೊಳಗಳಿಗೆ ನೇರವಾಗಿ ಬಿತ್ತುವುದು ಅಸರ್ಮಪಕ
- ನರ್ಸರಿ ಕೊಳಗಳಲ್ಲಿ ಸ್ಪಾನ್ ಮರಿಗಳನ್ನು ಪಾಲನೆ ಮಾಡಿ ಬೆಳೆಯುವುದು ಸೂಕ್ತ ಮತ್ತು ಲಾಭದಾಯಕ
Share your comments