1. ಪಶುಸಂಗೋಪನೆ

ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

 ಕೊಡಗು ಜಿಲ್ಲೆಯ ಕಾಬ್‌ಸೆಟ್ ಸಂಸ್ಥೆಯ ವತಿಯಿಂದ ಸೆ .21 ರಿಂದ 30 ರವರೆಗೆ ಹತ್ತು ದಿನಗಳ ಕಾಲ ಹೈನುಗಾರಿಕಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಯು ಯೂನಿಯನ್ ಆರ್ ಸೆಟ್ ಸಂಸ್ಥೆಯಲ್ಲಿ ನಡೆಯಲಿದೆ . 18 ರಿಂದ 45 ವರ್ಷದೊಳಗಿನ ನಿರುದ್ಯೋಗಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದು.

ತರಬೇತಿಯ ವೇಳೆ ಉಚಿತವಾಗಿ ಊಟ , ವಸತಿ ಸೌಲಭ್ಯ ಕಲ್ಪಿಸಲಾಗಿದೆ . ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಯೂನಿಯನ್ ಬ್ಯಾಂಕ್ , ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೊಡಗು , ದೂರವಾಣಿ ಸಂಖ್ಯೆ 9686406181 , 9449402081 ಹಾಗೂ 9449614679 ಸಂಪರ್ಕಿಸಿ .

ಉಚಿತ ಊಟ, ವಸತಿಯೊಂದಿಗೆ 'ಕೃಷಿ ಉದ್ಯಮಿ' ಟ್ರೈನಿಂಗ್‌: ಅರ್ಜಿ ಆಹ್ವಾನ

ಹಾವೇರಿ ಜಿಲ್ಲೆಯ ದೇವಗಿರಿಯಲ್ಲಿರುವ ವಿಜಯಾ ಬ್ಯಾಂಕ್‌ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಸೆಪ್ಟೆಂಬರ್ 13 ರಿಂದ 25 ರವರೆಗೆ 13 ದಿನಗಳ 'ಕೃಷಿ ಉದ್ಯಮಿ' ತರಬೇತಿ ಆಯೋಜಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸುಧಾರಿತ ಕೃಷಿ ಪದ್ಧತಿ, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ, ತೋಟಗಾರಿಕೆ, ಸುಧಾರಿತ ಬೀಜಗಳ ಉತ್ಪಾದನೆ, ಸುಧಾರಿತ ನೀರಾವರಿ ಪದ್ಧತಿ, ಮಣ್ಣಿನ ಫಲವತ್ತತೆಯ ಪರೀಕ್ಷೆ, ಸಾವಯವ ಕೃಷಿ ಪದ್ಧತಿ, ಎರೆಹುಳು ಗೊಬ್ಬರ ತಯಾರಿಕೆ ಒಳಗೊಂಡಂತೆ ಸಮಗ್ರ ಕೃಷಿ ತರಬೇತಿ ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.  ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್‌, ಬ್ಯಾಂಕ್‌ ಪಾಸ್ ಬುಕ್,  ರೇಷನ್ ಕಾರ್ಡ್‌,  ಇತ್ತೀಚಿನ ಭಾವಚಿತ್ರ,  ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರ  ಜೆರಾಕ್ಸ್‌ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಇತರೆ ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ವಿಜಯ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ದೇವಗಿರಿ, ಹಾವೇರಿ' ಇಲ್ಲಿಗೆ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08375-296360, 9611645907/ 9110865650 ಸಂಖ್ಯೆಗಳಿಗೂ ಕರೆ ಮಾಡಬಹುದು. ತರಬೇತಿ ಪಡೆಯಲು ಹಾವೇರಿ ಜಿಲ್ಲೆಯವರಿಗೆ ಮಾತ್ರ ಅವಕಾಶ ಇರುತ್ತದೆ. ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ ಇರುತ್ತದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ

Published On: 15 September 2021, 08:56 PM English Summary: Dairy training to farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.