winter crops: ಹಿಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ 54 ಸಾವಿರ ಹೆಕ್ಟೇರ್ ಗೋಧಿ, 18 ಲಕ್ಷ ಹೆಕ್ಟೇರ್‌ಗಳಲ್ಲಿ ಸಾಸಿವೆ ಬಿತ್ತನೆ ಮಾಡಲಾಗಿದೆ.
ಎಮ್ಮೆ ಕರುವಿನ ಮೇಲೆ ಅತ್ಯಾಚಾರ; ವ್ಯಕ್ತಿ ಬಂಧನ!
ಕೃಷಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಪ್ರಸಕ್ತ 2022-23ರ ಹಿಂಗಾರು ಹಂಗಾಮಿನಲ್ಲಿ ಇದುವರೆಗೆ 54 ಸಾವಿರ ಹೆಕ್ಟೇರ್‌ಗಳಲ್ಲಿ ಗೋಧಿಯನ್ನು ಬಿತ್ತನೆ ಮಾಡಲಾಗಿದೆ.
ಇದು ಕಳೆದ ವರ್ಷದ ಅವಧಿಯವರೆಗೆ ಬಿತ್ತನೆ ಮಾಡಿದ್ದ 34 ಸಾವಿರ ಹೆಕ್ಟೇರ್ ಗೋಧಿಗಿಂತ ಶೇ.59 ರಷ್ಟು ಹೆಚ್ಚು.
ಶುಕ್ರವಾರ ಬಿಡುಗಡೆ ಮಾಡಲಾಗಿರುವ ಸಗರ್ಕಾರದ ಅಂಕಿ ಅಂಶಗಳ ಪ್ರಕಾರ
ಹಿಂಗಾರು ಹಂಗಾಮಿನಲ್ಲಿ ಇದುವರೆಗೆ 54 ಸಾವಿರ ಹೆಕ್ಟೇರ್‌ನಲ್ಲಿ ಗೋಧಿ ಮತ್ತು ಸುಮಾರು 18 ಲಕ್ಷ ಹೆಕ್ಟೇರ್‌ನಲ್ಲಿ ಸಾಸಿವೆ ಬಿತ್ತನೆಯಾಗಿದೆ.
ಮುಖ್ಯವಾದ ಹಿಂಗಾರಿನ ಬೆಳೆಗಳಾದ ಗೋಧಿಯ ಬಿತ್ತನೆಯು ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಿ ಮಾರ್ಚ್-ಏಪ್ರಿಲ್‌ಗೆ ಮುಕ್ತಾಯವಾಗುತ್ತದೆ.
ಇದರೊಂದಿಗೆ ಪ್ರಮುಖ ಬೆಳೆಗಳು ಹೆಸರುಬೇಳೆ, ಬಾರ್ಲಿ, ಆಲೂಗಡ್ಡೆ, ಸಾಸಿವೆ ಬೆಳೆಯನ್ನೂ ಬೆಳೆಯಲಾಗುತ್ತದೆ.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ: ಕೇವಲ 20 ರೂಪಾಯಿಗೆ 2 ಲಕ್ಷದ ಅಪಘಾತ ವಿಮೆ!
ಬಿತ್ತನೆಯಲ್ಲಿ ಉತ್ತರ ಭಾರತದ ಸ್ಥಿತಿ
ಉತ್ತರ ಭಾರತದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ, ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಹರಿಯಾಣದಲ್ಲಿ ರಬಿ ಬೆಳೆಗಳ ಬಿತ್ತನೆ ನಡೆಯುತ್ತಿದೆ.
ಅಕ್ಟೋಬರ್ 25 ರವರೆಗೆ ಉತ್ತರ ಪ್ರದೇಶದಲ್ಲಿ ಸುಮಾರು 39 ಸಾವಿರ ಹೆಕ್ಟೇರ್, ಉತ್ತರಾಖಂಡದಲ್ಲಿ 9 ಸಾವಿರ ಹೆಕ್ಟೇರ್,
ರಾಜಸ್ಥಾನದಲ್ಲಿ 2 ಸಾವಿರ ಹೆಕ್ಟೇರ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸಾವಿರ ಹೆಕ್ಟೇರ್‌ಗಳಲ್ಲಿ ಗೋಧಿ ಬಿತ್ತನೆಯಾಗಿದೆ ಎಂದು ಹೊಸ ಅಂಕಿಅಂಶಗಳು ಉಲ್ಲೇಖಿಸಿವೆ.
ಈ ಹಂಗಾಮಿನಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಪ್ರದೇಶ 8.82 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ.
ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 5.91 ಲಕ್ಷ ಹೆಕ್ಟೇರ್‌ನಲ್ಲಿ ಬೇಳೆಕಾಳುಗಳನ್ನು ಬೆಳೆಯಲಾಗುತ್ತಿತ್ತು.
ಆದರೆ, ಒಂದು ವರ್ಷದ ಹಿಂದೆ ಈ ಅವಧಿಯವರೆಗೆ 5.91 ಲಕ್ಷ ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳನ್ನು 6.96 ಲಕ್ಷ ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಗಿದೆ.
"ಐಟಮ್" ಎಂದು ಚುಡಾಯಿಸಿದವನಿಗೆ ಜೈಲು ಸಜೆ!
19.96 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಬಿತ್ತನೆ
ಪ್ರಸಕ್ತ ಹಂಗಾಮಿನಲ್ಲಿ 19.96 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆರು ವಿಧದ ಎಣ್ಣೆಕಾಳು ಬೆಳೆಗಳನ್ನು ಬಿತ್ತನೆಯಾಗಿದೆ.
ಕಳೆದ ಹಂಗಾಮಿನ ಈ ಅವಧಿಯಲ್ಲಿ 15.13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಯಲಾಗಿತ್ತು.
ಸಾಸಿವೆ ಬೆಳೆಯನ್ನು ಇದುವರೆಗೆ ಸುಮಾರು 18 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.
ಕಳೆದ ವರ್ಷದ ಅವಧಿಯಲ್ಲಿ 14.21 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾಸಿವೆ ಬಿತ್ತನೆ ಮಾಡಲಾಗಿತ್ತು.
ಪ್ರಸಕ್ತ ಹಂಗಾಮಿನಲ್ಲಿ ಅಕ್ಟೋಬರ್ 28 ರವರೆಗೆ ಎಲ್ಲಾ ಬೆಳೆಗಳ ಒಟ್ಟು ವಿಸ್ತೀರ್ಣ 37.75 ಲಕ್ಷ ಹೆಕ್ಟೇರ್ ಆಗಿದೆ.
ಇದು ಒಂದು ವರ್ಷದ ಹಿಂದಿನ ಅವಧಿಯಲ್ಲಿ 27.24 ಲಕ್ಷ ಹೆಕ್ಟೇರ್ ಆಗಿತ್ತು.
ಮಾನ್ಸೂನ್ ಬೆಳೆಗಳನ್ನು ಕಟಾವು ಮಾಡಿದ ನಂತರ, ಮುಂದಿನ ವಾರಗಳಲ್ಲಿ ಹಿಂಗಾರು ಬೆಳೆಗಳ ಬಿತ್ತನೆ ಚುರುಕುಗೊಳ್ಳುವ ನಿರೀಕ್ಷೆಯಿದೆ ಎಂದು ಕೃಷಿ ಸಚಿವಾಲಯದ ವರದಿ ತಿಳಿಸಿದೆ.
Share your comments