1. ಅಗ್ರಿಪಿಡಿಯಾ

ಹಿಪ್ಪು ನೇರಳೆ ಬೇಸಾಯಕ್ಕೆ ಸೂಕ್ತವಾದ ಮಣ್ಣು ಯಾವುದು..ಹಾಗೂ ಅದರ ಪರೀಕ್ಷೆ ಹೇಗೆ..?

Maltesh
Maltesh
Morus alba

ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುವ ಶಕ್ತಿಗೆ ಮಣ್ಣಿನಫಲವತ್ತತೆ ಎನ್ನುತ್ತೇವೆ. ಒಂದೇ ಕ್ಷೇತ್ರದಲ್ಲಿ ನಿರಂತರವಾಗಿ ಬೆಳೆ ಬೆಳೆಸುವುದರಿಂದ ಮಣ್ಣನಲ್ಲಿರುವ ಪೋಷಕಾಂಶಗಳ ಲಭ್ಯತೆಯ ಪ್ರಮಾಣ ಕ್ಷೀಣ ಸುತ್ತದೆ. ಈ ಪೋಷಕಾಂಶಗಳ ಲಭ್ಯತೆಯು ಮಣ್ಣನ ಭೌತಿಕ ಹಾಗೂ ಕೆಲವು ರಾಸಾಯನಿಕ ಕ್ರಿಯೆಗಳನ್ನು ಅವಲಂಬಿಸಿರುತ್ತದೆ.

ಸಸ್ಯದ ಬೆಳವಣಗೆ ಮತ್ತು ವಯಸ್ಸಿನ ಆಧಾರದ ಮೇಲೆ ಪೋಷಕಾಂಶಗಳು ನಿರ್ಧಿಷ್ಟ ಪ್ರಮಾಣದಲ್ಲಿ ಬೇಕಾಗುತ್ತವೆ. ಆದುದರಿಂದ ಫಲವತ್ತಾದ ಮಣ್ಣು ಎಂದರೆ ಈ ಎಲ್ಲಾ ಪೋಷಕಾಂಶಗಳನ್ನು ಸಸ್ಯಗಳಿಗೆ ಬೇಕಾಗುವ ಪ್ರಮಾಣದಲ್ಲಿ ಮತ್ತು ದೊರೆಯುವ ರೂಪದಲ್ಲಿ ಅವುಗಳ ಬೆಳವಣಗೆಯ ಹಂತದಲ್ಲಿ ಪೂರೈಸುವಂತಿರಬೇಕು. ಹಿಪ್ಪುನೇರಳೆಗೆ (Morus alba)ಬೇಕಾದ ಮಣ್ಣನ ಫಲವತ್ತತೆಯ ವಿವರಗಳನ್ನು ನೀಡಲಾಗಿದೆ.

ಬೀಟ್ರೂಟ್ ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ..!

ಮಣ್ಣು ಪರೀಕ್ಷೆ ಎಂದರೇನು?

ಮಣ್ಣಿನ ಪರೀಕ್ಷೆಯು ಒಂದು ಪ್ರಕ್ರಿಯೆಯಾಗಿದ್ದು, ಅದರ ಮೂಲಕ ಅಂಶಗಳನ್ನು (N, P, K, pH, EC, Ca, Mg, S, ಸಾವಯವ ಇಂಗಾಲ ಮತ್ತು ಸೂಕ್ಷ್ಮ ಪೋಷಕಾಂಶಗಳು: Zn, Br, Mn, Fe, Cu, Mo) ಮಣ್ಣಿನಿಂದ ರಾಸಾಯನಿಕವಾಗಿ ತೆಗೆದುಹಾಕಲಾಗುತ್ತದೆ. ಮತ್ತು ಮಾದರಿಯೊಳಗೆ ಅವರ "ಪ್ಲಾಂಟ್ ಲಭ್ಯವಿರುವ" ವಿಷಯಕ್ಕಾಗಿ ಅಳೆಯಲಾಗುತ್ತದೆ.

ಮಾದರಿಯಲ್ಲಿ ಲಭ್ಯವಿರುವ ಪೋಷಕಾಂಶಗಳ ಪ್ರಮಾಣವು ಮಣ್ಣಿನ ಪರೀಕ್ಷಾ ಸೇವೆಗಳಲ್ಲಿ ಶಿಫಾರಸು ಮಾಡಲಾದ ಗೊಬ್ಬರದ ಪ್ರಮಾಣವನ್ನು ನಿರ್ಧರಿಸುತ್ತದೆ. ಮಣ್ಣಿನ ಪರೀಕ್ಷೆಯು ಮಣ್ಣಿನ pH, ಹ್ಯೂಮಿಕ್ ಮ್ಯಾಟರ್ ಮತ್ತು ವಿನಿಮಯ ಮಾಡಬಹುದಾದ ಆಮ್ಲೀಯತೆಯನ್ನು ಸಹ ಅಳೆಯುತ್ತದೆ. ಈ ವಿಶ್ಲೇಷಣೆಗಳು ಸುಣ್ಣದ ಅಗತ್ಯವಿದೆಯೇ ಮತ್ತು ಹಾಗಿದ್ದಲ್ಲಿ, ಎಷ್ಟು ಅನ್ವಯಿಸಬೇಕು ಎಂಬುದನ್ನು ಸೂಚಿಸುತ್ತವೆ.

ಇಂದು ಕೃಷಿಯಲ್ಲಿ, ಶೇಕಡಾವಾರು ಸುಧಾರಿಸಿದೆ ಎಂದು ಸಾಕ್ಷ್ಯಗಳು ಸೂಚಿಸುತ್ತವೆ. ಪ್ರಸ್ತುತ ಪರಿಸ್ಥಿತಿಗಳಲ್ಲಿ ಕೃಷಿಯಲ್ಲಿ ಲಾಭದಾಯಕವಾಗಿ ಉಳಿಯಲು, ಪ್ರತಿ ರೈತರು ಮತ್ತು ಬೆಳೆಗಾರರು ಫಲವತ್ತತೆಯ ಮಟ್ಟವನ್ನು ಅಳೆಯಬೇಕು ಎಂದು ಪರಿಗಣಿಸಬೇಕು.

ಈ ಮಾಪನಗಳನ್ನು ಮಣ್ಣಿನ ಫಲವತ್ತತೆಯನ್ನು ಹೆಚ್ಚು ನಿಖರವಾಗಿ ಉನ್ನತ ಉತ್ಪಾದನೆ ಮತ್ತು ಗುಣಮಟ್ಟವನ್ನು ಸಾಧಿಸಲು ಬಳಸಬಹುದು, ಆದರೆ ಗುರಿಯನ್ನು ಪೂರೈಸಲು ಅಗತ್ಯವಿರುವ ಕನಿಷ್ಠ ವೆಚ್ಚವನ್ನು ಇಟ್ಟುಕೊಳ್ಳಬಹುದು. ಉತ್ತಮ ದಕ್ಷತೆಯನ್ನು ಪಡೆಯಲು ಎರಡು ರೀತಿಯ ಮಣ್ಣಿನ ಪರೀಕ್ಷೆಯನ್ನು ಶಿಫಾರಸು ಮಾಡಲಾಗಿದೆ.

ಸೋಯಾ ಕೃಷಿ ಮಾಡುವ ಮೊದಲು ಬೆಳೆಗಾರರು ಈ ಸಂಗತಿಗಳ ಬಗ್ಗೆ ತಿಳಿದಿರಬೇಕು

a) ಮಣ್ಣು ಪರೀಕ್ಷೆಯ ಶಿಫಾರಸು

b)ಮಣ್ಣಿನ ಫಲೀಕರಣ ಶಿಫಾರಸು.

ಮಣ್ಣಿನ ಮಾದರಿಯನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳಬೇಕು. ಬಳಸಿದ ಉಪಕರಣಗಳು, ಮಾದರಿಯ ಪ್ರದೇಶ, ಮಾದರಿಯ ಆಳ ಮತ್ತು ಸರಿಯಾದ ಮಿಶ್ರಣ, ಒದಗಿಸಿದ ಮಾಹಿತಿ ಮತ್ತು ಪ್ಯಾಕೇಜಿಂಗ್ ಎಲ್ಲವೂ ಮಾದರಿಯ ಗುಣಮಟ್ಟವನ್ನು ಪ್ರಭಾವಿಸುತ್ತದೆ.

ಸ್ಥಳದಲ್ಲಿ ಮಣ್ಣನ್ನು ತೆಗೆಯುವ ಮೊದಲು ಮಣ್ಣನ ಮೇಲಿನ ಹುಲ್ಲು, ಕಸಕಡ್ಡಿಗಳನ್ನು ತೆಗೆಯಬೇಕು. ಸಾಮಾನ್ಯ ಮಣ್ಣು ಪರೀಕ್ಷೆ ಹಾಗೂ ಗೊಬ್ಬರಗಳ ಶಿಫಾರಸ್ಸಿಗಾಗಿ ಒಂದು ಅಡಿಯಷ್ಟು ಆಳದ ಮಣ್ಣನ ಮಾದರಿ ಸಾಕಾಗುತ್ತದೆ. ಇದಕ್ಕಾಗಿ ಪ್ರತಿ ಜಾಗದಲ್ಲಿ ‘ಗಿ’ ಆಕಾರದ 30 ಸೆಂ.ಮೀ. ಆಳದ ಗುಂಡಿ ತೋಡಿ, ಗುಂಡಿಯ ಬದಿಯಿಂದ ಒಂದು ಅಂಗುಲದಷ್ಟು ಪದರವನ್ನು ಕೆರೆದು ಪ್ರತಿ ಗುಂಡಿಯಿಂದ ಸುಮಾರು 250-500 ಗ್ರಾಂ ಮಣ್ಣನ್ನು ಶೇಖರಿಸಬೇಕು.

ಗಟ್ಟಿ ಜಮೀನಿನಲ್ಲಿ ಘನಾಕೃತಿಯಲ್ಲಿ ಗುಂಡಿಯನ್ನು ತೋಡಿ, ಒಂದು ಬದಿಯಿಂದ ಮಣ್ಣನ್ನು ಕೆರೆದು ಸಂಗ್ರಹಿಸಬೇಕು. ಈ ರೀತಿ 5-6 ಸ್ಥಳಗಳಿಂದ ಉಪಮಾದರಿಗಳನ್ನು ಸಂಗ್ರಹಿಸಬೇಕು. ಇದಕ್ಕಾಗಿ ಮಣ್ಣು ಮಾದರಿ ಸಂಗ್ರಹಣೆಯ ಕೊಳವೆ, ಬೈರಿಗೆ, ಸನಿಕೆ, ಪಿಕಾಸಿಗಳನ್ನು ಮತ್ತು ಕುರ್ಪಿಯನ್ನು ಉಪಯೋಗಿಸಬಹುದು.

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

ಇಂಡೋನೇಷ್ಯಾ ನಿಷೇಧದ ನಡುವೆಯೂ ಬೇಡಿಕೆಯಲ್ಲಿರುವ ಭಾರತದ ಖಾದ್ಯ ತೈಲ

ಮೇಲೆ ತಿಳಿಸಿದಂತೆ ಆಯ್ದ ಜಾಗಗಳಿಂದ ಸಂಗ್ರಹಿಸಿದ 5-6 ಮಣ್ಣನ ಮಾದರಿಗಳನ್ನು ಒಟ್ಟುಗೂಡಿಸಿ, ಶುದ್ದವಾದ ಬಟ್ಟೆ ಅಥವ ಪಾಲಿಥಿನ್ ಹಾಳೆಯಲ್ಲಿ ಹರಡಿ, ಕಸಕಡ್ಡಿ, ಕಲ್ಲುಗಳನ್ನು ಬೇರ್ಪಡಿಸಬೇಕು. ನಂತರ ಹೆಂಟೆಗಳನ್ನು ಪುಡಿಮಾಡಿ ಚೆನ್ನಾಗಿ ಮಿಶ್ರ ಮಾಡಿ, ತಟ್ಟೆಯಾಕಾರದಲ್ಲಿ ಹರಡಿ ನಾಲ್ಕು ಸಮಭಾಗಗಳನ್ನಾಗಿ ವಿಂಗಡಿಸಬೇಕು.

ಪ್ರತಿಬಾರಿ ಎರಡು ಎದರು ಬದುರಿನ ಭಾಗಗಳನ್ನು ತಿರಸ್ಕರಿಸಿ ಉಳಿದ ಎರಡು ಭಾಗಗಳನ್ನು ಪುನ: ಮಿಶ್ರ ಮಾಡಬೇಕು.  ಸುಮಾರು 500-750 ಗ್ರಾಂ. ಮಣ್ಣು ಉಳಿಯುವವರೆಗೆ ಈ ವಿಧಾನವನ್ನು ಪುನರಾವರ್ತಿಸಬೇಕು. ನಂತರ ಮಣ್ಣನ ಮಾದರಿಯನ್ನು ನೆರಳಿನಲ್ಲಿ ಒಣಗಿಸಿ ಶುದ್ಧವಾದ ಬಟ್ಟೆ ಅಥವ ಪಾಲಿಥಿನ್ ಚೀಲದಲ್ಲಿ ಹಾಕಿ ತೋಟಕ್ಕೆ ಸಂಬಂಧಿಸಿದ ವಿವರಗಳ ಚೀಟಿಯನ್ನು ಹಾಕಬೇಕು.

ಚೀಟಿಯಲ್ಲಿ ರೈತನ ಹೆಸರು, ತೋಟದ ಗುರುತಿನ ಸಂಖ್ಯೆ, ಮಾದರಿ ತೆಗೆದ ದಿನಾಂಕ, ಮುಂತಾದ ವಿವರಗಳನ್ನು ಸ್ಪಷ್ಟವಾಗಿ ಬರೆದಿರಬೇಕು.

ಮಣ್ಣನ ಫಲವತ್ತತೆ ನೇರವಾಗಿ ಮಣ್ಣನ ರಸಸಾರವನ್ನು ಅವಲಂಬಿಸಿರುತ್ತದೆ. ಮಣ್ಣನ ರಸಸಾರ 6.3 ಕ್ಕಿಂತ ಕಡಿಮೆಯಿದ್ದಲ್ಲಿ ಆಮ್ಲೀಯ ಮಣ್ಣು ಎಂದು ಹಾಗೂ ಮಣ್ಣನ ರಸಸಾರ 8.3 ಕ್ಕಿಂತ ಹೆಚ್ಚು ಇದ್ದಲ್ಲಿ ಕ್ಷಾರೀಯ ಮಣ್ಣು ಎಂದು ಕರೆಯುತ್ತಾರೆ.

ಗುಡ್‌ನ್ಯೂಸ್‌: ದೇಶದಲ್ಲಿ ಅಡುಗೆ ಎಣ್ಣೆಯ ದರ ಏರಿಕೆಯಾಗಲ್ಲ ಎಂದ ಕೇಂದ್ರ

ಗುಡ್‌ನ್ಯೂಸ್‌: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..

ಇದಲ್ಲದೆ ಮಣ್ಣನಲ್ಲಿ ಕರಗುವ ಲವಣಗಳ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚಿನ ವಿದ್ಯುತ್ ಸಂವಹನ, ಕಡಿಮೆ ರಸಸಾರ ಹಾಗೂ ಕಡಿಮೆ ಪ್ರಮಾಣದಲ್ಲಿ ವಿನಿಮಯವಾಗುವಂತಹ ಸೋಡಿಯಂ ಇದ್ದರೆ ಅದನ್ನು ಲವಣದ ಅಥವ ಚೌಳು ಮಣ್ಣು ಎಂದು ಕರೆಯುತ್ತಾರೆ. ಮೇಲೆ ತಿಳಿಸಿದ ಮಣ್ಣುಗಳನ್ನು ಒಟ್ಟಾರೆಯಾಗಿ ಸಮಸ್ಯಾತ್ಮಕ ಮಣ್ಣುಗಳೆಂದು ಕರೆಯುತ್ತಾರೆ. ಇಂತಹ ಮಣ್ಣು ಹಿಪ್ಪುನೇರಳೆ ಬೇಸಾಯಕ್ಕೆ ಯೋಗ್ಯವಲ್ಲ. ಹಿಪ್ಪುನೇರಳೆ ಬೇಸಾಯಕ್ಕೆ 6.3 ರಿಂದ 7.2 ರ ರಸಸಾರ ಹೊಂದಿರುವ ಮಣ್ಣು ಸೂಕ್ತ.

ಮಣ್ಣು ಪರೀಕ್ಷೆ ಮಾಡುವ ಸಂಸ್ಥೆಗಳು:

ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ, ತಲಘಟ್ಟಪುರ, ಬೆಂಗಳೂರು

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಮೈಸೂರು

ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು

ಕೃಷಿ ಇಲಾಖೆ

ತೋಟಗಾರಿಕೆ ಇಲಾಖೆ

ಜುವಾರಿ ಅಗ್ರಿಕಲ್ಚರಲ್ ಡೆವಲಪ್‍ಮೆಂಟ್ ಲ್ಯಾಬೋರೇಟರಿ

Published On: 29 May 2022, 11:12 AM English Summary: What is the best soil for Morus alba cultivation?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.