ನಾವು ಈ ಭೂಮಿಯ ಮೇಲೆ ಸಾಕಷ್ಟು ವಿಸ್ಮಯವಾದ ಸಂಗತಿಗಳನ್ನು ನೋಡುತ್ತಲೆ ಇರುತ್ತೇವೆ. ಇದರಲ್ಲಿ ಕೆಲವೊಂದು ಅಂದಾಜಿಗೂ ಸಿಗಂದಂತಾ ಹಾಗೂ ತರ್ಕಕ್ಕೆ ನಿಲುಕದ ವಿಸ್ಯಗಳಾಗಿರುತ್ತೇವೆ. ಇತ್ತೀಚಿಗೆ ಬೇವಿನ ಮರದಲ್ಲಿ ಹಾಲಿನ ನೊರೆಯಂತೆ ದ್ರವ್ಯವು ಉಕ್ಕುತ್ತಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಅದನ್ನು ಕಂಡ ನೆಟಿಜೆನ್ಸ್ ಇದೆನಪ್ಪಾ ಚಮತ್ಕಾರ ಎಂದು ಹೌಹಾರಿದ್ದರು. ಸದ್ಯ ಅದೇ ತೆರನಾದ ಇನ್ನೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು ಈ ಮರದಲ್ಲಿ ನೀರು ಭೊರ್ಗರೆಯುತ್ತಿದೆ..! ಅರೇ ಇದೇನಿದು ಮರದಲ್ಲಿ ನೀರು ಭೊರ್ಗರೆಯುತ್ತಿದೇಯಾ ಎಂದು ನೀವು ಬಾಯಿ ಮೇಲೆ ಬೇರಳಿಟ್ಟುಕೊಂಡರೆ ತಪ್ಪಲ್ಲ ಬಿಡಿ.
ಹಳೆಯದಾದ ಬೃಹತ್ ಮರದಿಂದ ನೀರು ರಭಸವಾಗಿ ಹರಿಯುತ್ತಿರುವ ವಿಡಿಯೋವೊಂದನ್ನು ಸ್ಥಳೀಯ ನಿವಾಸಿಯಾದ ಹೂಡಾಸಿ ಎಂಬುವವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
10ನೇ ತರಗತಿ ಪಾಸ್ ಆದವರಿಗೆ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾನಲ್ಲಿ ಉದ್ಯೋಗಾವಕಾಶ
ಸದ್ಯ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ವೀಡಿಯೊವನ್ನು Instagram ಅಪ್‌ಲೋಡ್ ಮಾಡಲಾಗಿದೆ. ಎಲೆಗಳಿಲ್ಲದೆ ಒಣಗಿ ನಿಂತಿರುವ ಈ ಮಲ್ಬೆರಿ ಮರದ ಕಾಂಡದಿಂದ ನೀರು ಹೊಮ್ಮುತ್ತಿದೆ ಅದು ರಭಸವಾಗಿ..ಮುಂದೆ ಈ ನೀರಿನಿಂದ ವ್ಯಕ್ತಿಯೋರ್ವರು ಮುಖ ತೊಳೆಯುತ್ತಿರುವುದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದು.
ಈ ವಿಶೇಷ ವಿದ್ಯಮಾನವು ಭೂಮಿಯಲ್ಲಿನ ಬುಗ್ಗೆಗಳಿಂದಾಗಿ ಸಂಭವಿಸುತ್ತೆ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಭಾರೀ ಮಳೆಯಾಗಿ ಅದರ ಪರಿಣಾಮ ಒತ್ತಡ ಉಂಟಾದಾಗ ಈ ರೀತಿಯ ವಿದ್ಯಮಾನವು ಏರ್ಪಡುತ್ತದೆ ಎನ್ನಲಾಗುತ್ತಿದೆ.ಇದು ಮರದ ಕಾಂಡದಿಂದ ನೀರನ್ನು ಹೊರ ಹಾಕಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.
"ಫೌಂಟೆನ್ ಮರ.. ಈ ಪ್ರದೇಶದಲ್ಲಿ ಸಿಜೆವಾ ನದಿಯು ಇದ್ದು, ಈ ಮರ ಸಹ ನದಿಯ ತಟದಲ್ಲಿ ಬೆಳೆದಿದೆ, ಹಾಗಾಗಿ ಈ ಮರವು ನೀರನ್ನು ಹೊರ ಹಾಕುತ್ತಿರಬಹುದು" ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ. ಒಟ್ಟಿನಲ್ಲಿ ಈ ಮರದಿಂದ ನೀರು ಹರಿಯುತ್ತಿರುವ ವೀಡಿಯೋ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಬಹುದು.
ಗೂಗಲ್ ಪೇ, ಫೋನ್ ಪೇ ನಲ್ಲಿ ಒಂದು ದಿನಕ್ಕೆ ಎಷ್ಟು ಹಣ ಟ್ರಾನ್ಸ್‌ಫರ್ ಮಾಡಬಹುದು ಗೊತ್ತೆ?
ಕಾರಂಜಿ ಮರ. ಈ ಪ್ರದೇಶದಲ್ಲಿ ಪ್ರಾಚೀನ ಜಲಚರಗಳು ಇರುವುದರಿಂದ, ಸಿಜೆವಾ ನದಿಯಿಂದ, ಜಲಚರಗಳಲ್ಲಿ ಒಂದಾಗಿ ಬೆಳೆದ ಮರವು ನೀರನ್ನು ಮುಚ್ಚಿತು ಮತ್ತು ಮರದ ಈ ಕುಹರದ ಮೇಲೆ ನೀರು ಹೊರಹೊಮ್ಮಿತು. ಮಳೆಯ ಸಂ ದರ್ಭದಲ್ಲಿ ಮೂಲವನ್ನು ವಿಶೇಷವಾಗಿ ಉಚ್ಚರಿಸಲಾಗುತ್ತದೆ, " ಒಬ್ಬ ಬಳಕೆದಾರರು ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ.
Share your comments