1. ಅಗ್ರಿಪಿಡಿಯಾ

ಕೃಷಿಯಲ್ಲಿ ಮಹಿಳೆಯರಿಗೆ ಸಹಾಯ ಮಾಡುವ STIHLನ ಸಲಕರಣೆಗಳು

Kalmesh T
Kalmesh T
STIHL Equipment Helping Women in Agriculture

ನಿಮಗೆ ತಿಳಿದಿದೆಯೇ ಕೃಷಿಯಲ್ಲಿ 75% ಪ್ರಮಾಣದ ಮಹಿಳೆಯರು ಆರ್ಥಿಕತೆಯ ಬೆನ್ನೆಲುಬಾಗಿರುವಂತೆ, ಕೃಷಿ ಕ್ಷೇತ್ರದ ಬೆನ್ನೆಲುಬು ಮಹಿಳೆಯರು. ಆದರೂ ಕೆಲಸದ ಸಮಯ, ಉಪಕರಣಗಳು ಮತ್ತು ನೀತಿಗಳು ಮಹಿಳೆಯರಿಗೆ ಪೂರಕವಾಗಿಲ್ಲ.

ಮಹಿಳೆಯರು ಜಗತ್ತಿಗೆ ನೀಡುವ ಕೊಡುಗೆಗಳನ್ನು ಪ್ರಶಂಸಿಸಲು ಹಾಗೂ ಮಹಿಳೆಯರ ಕೊಡುಗೆಯನ್ನು ಸ್ಮರಿಸಲು ಪ್ರತಿ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.

ಅದೇ ಕೃಷಿ ಕ್ಷೇತ್ರಕ್ಕೆ ಬಂದರೆ, ಮಹಿಳೆಯರು ಕೃಷಿಯಲ್ಲಿ ಬಿತ್ತನೆಯ ಪ್ರಾರಂಭದ ಹಂತದಿಂದ ಬಿತ್ತನೆ ಮಾಡುವುದು, ಬಸಿಗಾಲುವೆ ನೀರಾವರಿ, ಫಲೀಕರಣ, ಸಸ್ಯ ಸಂರಕ್ಷಣೆ, ಕೂಯ್ದು ಕಳೆ ತೆಗೆಯುವುದು ಹಾಗೂ ಸಂಗ್ರಹಣೆಯವರೆಗೆ ಕೃಷಿ ಪ್ರಕ್ರಿಯೆ ಪ್ರತಿ ಹಂತದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಅದಾಗಿಯೂ, ಭಾರೀ ಸ್ವರೂಪದ ಕೃಷಿ ಉಪಕರಣಗಳು ಹಾಗೂ ಕೃಷಿ ಯಂತ್ರೋಪಕರಣಗಳಿಂದ ಕೆಲಸ ಮಾಡುವುದರಲ್ಲಿ ಸವಾಲನ್ನು ಎದುರಿಸುತ್ತಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕೃಷಿ ಕ್ಷೇತ್ರವನ್ನು ಬಲಪಡಿಸಲು ಕೃಷಿಯಲ್ಲಿ ಮಹಿಳೆಯರು ಸಬಲರಾಗಬೇಕು. ಇದಕ್ಕೆ ಪೂರಕವಾಗಿ ಉಪಕರಣಗಳು, ಸೀಡಿಗಳನ್ನು ರೂಪಿಸಿ, ಅವರ ಪರಿಶ್ರಮವನ್ನು ಕಡಿಮೆ ಮಾಡಿ ಸುಲಭವಾಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು.

ಸುಧಾರಿತ ಕೃಷಿ ಯಂತ್ರೋಪಕರಣಗಳ ಆವಿಷ್ಕಾರವೂ ಮಹಿಳಾ ರೈತರ ಸಮಸ್ಯೆಗೆ ಪರಿಹಾರ ಮತ್ತು ಅನುಕೂಲಕರವಾಗಿದೆ. ಆದ್ದರಿಂದ, ಈ ಬಾರಿಯ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಕೃಷಿಯಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಏಕೈಕ ಗಮನದೊಂದಿಗೆ ಆಚರಿಸೋಣ.

ಕೃಷಿಯಲ್ಲಿ ಮಹಿಳೆಯರಿಗೆ STIHL ಸಲಕರಣೆ

ಮಹಿಳೆಯರು ಕೃಷಿಯಲ್ಲಿ ಭಾಗವಹಿಸಲು ನೆರವಾಗಲು ತೊಡಗಿರುವ ಕಂಪನಿಗಳಲ್ಲಿ STIIL ಸಹ ಒಂದಾಗಿದೆ. ಹಗುರವಾದ, ಸುಲಭವಾಗಿ ಬಳಸಬಹುದಾದ ಮತ್ತು ಕಾಂಪ್ಯಾಕ್ಸ್‌ರ ಕೃಷಿ ಉಪಕರಣಗಳೊಂದಿಗೆ, STIHL ಮಹಿಳಾ ರೈತರ ಅನುಕೂಲಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಉತ್ತಮ ಸಾಧನಗಳನ್ನು ತಯಾರಿಸುತ್ತಿದೆ.

STIHL ತನ್ನ ಬಳಕೆದಾರರಿಗೆ ಅಂತಿಮ ಸೌಕರ್ಯವನ್ನು ಖಾತ್ರಿಗೊಳಿಸುತ್ತದೆ. ಈ ಕಾರ್ಯಸೂಚಿಯು ಅವರಿಗೆ ನವೀನ ಸಾಧನಗಳನ್ನು ರಚಿಸಲು ಸಹಾಯ ಮಾಡುತ್ತದೆ. ಇದು ಬಿತ್ತನೆ, ಕೊಯ್ದು ಮತ್ತು ಬೆಳೆಗಳನ್ನು ನಿರ್ವಹಿಸುವಾಗ ಎದುರಿಸುವ ಸವಾಲುಗಳನ್ನು ಕಡಿಮೆ ಮಾಡುತ್ತದೆ.

ಈ ಸಾಧನಗಳನ್ನು ಬಳಸಲು ಮತ್ತು ನಿರ್ವಹಿಸಲು ಸರಳವಾಗಿದ್ದು ಬಳಕೆದಾರರು ಸ್ವಾವಲಂಬಿಯಾಗಲು ಅನುವು ಮಾಡಿಕೊಡುತ್ತದೆ. ಕಡಿಮೆ ತೂಕದ ಹೊರತಾಗಿಯೂ ಈ ಉಪಕರಣಗಳು ಗುಣಮಟ್ಟ ಮತ್ತು ಸುರಕ್ಷಿತವಾಗಿರುತ್ತವೆ.

STIHL ಉಪಕರಣಗಳ ಬಳಕೆಯು ಕೃಷಿ ಬೆಳೆಗಳು, ಹಣ್ಣುಗಳು, ಹೂವುಗಳು), ತೋಟಗಾರಿಕೆ ಮತ್ತು ಉದ್ಯಾನಗಳಲ್ಲಿ ಬಳಸಲು ಬಳಕೆದಾರರಿಗೆ ಪ್ರಯೋಜನಕಾರಿಯಾಗಿದೆ. STIHL ಅನುಕೂಲತೆ ಮತ್ತು ವಿಶ್ವಾಸಾರ್ಹತೆಗೆ ಆದ್ಯತೆ ನೀಡುತ್ತದೆ.

ಪ್ರತಿಯೊಂದು ಉತ್ಪನ್ನವು ವಸ್ತುಗಳನ್ನು ಮತ್ತು ವೈಶಿಷ್ಟ್ಯಗಳನ್ನು ಹೊಂದಿದ್ದು, ಈ ಸಾಧನಗಳನ್ನು ಸುಲಭವಾಗಿ ಬಳಸಬಹುದಾಗಿದೆ. ಉದಾಹರಣೆಗೆ, ಬಹುಪಾಲು ಉಪಕರಣಗಳ ಮೇಲಿನ ಸಣ್ಣ ತಂತಿರಹಿತ ವಿದ್ಯುತ್ ವೈಶಿಷ್ಟ್ಯವು ಉಪಕರಣದ ಚಲನಶೀಲತೆಯನ್ನು ಹೆಚ್ಚಿಸುತ್ತದೆ.

ಕಾಲ ಬದಲಾಗುತ್ತಿದ್ದು, ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ, ಅವರ ದೇಹಕ್ಕೆ ಯಾವುದೇ ಹಾನಿಯಾಗದಂತೆ ಮತ್ತು ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ಅವರ ಕೆಲಸದ ಹೊರೆ ಕಡಿಮೆ ಮಾಡುವ ಕೃಷಿ ಉಪಕರಣಗಳ ಅವಶ್ಯಕತೆಯಿದೆ.

STIHL ಪ್ರಮುಖ ಕೃಷಿ ಉಪಕರಣಗಳ ಉತ್ಪಾದಕ ಕಂಪನಿಯಾಗಿದೆ. ಜರ್ಮನ್ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಉತ್ಪನ್ನಗಳನ್ನು ರಚಿಸಲು ವಿಶೇಷವಾಗಿ ಕೃಷಿ ಕೆಲಸವನ್ನು ಸುಲಭ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, ವಿಶೇಷವಾಗಿ ಕೃಷಿಯಲ್ಲಿ ಮಹಿಳೆಯರಿಗೆ ತಯಾರಿಸಲಾಗುತ್ತದೆ. ಇನ್ನಷ್ಟು ತಿಳಿದುಕೊಳ್ಳಲು STIHLನ ಅಧಿಕೃತ ವೆಬ್ಬೆಟ್‌ ಭೇಟಿ ನೀಡಿ.

Published On: 23 March 2023, 10:29 PM English Summary: STIHL Equipment Helping Women in Agriculture

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.