1. ಅಗ್ರಿಪಿಡಿಯಾ

ಕಡಲೆ ಬೆಳೆಯಲ್ಲಿ ಬರುವಂತಹ ಬೂದು ರೋಗ ನಿರ್ವಹಣೆ

ಕಡಲೆ ಬೆಳೆಯು ಕರ್ನಾಟಕದ ಒಂದು ಪ್ರಮುಖ ಹಿಂಗಾರಿ ಬೆಳೆಯಾಗಿದ್ದು, ಇದರಲ್ಲಿ ಬರುವಂತಹ ಹಲವಾರು ರೋಗಗಳ ಬಗ್ಗೆ ನಿಮಗೀಗ ತಿಳಿಸಿದ್ದೇವೆ, ಅದರಲ್ಲಿ  ಮತ್ತೊಂದು ಪ್ರಮುಖ ರೋಗವೆಂದರೆ ಬೂದಿರೋಗ, ಅದರ ಬಗ್ಗೆ ತಿಳಿದುಕೊಳ್ಳೋಣ.

 ಲಕ್ಷಣಗಳು:
- ಗಿಡಗಳ ಎಲೆಯ ಮೇಲ್ಭಾಗವು ಬೂದಿ ಬಣ್ಣದ ಬಿಳಿ ಹುಡಿಯಿಂದ ಅಮೃತ ವಾಗಿರುತ್ತದೆ.
- ನಂತರದ ದಿನಗಳಲ್ಲಿ ಎಲೆಗಳು ನೇರಳೆ ಬಣ್ಣಕ್ಕೆ ತಿರುಗಿ ಸಾಯುತ್ತವೆ.
- ಗಿಡವು ಅಲ್ಪಾವಧಿ ಕಾಲದಲ್ಲಿ ಎಲೆಗಳನ್ನು ಕಳೆದುಕೊಳ್ಳುತ್ತದೆ.
- ಬಿಟ್ಟ ಕಾಳುಗಳು ಸಾಮಾನ್ಯ ಕಾಳುಗಳಿಗಿಂತ  ಸಣ್ಣದಾಗಿರುತ್ತದೆ.
ಹತೋಟಿ ಕ್ರಮಗಳು:
 ರೋಗ ಲಕ್ಷಣ ಕಂಡುಬಂದಲ್ಲಿ ನೀರಿನಲ್ಲಿ ಕರಗುವ 3ಗ್ರಾಂ  ಗಂಧಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

ಸೂಚನೆ - ರೈತರು ನಾವು ಕೊಟ್ಟ ಮಾಹಿತಿಯನ್ನು ಬಳಸುವ ಮುನ್ನ ಒಮ್ಮೆ ತಮ್ಮ ಸಮೀಪದ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಬಳಸಬೇಕು

Published On: 27 December 2020, 09:09 AM English Summary: powdery mildew management in bengalgram

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.