1. ಅಗ್ರಿಪಿಡಿಯಾ

ಬಂಜರು ಭೂಮಿಯಲ್ಲಿ ಅಣಬೆ ಬೇಸಾಯ ಮಾಡಿ, ಲಕ್ಷಗಟ್ಟಲೆ ಆದಾಯ ಗಳಿಸಿ

 ಅಣಬೆ ಬೇಸಾಯ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ಹಣವನ್ನು ಗಳಿಸುತ್ತಿರುವ ಹಲವಾರು ರೈತರಿದ್ದಾರೆ, ಈ ಬೆಳೆಯನ್ನು ಬೆಳೆಯಲು ನಿಮಗೇನು ಕೃಷಿಭೂಮಿ ಬೇಕಾಗಿಲ್ಲ, ನಿಮ್ಮ ಮನೆಯ ತಾರಸಿಯಲ್ಲಿ ಅಥವಾ ಅಥವಾ ಬಂಜರು ಭೂಮಿಯಲ್ಲಿ ಕೂಡ ನಾವು ಮಾಡಬಹುದು, ನೀವು ಕೇವಲ ಒಂದು ಶೆಡ್ಡನ್ನು ನಿರ್ಮಿಸಿದರೆ ಸಾಕು ಅದರ ಮೂಲಕ ನೀವು ತಿಂಗಳಿಗೆ ಕೈ ತುಂಬ ಹಣ ಸಂಪಾದಿಸಬಹುದು.

 ಅಣಬೆಯಲ್ಲಿ ಪ್ರೊಟೀನ್, ಕಬ್ಬಿಣ, ಹಾಗೂ ತುಂಬಾನೇ ಮಿಟಿಮಿನ್ ಡಿ ಇರುತ್ತೆ, ಇದು ಡಯಾಬಿಟಿಸ್ ಇರುವರಿಗೆ ಇದು ತುಂಬಾ ಒಳ್ಳೆಯದು, ಹಾಗಾಗಿ ಮಕ್ಕಳಿಗೆ ಗರ್ಭಿಣಿಯರು ಕೂಡ ಇದು ಒಂದು ಒಳ್ಳೆಯ ಆಹಾರ ಎಂದು ಹೇಳಬಹುದು. ಇದನ್ನು ನಾವು ಭಾರತ ದೇಶದಲ್ಲಿ ಬಹಳ ಉಪಯೋಗಿಸುವುದಿಲ್ಲ ಆದರೆ ಬೇರೆ ರಾಷ್ಟ್ರಗಳಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೂಡ ಇದರ ಬೇಡಿಕೆ ತುಂಬಾ ಹೆಚ್ಚುತ್ತಿದೆ. ಹೀಗಾಗಿ ನಮ್ಮ ದೇಶದ ರೈತರು ಕೃಷಿಯೊಂದಿಗೆ ಇದನ್ನು ಮಾಡುತ್ತಾ ಹೆಚ್ಚಿನ ಹಣವನ್ನು ಗಳಿಸಬಹುದು.

 ಅಣಬೆ ಬೇಸಾಯಕ್ಕೆ ತಂಪಾದ ಗಾಳಿ ಹಾಗೂ ಮಂದಬೆಳಕು ಇರುವಂತಹ ಜಾಗ ಬೇಕು, ಹಾಗೆ  ಸ್ವಚ್ಛವಾಗಿ ಇರುವಂತಹ ಗಾಳಿಯ ಪ್ರದೇಶದಲ್ಲಿ ತುಂಬಾ ಚೆನ್ನಾಗಿ ಬೆಳೆಯುತ್ತದೆ. ಅಣಬೆ ಬೆಳೆಯಲು ನಮಗೆ ಮುಖ್ಯವಾಗಿ ಬೇಕಾಗಿರೋದು ಒಣಗಿದ ತ್ಯಾಜ್ಯ ಅದು ಭತ್ತದ ಹುಲ್ಲು ಆಗಿರಬಹುದು ಅಥವಾ ಗೋಧಿ ಹುಲ್ಲು  ಆಗಿರಬಹುದು ಅಥವಾ ರಾಗಿಯ ಅಥವಾ ಜೋಳದ ದಂಟು ಕೂಡ ಇರಬಹುದು.

 ರಾತ್ರಿ ಹೊತ್ತು ನಾವು ಹುಲ್ಲನ್ನು ಚೆನ್ನಾಗಿ ಸಣ್ಣ ತುಂಡುಗಳಾಗಿ ಕತ್ತರಿಸಿ ಎಂಟರಿಂದ ಹತ್ತು ಗಂಟೆ ನೀರಿನಲ್ಲಿ ನೆನೆಸಬೇಕು, ಅದು ನೆನೆದ ನಂತರ ಬೆಳಗ್ಗೆ ಅದನ್ನು ಮತ್ತೊಮ್ಮೆ ಬಿಸಿನೀರಿನಲ್ಲಿ ಕುದಿಸಬೇಕು, ಹೀಗೆ ಮಾಡುವುದರ ಮೂಲಕ ನಾವು ಹುಲ್ಲಿ ನಲ್ಲಿ ಇರುವಂತಹ ಬ್ಯಾಕ್ಟೀರಿಯಾ ಅಥವಾ ಕ್ರಿಮಿಕೀಟಗಳನ್ನು ಕೊಲ್ಲಬಹುದು, ಹಾಗೂ ಹುಲ್ಲು ಕೂಡ ಮೆತ್ತಗೆ ಆಗುತ್ತದೆ.

ಈಗ ನಮಗೆ ಬೇಸಾಯಕ್ಕೆ ಬೇಕಾದ ಅಂತ ಎಲ್ಲಾ ಸಾಮಗ್ರಿಗಳು ತಯಾರಾಗಿವೆ, ಈಗ ನಾವು ಹುಲ್ಲನ್ನು ಒಂದು ಪ್ಲಾಸ್ಟಿಕ್ ಹಾಳೆಯಲ್ಲಿ ತೆಗೆದುಕೊಳ್ಳಬೇಕು, ಈಗ ನಾವು ಏನು ಮಾಡಬೇಕು ಅಂದರೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಒಂದು ಪದರ ಹುಲ್ಲು ಹಾಗೂ ಅದರ ಮೇಲೆ ಸ್ವಲ್ಪ ಅಣಬೆ ಬೀಜಗಳನ್ನು ಉದುರಿಸಬೇಕು, ಮತ್ತೆ ಒಂದು ಪದರ ಹುಲ್ಲು  ಹಾಕಬೇಕು ಮತ್ತೆ ಅಣಬೆ ಬೀಜವನ್ನು ಹಾಕಬೇಕು, ನಾವು ಅಣಬೆ ಬೀಜಗಳನ್ನು ಸುತ್ತಲು ಕೂಡ ಪ್ಲಾಸ್ಟಿಕ್ ಹಾಳೆಯಲ್ಲಿ ಕಾಣುವಹಾಗೆ ಹಾಕಬೇಕು, ಮಧ್ಯದಲ್ಲಿ ಹಾಕಬಾರದು.

ಹೀಗೆ ಒಂದೊಂದು ಪದರಗಳನ್ನು ರಚಿಸುತ್ತಾ ಹೋಗಿ ಹಾಳೆ ತುಂಬಿದಾಗ ಮೇಲೆ ಒಂದು ಪದರು ಬೀಜವನ್ನು ಉದುರಿಸಿ ಹಾಳೆಯನ್ನು ಚೆನ್ನಾಗಿ ಕಟ್ಟಬೇಕು, ಹಾಗೂ ಹಾಳೆಯಲ್ಲಿ ಗಾಳಿಯಾಡುವ ಸಲುವಾಗಿ ಕಟ್ಟಿಗೆಯಿಂದ ಸನ್ನ  ತೂತುಗಳನ್ನು ಮಾಡಬೇಕು.

 ಈ ರೀತಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿದ ನಂತರ ಅದನ್ನು ನಿಮ್ಮ ಅಣಬೆ ಶೆಡ್ ನಲ್ಲಿ ಇಡಬೇಕು, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಅಂದರೆ ನೀವು ಎಷ್ಟು ಅಣಬೆಯನ್ನು ಉತ್ಪಾದಿಸಬಹುದು ಎಂಬುದರ ಮೇಲೆ ನಿಮ್ಮ ಶೆಡ್ ಪ್ರಮಾಣ ಇರಬೇಕು. 15ರಿಂದ 20 ದಿನಗಳಲ್ಲಿ ಅಣಬೆಗಳಲ್ಲಿ ಮೊಳಕೆ ಒಡೆಯುತ್ತದೆ, ಆಗ ನೀವು ಹುಲ್ಲನ್ನು ಹೊರಗೆ ತೆಗೆದು ಅದಕ್ಕೆ ಪ್ರತಿದಿನ ನೀರನ್ನು ಚಿಮುಕಿಸಬೇಕು.

ಹೀಗೆ ಮುಂದಿನ 10  ದಿನಗಳಲ್ಲಿ ನಿಮ್ಮ ಅಣಬೆ ತಯಾರಾಗಿರುತ್ತದೆ. ಕಟಾವ ಮಾಡಿಕೊಂಡು ನಿಮ್ಮ ಹತ್ತಿರದಲ್ಲಿರುವ ಮಾರ್ಕೆಟ್ನಲ್ಲಿ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಾಡಬೇಕು. ಅಣಬೆ ಬೀಜಕ್ಕೆ  70ರಿಂದ 80 ರೂಪಾಯಿ ಪ್ರತಿ ಕೆಜಿಗೆ ಬಿದ್ದರೆ, ಅಣಬೆಗೆ ನೂರರಿಂದ ಮುನ್ನೂರು ರೂಪಾಯಿ ವರೆಗೆ ಮಾರುಕಟ್ಟೆಗೆ ಅನುಗುಣವಾಗಿ ನಿಮಗೆ  ಬೆಲೆ ದೊರಕುತ್ತದೆ. ನಿಮ್ಮ ಅಣಬೆಯ ಗುಣಮಟ್ಟದ ಮೇಲೆ ನಿನಗೆ ಬೆಲೆ ಬರುತ್ತದೆ ಹಾಗೂ ನೀವು ಒಂದು ಕೆಜಿ  ಅಣಬೆ ಬೀಜಗಳಿಂದ 20 ರಿಂದ 25 ಕಿಲೊ ಅಣಬೆಯನ್ನ ಬೆಳೆಯಬಹುದು, ಹಾಗಾಗಿ ನಾವು ಕಡಿಮೆ ಕರ್ಚಿನಲ್ಲಿ ಕಡಿಮೆ ಜಾಗದಲ್ಲಿ ಅಣಬೆ ಕೃಷಿ  ಮಾಡಬಹುದು. ನಿಮಗೆ ಅಣಬ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಹಾಗೂ ಅಲ್ಲಿ ಬೀಜ ಎಲ್ಲಿ ಸಿಗುತ್ತದೆ,  ಮಾರಾಟ ಎಲ್ಲಿ ಮಾಡಬಹುದು ಹಾಗೂ ಅದಕ್ಕೆ ಸಂಬಂಧಿಸಿದ ಸಬ್ಸಿಡಿ ಹಾಗೂ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬಹುದು.

Published On: 23 November 2020, 12:21 PM English Summary: mushroom farming monthly income agriculture

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.