1. ಅಗ್ರಿಪಿಡಿಯಾ

ಕಡಿಮೆ ಬಂಡವಾಳದಲ್ಲಿ ಅಲೋವೆರಾ ಕೃಷಿ ಮಾಡಿದರೆ, 5 ಪಟ್ಟು ಹೆಚ್ಚು ಲಾಭ ಗಳಿಸಬಹುದು!

Ashok Jotawar
Ashok Jotawar
Aloe Vera farming

ಅಲೋವೆರಾಗೆ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಮುಖ್ಯ ಕಾರಣವೆಂದರೆ ಅದರ ಬಳಕೆ. ಅಲೋವೆರಾವನ್ನು ವೈದ್ಯಕೀಯ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದ್ದರಿಂದ ಅಲೋವೆರಾವನ್ನು ಬೆಳೆಸುವುದರಿಂದ ಉತ್ತಮ ಲಾಭವನ್ನು ಪಡೆಯಬಹುದು. ಅಲೋವೆರಾ ಕೃಷಿಗೆ ಕೇವಲ ಒಂದು ಬಂಡವಾಳ ಬೇಕಾಗುತ್ತದೆ. ಒಮ್ಮೆ ಹೂಡಿಕೆ ಮಾಡಿದರೆ, ನೀವು 5 ವರ್ಷಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದು.

ಸಸಿಗಳನ್ನು ನೆಟ್ಟ ನಂತರ, ನೀವು ಆ ಗಿಡದಿಂದ  ಸಸಿಗಳನ್ನು ಕಸಿ ಮಾಡಬಹುದು ಮತ್ತು ಹೀಗೆ ನಿಮ್ಮ ಸಸ್ಯಗಳ ಸಂಖ್ಯೆಯನ್ನು ಹೆಚ್ಚಿಸಬಹುದು.ಕೃಷಿಶಾಸ್ತ್ರಜ್ಞರ ಪ್ರಕಾರ, ಪ್ರೌಢ ಅಲೋವೆರಾ ಗಿಡ  4 ತಿಂಗಳಲ್ಲಿ ಒಂದು ಮೊಳಕೆ ಉತ್ಪಾದಿಸುತ್ತದೆ.ಒಂದು ಎಕರೆ ಭೂಮಿಯಲ್ಲಿ ಅಲೋವೆರಾವನ್ನು ಬೆಳೆಯುವುದರಿಂದ ವರ್ಷಕ್ಕೆ ಸುಮಾರು 20,000 ಕೆಜಿ ಅಲೋವೆರಾ ಉತ್ಪಾದನೆಯಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅಲೋವೆರಾ ಎಲೆ ಕೆಜಿಗೆ 5 ರಿಂದ 6 ರೂ.

ಕಾಸ್ಮೆಟಿಕ್ ಉತ್ಪನ್ನಗಳು ಅಥವಾ ಆಯುರ್ವೇದ ಔಷಧಗಳನ್ನು ತಯಾರಿಸಲು ಅಲೋವೆರಾದ ಬೇಡಿಕೆ ತುಂಬಾ ಹೆಚ್ಚಾಗಿದೆ. ಆದ್ದರಿಂದ ನೀವು ಅಲೋವೆರಾ ಎಲೆಗಳನ್ನು ಆಯುರ್ವೇದ ಔಷಧಗಳು ಅಥವಾ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುವ ಕಂಪನಿಗೆ ಮಾರಾಟ ಮಾಡಬಹುದು.

ಅಲೋವೆರಾ ಕೃಷಿಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಮಣ್ಣಿನ ತೇವಾಂಶ ಮತ್ತು ನೀರು ನಿಲ್ಲದಂತೆ ನೋಡಿಕೊಳ್ಳುವುದು. ಮರಳು ಮಣ್ಣು ಅಲೋವೆರಾಗೆ ಹೆಚ್ಚು ಸೂಕ್ತವೆಂದು ಪರಿಗಣಿಸಲಾಗಿದೆ.

ಅಲೋವೆರಾದಲ್ಲಿ ಹಲವು ಜಾತಿಗಳಿವೆ. ಅದರಲ್ಲಿ ನೀಲಿ ಅಲೋವೆರಾ ಅತ್ಯಂತ ಸಾಮಾನ್ಯವಾಗಿದೆ, ಇದು ಸಾಮಾನ್ಯವಾಗಿ ಮನೆಯಲ್ಲಿ ಕಂಡುಬರುತ್ತದೆ. ಆದಾಗ್ಯೂ, ಅಲೋವೆರಾದ ಬಾರ್ಬೆಡೆನ್ಸಿಸ್ ಜಾತಿಯು ಸಾಕಷ್ಟು ಜನಪ್ರಿಯವಾಗಿದೆ. ರೈತರು ಬಾರ್ಬಡೆನ್ಸಿಸ್ ಜಾತಿಗಳನ್ನು ನೆಡಲು ಬಯಸುತ್ತಾರೆ. ಏಕೆಂದರೆ ಇದರ ಎಲೆಗಳು ದೊಡ್ಡದಾಗಿದ್ದು ಅದರಿಂದ ಹೆಚ್ಚು ರಸ ದೊರೆಯುತ್ತದೆ.

ಅಲೋವೆರಾ ಸಸಿಗಳನ್ನು ಫೆಬ್ರವರಿಯಿಂದ ಅಕ್ಟೋಬರ್-ನವೆಂಬರ್ ವರೆಗೆ ಬಿತ್ತಬಹುದು. ಇದನ್ನು ಚಳಿಗಾಲದಲ್ಲಿ ಬಿತ್ತಲು ಸಾಧ್ಯವಿಲ್ಲ. ಸಸಿಯನ್ನ ನೆಡುವಾಗ, ಎರಡು ಸಸಿಹಗಳ  ನಡುವೆ 2 ಅಡಿ ಅಂತರವನ್ನು ಇರಿಸಿ. ಸಸಿಗಳನ್ನು ನೆಟ್ಟ ನಂತರ, ರೈತರು ವರ್ಷಕ್ಕೆ ಎರಡು ಬಾರಿ ಅಲೋವೆರಾ ಎಲೆಗಳನ್ನು ಸಂಗ್ರಹಿಸಬಹುದು.

ಇನ್ನಷ್ಟು ಓದಿರಿ: ರೈತರಿಗೆ ದೊಡ್ಡ ಆಘಾತ! ಮತ್ತೆ ದುಬಾರಿ ಆಯಿತು ಗೊಬ್ಬರ?

ಹೊಲದಲ್ಲಿ ಮೀನುಗರಿಕೆ! ಅದು ಹೇಗೆ ?

Published On: 09 December 2021, 02:00 PM English Summary: Invest little and get more!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.