1. ಅಗ್ರಿಪಿಡಿಯಾ

ಬಿದಿರು ಭರಪೂರ ಆದಾಯ..ಈ ಕೃಷಿ ಮಾಡಿದ್ರೆ 50 ವರ್ಷ ನಿರಂತರ ಆದಾಯ ಫಿಕ್ಸ್‌..!

Maltesh
Maltesh
How profitable is bamboo farming?

ಬಿದಿರು ಕೃಷಿ ಸುಲಭ ಮತ್ತು ಲಾಭದಾಯಕ ಗದ್ದೆಯ ಬದು, ಇಲ್ಲವೇ ತೋಟದ ಅಕ್ಕ-ಪಕ್ಷ, ಖುಷ್ಕಿ ಜಾಗಗಳಲ್ಲೂ ಬೆಳೆಯಬಹುದಾಗಿದೆ. ಮತ್ತೆ ವಿಶೇಷ ಆರೈಕೆ ಬೇಕಿಲ್ಲ. ಹನಿ ನೀರಾವರಿಯ ವ್ಯವಸ್ಥೆ ಮಾಡಿದರೆ ಮುಖ್ಯ ಬೆಳೆಯಾಗಿಯೇ ಬಿದಿರನ್ನು ಬೆಳೆಯಬಹುದು. ಬಿದಿರು ಮಣ್ಣಿನ ಸವಕಳಿ ತಪ್ಪಿಸುವುದಲ್ಲದೆ ನೀರಿನ ಇಂಗಿಸುವಿಕೆಗೂ ಅನುಕೂಲವಾಗಿದೆ.

UNIDO ವರದಿಯಲ್ಲಿ ಏನಿದೆ?

United nations Industrial development organization (UNIDO) ವರದಿ ಪ್ರಕಾರ, ಮುಂದಿನ 10 ವರ್ಷಗಳಲ್ಲಿ ಕೇವಲ ಈಶಾನ್ಯ ಭಾಗದ ಪ್ರದೇಶಗಳಲ್ಲಿ ಸುಮಾರು 5000 ಕೋಟಿ ರೂಪಾಯಿ ವಹಿವಾಟು ನಡೆಸುವ ಸಾಮರ್ಥ್ಯ ಬಿದಿರು ಆಧಾರಿತ ಉದ್ಯಮಕ್ಕಿದೆ. ಕಾನೂನು ಸಡಿಲಗೊಂಡಿರುವುದರಿಂದ ಈಗಾಗಲೇ ಬೆಳೆಯಲು ಯೋಗ್ಯವಿದ್ದೂ ಪಾಳು ಬಿಟ್ಟಿದ್ದ ಅಂದಾಜು 1.26 ಕೋಟಿ ಹೆಕ್ಟೇರ್‌ ಪ್ರದೇಶದಲ್ಲಿ ಬಿದಿರು ಕೃಷಿ ಮಾಡಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ವರದಿಯೊಂದು ತಿಳಿಸಿದೆ.

ಬಿದಿರಿನ ತಳಿಗಳು : ಬರ್ಮಾ, ಭೀಮಾ, ಶಮೆ, ಡೌಗಾ, ಮಾರಿಹಾಳ ಸೇರಿ ಸುಮಾರು 150ಕ್ಕೂ ಹೆಚ್ಚು ತಳಿಗಳಿವೆ.

ಗುಡ್‌ನ್ಯೂಸ್‌: ದೇಶದಲ್ಲಿ ಅಡುಗೆ ಎಣ್ಣೆಯ ದರ ಏರಿಕೆಯಾಗಲ್ಲ ಎಂದ ಕೇಂದ್ರ

ಗುಡ್‌ನ್ಯೂಸ್‌: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..!

ಕಾನೂನಿನ ತೊಡಕಿಲ್ಲ

ಬಿದಿರು ಒಂದು ಅರಣ್ಯ ಗಿಡ ಎಂದು ಹಲವರು ಭಾವಿಸಿದ್ದರು. ಹಿಂದೆಲ್ಲಾ ಅತ್ಯಲ್ಪ ಮಂದಿ ಬಿದಿರು ಬೆಳೆದರೂ ಅದನ್ನು ಒಂದು ವಾಣಿಜ್ಯ ಬೆಳೆಯಾಗಿ ಕಂಡದ್ದು ತೀರಾ ಕಡಿಮೆ. ಏಕೆಂದರೆ, ಬಿದಿರು ಕಡಿಯಲು, ಸಾಗಿಸಲು ಮತ್ತು ಕಡಿದ ಬಿದಿರನ್ನು ಮಾರಾಟ ಮಾಡಲು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಹೀಗಾಗಿ ಅಲ್ಲಿ ಇಲ್ಲಿ ಕೆಲವರು ಬೆಳೆದರೂ ತಮ್ಮ ಮನೆಯ ಉಪಯೋಗಕ್ಕೆ ಆಗುವಷ್ಟನ್ನು ಮಾತ್ರ ಬೆಳೆದುಕೊಳ್ಳುತ್ತಿದ್ದರು.

ಆದರೆ, ಬಿದಿರಿನ ಮೇಲಿದ್ದ ಎಲ್ಲ ಕಾನೂನು ನಿರ್ಬಂಧಗಳನ್ನು ಹಲವು ವರ್ಷಗಳ ಹಿಂದೆಯೇ ಸರ್ಕಾರ ತೆರವುಗೊಳಿಸಿದೆ. ಹೀಗಾಗಿ ಈಗ ಯಾರುಬೇಕಾದರೂ ಬಿದಿರು ಬೆಳೆಯಬಹುದು. ಅಷ್ಟೇ ಅಲ್ಲದೆ ಪ್ರತಿ ಬಿದಿರು ಗಿಡದ ನಿರ್ವಹಣೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ಕೂಡ ಸಿಗುತ್ತದೆ.

Pashu Dhan Bima Yojana! 70% Subsidyಯೊಂದಿಗೆ ನಿಮ್ಮ ಜಾನುವಾರುಗಳಿಗೆ ವಿಮೆ ಪಡೆಯಿರಿ

Pig Farming:ಹಂದಿ ಸಾಕಾಣಿಕೆದಾರರಿಗೆ ಬಂಪರ್.. ಶೇ 98 ರಷ್ಟು ಸಬ್ಸಿಡಿ ಸಿಗುತ್ತೆ!

50 ವರ್ಷಗಳವರೆಗೂ ಆದಾಯ!

ತಜ್ಞರು ಸಲಹೆ ಮಾಡಿದ ರೀತಿಯಲ್ಲೇ ನಿಗದಿತ ಅಂತರದಲ್ಲಿ ನಾಟಿ ಮಾಡಿದಾಗ ಒಂದು ಎಕರೆಗೆ 900 ರಿಂದ 1000 ಬಿದಿರಿನ ಗಿಡಗಳು ಕೂರುತ್ತವೆ. 3 ವರ್ಷಗಳ ನಂತರ ಬಿದಿರು ಕಟಾವಿಗೆ ಸಿದ್ಧವಾಗಿ, ಆದಾಯ ಬರಲು ಆರಂಭವಾಗಲಿದ್ದು, ಒಂದು ಸಾವಿರ ಬಿದಿರಿನ ಗಿಡಗಳಿಂದ 40 ಟನ್ ಬಿದಿರು ತೆಗೆಯಬಹುದು. ಪ್ರಸ್ತುತ ಮಾರುಕಟ್ಟೆ ದರದಂತೆ ಒಂದು ಟನ್ ಬಿದಿರಿನಿಂದ 5000 ರೂ. ಸಿಗಲಿದ್ದು, ಮೊದಲ ವರ್ಷ 1.50 ಲಕ್ಷದಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು.

ಮೂರನೇ ವರ್ಷ ಆರಂಭವಾಗುವ ಈ ಆದಾಯ ಸುಮಾರು 50  ವರ್ಷಗಳವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಬೆಳೆದ ಬಿದಿರು ಮಾರಾಟಕ್ಕೆ ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಪೀಠೋಪಕರಣಗಳಿಗೆ ಬಿದಿರು ಹೆಚ್ಚು ಬಳಕೆಯಾಗುವ ಕಾರಣ ನೀವು ಬೆಳೆಯುವ ವಿಷಯ ತಿಳಿದರೆ ಹಲವು ಕಂಪನಿಗಳು ಸ್ವತಃ ರೈತರ ಬಳಿ ತೆರಳಿ ಬಿದಿರು ಖರೀದಿಸುತ್ತವೆ.

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

Published On: 16 May 2022, 04:09 PM English Summary: How profitable is bamboo farming?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.