1. ಅಗ್ರಿಪಿಡಿಯಾ

ಮೊಳಕೆ ಉತ್ತಮವಾಗಿದ್ದರೆ ಬೆಳೆ ಸೊಗಸಾಗಿ ಬರುತ್ತೆ ಅಂತಾರೆ ತಜ್ಞರು

KJ Staff
KJ Staff
seedling

ಹಿರಿಯರು ಏನೇ ಹೇಳಿದ್ದರೂ ಅದಕ್ಕೊಂದು ಅರ್ಥವಿರುತ್ತದೆ. ಹಿಂದೆ ಪೂರ್ವಜರು ಹೇಳಿರುವ ನೂರಾರು ನಾಣ್ಣುಡಿಗಳೇ ಅದಕ್ಕೆ ಸಾಕ್ಷಿ. ಅಂಥ ನುಡಿಗಳಲ್ಲಿ ಒಂದುಬೆಳೆಯುವ ಸಿರಿ ಮೊಳಕೆಯಲ್ಲಿ’. ಈ ಸಾಲಿನ ಹಿಂದೆ ಹಲವು ಅರ್ಥಗಳಿವೆ. ಆದರೆ ಕೇವಲ ಕೃಷಿ ವಿಷಯವನ್ನು ಗಣನೆಗೆ ತೆಗೆದುಕೊಂಡು ನೋಡುವುದಾದರೆ ಈ ಮಾತು ನೂರಕ್ಕೆ ನೂರರಷ್ಟು ಸತ್ಯ.

ಏಕೆಂದರೆ ರೈತರು ತಮ್ಮ ಜಮೀನಿನಲ್ಲಿ ಬಿತ್ತವ ಅಥವಾ ಚೆಲ್ಲುವ ಬೀಜದ ಮೊಳಕೆ ಆ ಬೆಳೆಯ ಭವಿಷ್ಯವನ್ನು ನಿರ್ಧರಿಸುತ್ತದೆ. ಬಿತ್ತುವ ಮುನ್ನ ಬೀಜ ಮೊಳಕೆ ಒಡೆದಿರಬೇಕು ಎಂಬ ಮೂಲಮೊಳಕೆ ಜ್ಞಾನ’ ಎಲ್ಲ ರೈತರಿಗೂ ಗೊತ್ತಿರುತ್ತದೆ. ಆದರೆ, ಯಾವ ಬೆಳೆಯ ಬೀಜ ಎಷ್ಟು ಪ್ರಮಾಣದಲ್ಲಿ ಮೊಳಕೆಯೊಡೆದಿರಬೇಕು ಎಂಬ ವಿಜ್ಞಾನದ ಬಗ್ಗೆ ಯಾವೊಬ್ಬ ರೈತರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ಒಂದು ದಿನ ಬೀಜಗಳನ್ನು ನೆನೆಸಿ, ಒಂದು ದಿನ ಕಾವಿಗೆ ಇರಿಸಿ, ಮರುದಿನ ಸ್ವಲ್ಪ ಮೊಳಕೆ ಬಂದಿದ್ದರೆ ಸಾಕು, ಅವುಗಳನ್ನು ಸಸಿ ಮಡಿಗೆ ಚೆಲ್ಲುತ್ತಾರೆ. ಇನ್ನೂ ಕೆಲವು ರೈತರು ಅಂಗಡಿಯಿAದ ಕೊಂಡು ತಂದ ಬೀಜಗಳನ್ನು ನೇರವಾಗಿ ಸಸಿ ಮಡಿಗೆ ಚೆಲ್ಲುವ ಪದ್ಧತಿಯೂ ರೂಢಿಯಲ್ಲಿದೆ.

ಈಗ ಮುಂಗಾರು ಹಂಗಾಮು ಆರಂಭವಾಗುತ್ತಿದೆ. ಬಿತ್ತನೆಗೆ ಇದು ಸರಿಯಯಾದ ಸಮಯ. ಮಾರುಕಟ್ಟೆಯಲ್ಲೂ ವಿವಿಧ ಕಂಪನಿಗಳ ಬಿತ್ತಬೆ ಬಿಜಗಳು ಬಂದಿರುತ್ತವೆ. ಆದರೆ ರೈತರು, ತಮ್ಮ ಮಣ್ಣಿಗೆ ಹೊಂದುವ ಬೆಳೆಯ, ತಳಿಯ ಬೀಜಗಳನ್ನು ಮಾತ್ರ ಆರಿಸಿಕೊಳ್ಳಬೇಕು. ಜೊತೆಗೆ ಖರೀದಿಸಿ ತಂದ ಬೀಜಗಳನ್ನು ಏಕಾಏಕಿ ಬಿತ್ತಬಾರದು. ಮೊದಲು ಬೀಜೋಪಚಾರ ಮಾಡಿ, ಮೊಳಕೆ ಬರಿಸಿ ನಂತರ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುವುದು ಬೆಳೆಯ ಭವಿಷ್ಯದ ದೃಷ್ಟಿಯಿಂದ ಸೂಕ್ತ ವಿಧಾನವಾಗಿದೆ.

ಮೊಳಕೆ ಪ್ರಮಾಣ ಗಮನಿಸಿ

ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆ ಭಾಗದಲ್ಲಿ ಭತ್ತ, ರಾಗಿ ಮತ್ತಿತರ ಬೆಳೆ ಬೆಳೆಯುವ ರೈತರು ಬೀಜಗಳ ಮೊಳಕೆ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಮಾರುಕಟ್ಟೆಯಿಂದ ಖರೀದಿಸಿ ತಂದ ಬೀಜಗಳನ್ನು ಒಂದು ದಿನ ನೆನೆಸಿ, 24ರಿಂದ 48 ಗಂಟೆಗಳ ಕಾಲ ಕಾವಿಗೆ ಇರಿಸಿ, ಮೊಳಕೆ ಬರಿಸಿ ಬಳಿಕ ಅವುಗಳನ್ನು ನೇರವಾಗಿ ಸಸಿ ಮಡಿಗೆ ಚೆಲ್ಲುವ ಇಲ್ಲವೇ ಜಮೀನಿನಲ್ಲಿ ಉಗ್ಗುವ ಪದ್ಧತಿ ಅನುಸರಿಸುತ್ತಾರೆ. ಆದರೆ ಬೀಜಗಳನ್ನು ಚೆಲ್ಲುವ ಮೊದಲು ಅವುಗಳ ಮೊಳಕೆ ಪರಮಾಣವನ್ನು ಗಮನಿಸಬೇಕಾದ್ದು ಅತಿ ಮುಖ್ಯ.

ಮೊಳಕೆ ಎಷ್ಟಿದ್ದರೆ ಉತ್ತಮ

ಸಾಮಾನ್ಯವಾಗಿ ಬೀಜಗಳನ್ನು ಮೊಳಕೆ ಬರಿಸಿ ನಾಟಿ ಅಥವಾ ಬಿತ್ತನೆ ಮಾಡುವ ಯಾವುದೇ ಬೆಳೆಯಲ್ಲಿ ಬೀಜದ ಮೊಳಕೆ ಪ್ರಮಾಣ ಶೇ.80ರಷ್ಟು ಇರಬೇಕು ಎಂದು ಕೃಷಿ ತಜ್ಞರು ಸಲಹೆ ನೀಡುತ್ತಾರೆ. ಒಂದೊಮ್ಮೆ ಬೀಜಗಳು ಶೇ.80ರಷ್ಟು ಮೊಳಕೆ ಬಾರದಿದ್ದರೆ, ಬೀಜಗಳನ್ನು ಬದಲಿಸಬೇಕು ಇಲ್ಲವೇ ನಿಗದಿತ ಪ್ರಮಾಣದಷ್ಟು ಮೊಳಕೆ ಬರುವವರೆಗೂ ಉಪಚಾರ ಮಾಡಬೇಕು. ಒಂದೊಮ್ಮೆ ಮೊಳಕೆಯನ್ನು ನಿರ್ಲಕ್ಷಿಸಿ ಬಿತ್ತನೆ ಮಾಡಿದರೆ ಇಳುವರಿ ಕುಂಠಿತಗೊಳ್ಳುತ್ತದೆ.

ಮೊಳಕೆ ಪದ್ಧತಿಗಳು

ಬೀಜಗಳನ್ನು ಮೊಳಕೆ ಬರಿಸಲು ಒಂದೊAದು ಭಾಗದ ರೈತರು ಒಂದೊAದು ಪದ್ಧತಿ ಅನುಸರಿಸುತ್ತಾರೆ. ಕೆಲವರು ಬೀಜ ನೆನೆಸಲು ಸಿಮೆಂಟಿನ ತೊಟ್ಟಿಗಳನ್ನು ಮಾಡಿಕೊಂಡರೆ, ಇನ್ನೂ ಕೆಲವರು ಪ್ಲಾಸ್ಟಿಕ್ ಡ್ರಮ್ಗಳನ್ನು ಬಳಸುತ್ತಾರೆ. ಮತ್ತೆ ಕೆಲವರು ಗೋಣಿ ಚೀಲದಲ್ಲಿ ಬೀಜಗಳನ್ನು ತುಂಬಿ ಬಾವಿ, ಕೆರೆ, ಕೊಳ, ಕಾಲುವೆ ಇಲ್ಲವೇ ತೊಟ್ಟಿಗಳಲ್ಲಿ ಇಳಿಬಿಡುತ್ತಾರೆ. ಬಳಿಕ ನೆಲದ ಮೇಲೆ ಪ್ಲಾಸ್ಟಿಕ್ ಚೀಲಗಳು ಇಲ್ಲವೇ ಟಾರ್ಪಲಿನ್ ಹಾಸಿ, ನೆನೆಸಿದ ಬೀಜಗಳನ್ನು ಅದರ ಮೇಲೆ ಸುರಿದು, ಸಣ್ಣ ರಾಶಿಯನ್ನಾಗಿ ಮಾಡಿ, ಅದಕ್ಕೆ ಗೋಣಿ ಚೀಲ ಮುಚ್ಚುತ್ತಾರೆ. ಬಳಿಕ 48-72 ಗಂಟೆಗಳ ಕಾಲ ಆಗಾಗ ಬೀಜಗಳ ರಾಶಿಗೆ ನೀರು ಚಿಮುಸುತ್ತಾ ಇರುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೇನೆAದರೆ ಕೆಲವು ಬೀಜಗಳು 48 ಗಟೆಗಳಲ್ಲಿ ಮೊಳೆಯೊಡೆದರೆ ಮತ್ತೆ ಕೆಲವು ಬೀಗಳು ಮೊಳಕೆಯೊಡೆತಲು 96 ಗಂಟೆಗಳ ಸಮಯ ಬೇಕಾಗಬಹುದು. ಕೆಲವು ಭಾಗಗಳಲ್ಲಿ ಬೀಜಗಳನ್ನು ಮೊಳಕೆ ಬರಿಸಲು ಗೋಣಿ ಚೀಲದ ಬದಲು ಪೇಪರ್ ಹಾಗೂ ಕಾಟನ್ ಬಟ್ಟೆಗಳನ್ನು ಬಳಸುತ್ತಾರೆ.

ಮೊಳಕೆ ವಿಧಗಳು

ಮೊಳಕೆ ಪ್ರಮಾಣ ಆಧರಿಸಿ ಒಟ್ಟು ಐದು ವಿಧದ ಮೊಳಕೆಗಳನ್ನು ಗುರುತಿಸಲಾಗುತ್ತದೆ. ಸರಿಯಾದ ರೀತಿಯಲ್ಲಿ ಬೇರು ಮತ್ತು ಕಾಂಡದ ಬೆಳವಣಿಗೆಯಾಗಿದ್ದರೆ ಅದನ್ನು ಕ್ರಮಬದ್ಧ ಮೊಳಕೆ, ಕ್ರಮಬದ್ಧವಾಗಿರದೆ ಮೊಟಕು ಇಲ್ಲವೇ ಡೊಂಕಾಗಿ ಬೆಳೆದಿದ್ದರೆ ಅದನ್ನು ವಿಕೃತ ಮೊಳಕೆ ಎಂದು ಕರೆಯಲಾಗುತ್ತದೆ. ತೇವಾಂಶ ಹೀರಿಕೊಂಡರೂ ಮೊಳಕೆ ಬಾರದ ಬೀಜಗಳನ್ನು ಮೊಂಡು ಬೀಜಗಳು ಎನ್ನಲಾಗುತ್ತದೆ. ಭತ್ತ ಮತ್ತು ರಾಗಿಯಲ್ಲಿ ಇಂತಹ ಬೀಜಗಳು ಹೆಚ್ಚು. ಇನ್ನು ತೇವಾಂಶ ಹಿರಿಕೊಳ್ಳದೇ ಒಣಗಿದಂತಿದ್ದರೆ ಅವುಗಳನ್ನು ಗಟ್ಟಿ ಬೀಜಗಳೆಂದು ಹಾಗೂ ಗಟ್ಟಿಯಾಗಿಯೂ ಇರದೆ, ಮೊಳೆಯೂ ಬಾರದೆ ಹಾಳಾಗುವ ಬೀಜಗಳನ್ನು ಕೊಳೆ (ಕೊಳೆತ) ಬೀಜ ಎಂದು ಕರೆಯಲಾಗುತ್ತದೆ.

ಬೀಜ ಮತ್ತು ಮೊಳಕೆ ಪ್ರಮಾಣ

ಭತ್ತದ ಬೀಜಗಳು ಶೇ.80ರಷ್ಟು ಮೊಳಕೆ ಬಂದಿರಬೇಕು ಹಾಗೂ ರಾಗಿ ಶೇ.75, ಮುಸುಕಿನ ಜೋಳ ಶೇ.90, ಕಡಲೆ ಶೇ.80, ಉದ್ದು ಶೇ.75, ಅಲಸಂದೆ ಶೇ.75, ತೊಗರಿ ಶೇ.75, ಶೇಂಗಾ ಶೇ.70 ಮತ್ತು ಹತ್ತಿ ಬೀಜಗಳು ಶೇ.65ರಷ್ಟು ಮೊಳಕೆ ಬಂದಿದ್ದರೆ ಅವುಗಳ ಬೆಳವಣಿಗೆ ಉತ್ತಮವಾಗಿರುತ್ತದೆ. ಕೆಲವು ಬೀಜಗಳನ್ನು ಬಿತ್ತಿದ ನಂತರ ಅವುಗಳ ಮೊಳಕೆ ಪರೀಕ್ಷೆ ಮಾಡಿ, ಮೊಳಕೆ ಬಾರದಿದ್ದರೆ ಲೋಪವಿರುವ ಬೀಜದ ಜಾಗದಲ್ಲಿ ಬೇರೆ ಬೀಜ ಹಾಕಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಬೀಜೋಪಚಾರ ವಿಧಾನ

ಸಾಮಾನ್ಯಯವಾಗಿ ದ್ವಿದಳ ಧಾನ್ಯ ಬೀಜಗಳಿಗೆ ತಜ್ಞರು ಸೂಚಿಸಿದಷ್ಟು ಪ್ರಮಾಣದ ಕೀಟ ಮತ್ತು ರೋಗನಾಶಕ, ಒಂದು ಕೆ.ಜಿ.ಗೆ 6 ಗ್ರಾಂ ಶಿಲಿಂದ್ರ ನಾಶಕ ಬಳಸಿ ಉಪಚರಿಸಬೇಕು. ಏಕದಳ ಬಿತ್ತನೆ ಬೀಜಗಳನ್ನು ಬಿತ್ತುವ ಮುನ್ನ ಅವುಗಳಿಗೆ ರೈಜೋಬಿಯಂ ಜೀವಾಣುವನ್ನು ಬೆರೆಸಿ, ನೆರಳಲ್ಲಿ ಒಂದು ಗಂಟೆ ಒಣಗಿಸಿ ಬಿತ್ತನೆ ಮಾಡಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ಕೃಷಿ ಕೇಂದ್ರವನ್ನು ಸಂಪರ್ಕಿಸಿ.

Published On: 03 June 2021, 08:47 PM English Summary: How much do you know about seedlings?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.