1. ಅಗ್ರಿಪಿಡಿಯಾ

ಸಾವಯವ ಕೃಷಿ ಪದ್ಧತಿಯಲ್ಲಿ ಗೋ ಕೃಪಾಮೃತ ಪ್ರಮುಖ ಪಾತ್ರವಹಿಸುತ್ತದೆ

go krupamruta

 ಆತ್ಮೀಯ ರೈತ ಬಂಧುಗಳೇ ಸಾವಯವ ಕೃಷಿ ಪದ್ಧತಿಯಲ್ಲಿ ಗೋವಿನ ಗಂಜಲ ವಾಗಿರಬಹುದು ಸಗಣಿ ಆಗಿರಬಹುದು ತುಪ್ಪು,ಮಜ್ಜಿಗೆ ಇವೆಲ್ಲವುಗಳು ಎಷ್ಟು ಪ್ರಮುಖವಾದ ಪಾತ್ರ ವಹಿಸುತ್ತವೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ.

ಮೊದಲಿಗೆ ಗೋ ಕೃಪಾ ಅಮೃತ ಜಲ ಅನ್ವೇಷಣೆ ಆಗಿದ್ದು ಗುಜರಾತಿನ ಅಹಮದಾಬಾದಿನಲ್ಲಿ,ಶ್ರೀ ಗೋಪಾಲ್ಚಾರಿ ಸುತಾರ್ಜಿ ಅವರು ಬನ್ಸಿಗಿರ್ ಗೋಶಾಲೆಯಲ್ಲಿ ಇದನ್ನು ಅನ್ವೇಷಣೆ ಮಾಡಲಾಯಿತು. ಅನ್ವೇಷಣೆ ಪ್ರಕಾರ ಇದರಲ್ಲಿ ಸುಮಾರು 60ಕ್ಕೂ ಹೆಚ್ಚು ಬೆಳವಣಿಗೆಗೆ ಬೇಕಾಗುವ ಸೂಕ್ಷ್ಮಜೀವಿಗಳನ್ನು ಒಳಗೊಂಡಿದೆ. ಮತ್ತು ಪ್ರತಿಯೊಂದು ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಒಂದರಿಂದ ಎರಡು ಲೀಟರ್ ಗೋ ಕೃಪಾ ಮೃತ ಜಲವನ್ನು ಹಣವಿಲ್ಲದೆ ಕೊಡುತ್ತಾರೆ. ಗೋ ಕೃಪಾ ಅಮೃತ ಜಲ ಗೋವಿನ ಗಂಜಲ, ಮೊಸರು, ತುಪ್ಪ, ಹಾಲುಗಳಿಂದ ಕೂಡಿದೆ.

 ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು

* ಗೋವಿನ ಗಂಜಲ

* ತುಪ್ಪ

* ಹಾಲು

* ಮೊಸರು

 ಅಥವಾ ನೀವು ಅದನ್ನು ನೇರವಾಗಿ ನಿಮ್ಮ ಜಿಲ್ಲೆಯಲ್ಲಿರುವ ಗೋ ಕೃಪಅಮೃತ ಜಲವನ್ನು ಹಣವಿಲ್ಲದೆ ಪಡೆದುಕೊಳ್ಳಬಹುದು.

* ಎರಡು ಕೆಜಿ ಬೆಲ್ಲ

* ಎರಡು ಲೀಟರ್ ಮಜ್ಜಿಗೆ

*ಎರಡು ನೂರು ಲೀಟರ್ ನೀರು

cow

ತಯಾರಿಸುವ ವಿಧಾನ

 ಗೋವಿನ ಗಂಜಲ ತುಪ್ಪ ಹಾಲು ಮೊಸರು ಇವುಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು ಅಥವಾ ನೀವು ಅದನ್ನು ನೇರವಾಗಿ ತಂದಿದ್ದೇ ಆದರೆ. ತಂದಿರುವ 1ಲೀಟರ್ ಗೋ ಕೃಪಾಮೃತ ಜಲ ಮತ್ತು ಎರಡು ಕೆಜಿ ಬೆಲ್ಲ ಮತ್ತು ಎರಡು ಲೀಟರ್ ಮಜ್ಜಿಗೆ ತಾಜಾ ಮಜ್ಜಿಗೆ, ಇವೆಲ್ಲವನ್ನು ಎರಡು ನೂರು ಲೀಟರ್ ನೀರಿನಲ್ಲಿ ಹಾಕಬೇಕು. ತದನಂತರ ಅದನ್ನು ಐದು ದಿನಗಳ ಕಾಲ ಬಿಡಬೇಕು. ಏಕೆಂದರೆ ಅದರಲ್ಲಿರುವ ಸೂಕ್ಷ್ಮಜೀವಿಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತವೆ.

 ಬಳಸುವ ವಿಧಾನ

* ಇದನ್ನು ನೀರಿನೊಂದಿಗೆ ಸಹ ಬಿಡಬಹುದು, ಹೇಗೆಂದರೆ ನೀವು ಮಾಡಿರುವ ಗೋ ಕೃಪಾಮೃತ ಜಲವನ್ನು 500 ರಿಂದ 800 ಲೀಟರ್ ಒಂದು ಪ್ರತಿ ಎಕರೆಗೆ ನೀರಿನ ಜೊತೆ ಬಿಡಬಹುದು.

* ಸಿಂಪರಣೆ ಮಾಡುವುದಾದರೆ,ಎರಡು ಲೀಟರ್ ಗೋ ಕೃಪಾಅಮೃತ ಜಲವನ್ನು 11ರಿಂದ 13 ಲೀಟರ್ ನೀರಿನೊಂದಿಗೆ ಸೇರಿಸಿ ಸಿಂಪರಣೆ ಮಾಡಬಹುದು.

 ಪ್ರಯೋಜನಗಳು

* ಇದರಲ್ಲಿ ಸಾರಜನಕವನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳು ಸಹ ಒಳಗೊಂಡಿದೆ.

 ಉದಾಹರಣೆಗೆ:- ರೈಜೋಬಿಯಂ, ಅಜೋಟೊಬ್ಯಾಕ್ಟರ್,  ಜಿಯೋ ಬ್ಯಾಸಿಲಸ್, ಇತ್ಯಾದಿ

* ರಂಜಕವನ್ನು ಕರಗಿಸಿ ಸ್ಥಿರೀಕರಿಸುವ ಸೂಕ್ಷ್ಮಜೀವಿಗಳ ಸಹ ಒಳಗೊಂಡಿದೆ.

 ಉದಾಹರಣೆಗೆ:- ಮೈಕ್ರೋ ಬ್ಯಾಕ್ಟಿರಿಯಾ, ಸುಡೊಮೊನಾಸ್. ಇತ್ಯಾದಿ

* ಮಣ್ಣಿನ ಫಲವತ್ತತೆ ಸುಧಾರಿಸುವ ಸೂಕ್ಷ್ಮ ಜೀವಿಗಳು

 ಉದಾಹರಣೆಗೆ:- ಸಿಟ್ರೋ ಬ್ಯಾಕ್ಟರ್, ಅಸಿನೋ ಫ್ಯಾಕ್ಟರ್, ಇತ್ಯಾದಿ

* ಮಣ್ಣಿನಿಂದ ಹರಡುವ ಶಿಲೀಂದ್ರ ರೋಗಗಳನ್ನು ನಿಯಂತ್ರಣ ಮಾಡುವ ಸೂಕ್ಷ್ಮಜೀವಿಗಳು, ಉದಾಹರಣೆಗೆ:- ಸೋಡೊಮನಸ್,  ಫ್ಲೆಕ್ಸಿ ಥ್ರಿಕ್ಸ್,  ಇತ್ಯಾದಿ

* ಬೆಳೆಗಳ ಬೆಳವಣಿಗೆಗೆ ಪೂರಕವಾಗುವ ಸೂಕ್ಷ್ಮ ಜೀವಿಗಳು, ಉದಾಹರಣೆಗೆ:- ಎಂಟಿರೋಕೋಕಸ್, ಜಿಯೋ ಬ್ಯಾಸಿಲಸ್, ಇತ್ಯಾದಿ,

 ಲೇಖಕರು ಮತ್ತಣ್ಣ ಬ್ಯಾಗೆಳ್ಳಿ

Published On: 21 December 2020, 09:34 AM English Summary: Go krupamruta

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.