ಹಾಗಲಕಾಯಿ ವರ್ಗಕ್ಕೆ ಸೇರಿದೆ.ಮಾಡಹಾಗಲ ಕಾಯಿ ಗಡ್ಡೆಯಿಂದ ಬೆಳೆಯುವ ಬಳ್ಳಿಯಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿಯೇ ಹೇರಳವಾಗಿ ಬೆಳೆಯುತ್ತದೆ. ಈ ಅಪರೂಪದ ತರಕಾರಿ ನಗರದಲ್ಲಿ ಕೆಜಿಗೆ 200 ರೂಪಾಯಿಗೂ ಹೆಚ್ಚು ಮಾರಾಟವಾಗುತ್ತದೆ.
. ನಗರ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಈ ತರಕಾರಿಗೆ ಭಾರಿ ಬೇಡಿಕೆಯಿದೆ. ಏಕೆಂದರೆ ಈ ತರಕಾರಿಯಲ್ಲಿ ಅಡಗಿದೆ ಹಲವಾರು ಆರೋಗ್ಯಗದ ಗುಟ್ಟು. ಬಡವರ ವಯಾಗ್ರವೆಂದೇ ಕರೆಯಲ್ಪಡುವ ಮಾಡಹಾಗಲ ಮಧುಮೇಹ ನಿಯಂತ್ರಣ ಮಾಡುತ್ತದೆ. ಮೂತ್ರಕೋಶದ ಕಲ್ಲು, ಯಕೃತ ದೋಷ, ಮೂತ್ರಪಿಂಡದಲ್ಲಿನ ದೋಷ, ಉದರದ ಸಮಸ್ಯೆಗೆ ಮಾಡಹಾಗಲ ಮದ್ದು. ಪ್ರಕೃತ್ತಿದತ್ತವಾಗಿ ಬೆಳೆಯುವ ಈ ತರಕಾರಿ ಮುಂಗಾರು ಸಮಯದಲ್ಲಿ ಮಾತ್ರ ದೊರೆಯುತ್ತದೆ. ಮುಂಗಾರು ಆರಂಭವಾಗುವ ತಕ್ಷಣ ಕಾಡಿನಲ್ಲಿ ಬಳ್ಳಿ ಹರಡಲು ಆರಂಭವಾಗುತ್ತದೆ. ಈ ತರಕಾರಿಗೆ ಕಾಡುಹಾಗಲ, ಕಾಡು ಹೀರೆ, ಮಡಹಾಗಲ, ಪಾಗಿಳವೆಂದು ಕರೆಯುತ್ತಾರೆ.
ಮೊದಲು ಹೊಲದ ಬದುಗಳು ಅಗಲವಾಗಿರುತ್ತಿದ್ದವು. ಈಗ ಮನುಷ್ಯನ ಅತೀಯಾದ ಹಸ್ತಕ್ಷೇಪದಿಂದ ಕಣ್ಮರೆಯಾಗುತ್ತಿದೆ ಪ್ರಾಣಿ ಪಕ್ಷಿಗಳಂತೆ ಮಾಡಹಾಗಲ ಬಳ್ಳಿಯಲ್ಲಿಯೂ ಗಂಡು ಹೆಣ್ಣು ಎಂಬ ಬಳ್ಳಿಯಿರುತ್ತದೆ. ಹೆಣ್ಣು ಬಳ್ಳಿ ಮಿಡಿ ಕಟ್ಟಿ ಹೂವು ಬಿಟ್ಟರೆ, ಗಂಡು ಬಳ್ಳಿ ಹೂವನ್ನಷ್ಟೇ ಬಿಡುತ್ತದೆ. ಗಂಡು ಹೆಣ್ಣು ಹೀಗೆ ಎರಡು ಬಳ್ಳಿಗಳಿದ್ದಲ್ಲಿ ಮಾತ್ರ ಕಾಯಿಕಟ್ಟುತ್ತವೆ. ಒಂದು ಇಲ್ಲದಿದ್ದರೂ ಬೆಳೆ ಬರೋದಿಲ್ಲ.
ಮಾಡಹಾಗಲ ತರಕಾರಿಯನ್ನು ಎಕರೆಗಟ್ಟಲೆ ಬೆಳೆಸುವುದು ಕಷ್ಟ. ನಿಶ್ಚಿತ ಸ್ಥಳದಲ್ಲಿ ಬೆಳೆಯಬಹುದು. ಒಮ್ಮೆ ಬೀಜದಿಂದ ಬಳ್ಳಿಯಾದರೆ ಸಾಕು ನಂತರ ಗಡ್ಡೆಯಿಂದ ಪ್ರತಿ ವರ್ಷ ಮುಂಗಾರುವಿನಲ್ಲಿ ಚಿಗುರು ಬಂದು ಕಾಯಿ ಬಿಡುತ್ತದೆ. ಈ ಗಡ್ಡೆ ಬಹಳ ಸೂಕ್ಷ್ಮ ವಾಗಿರುತ್ತದೆ. ಬಳ್ಳಿ ಎಷ್ಟು ವಿಸ್ತಾರವಾಗಿ ಹಬ್ಬುತ್ತದೆಯೋ ಅಷ್ಟು ಹೂವಾಗುತ್ತದೆ. ಒಂದು ಕಾಯಿ ಸರಾಸರಿ 100 ಗ್ರಾಂ ತೂಕ ಇರುತ್ತದೆ. ಸ್ವಲ್ಪ ಪೆಟ್ಟಾದರೆ ಸಾಕು, ಕೊಳೆತು ಹೋಗುತ್ತದೆ.
ಉತ್ತಮ ಗೊಬ್ಬರ ಕೊಟ್ಟು ಕೃಷಿ ಮಾಡಿ ಚಪ್ಪರಕೆ ಬಳ್ಳಿ ಹಬ್ಬಿಸಿದಲ್ಲಿ ಆರಂಭವಿಕ ವರ್ಷದಲ್ಲಿ ಒಂದು ಕಡಿಮೆ ಇಳುವರಿ ಬಂದರೂ ನುಂತರ ಬಳ್ಳಿ ಹಬ್ಬಿದಂತೆಲ್ಲಾ ಒಂದು ಬಳ್ಳಿಯಿಂದ 25 ಕೆಜಿಯವರೆಗೂ ಇಳುವರಿ ಪಡೆಯಬಹುದು.
ಹಲವಾರು ಆರೋಗ್ಯದ ಗುಟ್ಟನ್ನು ಹೊಂದಿರುವ ನೈಸರ್ಗಿಕವಾಗಿ ಸಿಗುವ ಮಾಡಹಾಗಲ ಈಗ ಅವಸಾನದ ಅಂಚಿಗೆ ತಲುಪಿದೆ. ಮನೆಯ ಹೂದೋಟದಲ್ಲಿ, ಟೆರಿಸ್ ನಲ್ಲಿ, ಹೊಲದ ಬದುಗಳಲ್ಲಿ, ಕುಂಡದಲ್ಲಿ ಸ್ವಲ್ಪ ಜಾಗ ಕೊಟ್ಟು ಬೆಳೆಸುವಂತಹ ಈ ಬಳ್ಳಿ ಮುಂದೆ ಸಿಗುತ್ತೋ ಇಲ್ಲೊ ಗೊತ್ತಿಲ್ಲ.
ಮಾಡಹಾಗಲಕಾಯಿ ಬಳ್ಳಿಯ ಗಡ್ಡೆ ನಾಟಿ ಮಾಡಿದ ರೈತನ ತಲೆಗಿಂತ ದೊಡ್ಡದಾದರೆ ತಲೆ ಒಡೆಯುತ್ತದೆ ಎಂಬ ಮೂಢನಂಬಿಕೆಯಿದೆ. ಆದರೆ ಈಗ ರೈತರು ಇಂತಹ ಮೂಢನಂಬಿಕೆಗೆ ಒಳಗಾಗದೆ ಸಾವಿರಕ್ಕೊಬ್ಬರಂತೆ ಧೈರ್ಯಮಾಡಿ ಬೆಳೆಯಲು ಮುಂದಾಗುತ್ತಿದ್ದಾರೆ.
Share your comments