ಸೋಷಿಯಲ್ ಮೀಡಿಯಾ ಕಾರಣದಿಂದ ತೋಟದಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿಯ ಬೆಲೆ ಬಾಳುವ ಮಾವಿನ ಹಣ್ಣನ್ನು ರೈತರೊಬ್ಬರು ಕಳೆದುಕೊಂಡಿರುವ ವಿಚಿತ್ರ ಘಟನೆ ಓಡಿಶಾದಲ್ಲಿ ವರದಿಯಾಗಿದೆ. ಹೌದು ಒಡಿಶಾದ ಜಮೀನಿನಿಂದ ಸುಮಾರು 2.5 ಲಕ್ಷ ಮೌಲ್ಯದ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿರುವ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ನಿಂದ ಈ ಘಟನೆ ನಡೆದಿದೆ ಎಂಬುದು ಇಲ್ಲಿ ಓದುಗರಿಗೆ ಅಚ್ಚರಿ ಉಂಟು ಮಾಡುವ ವಿಷಯ..
ಪ್ರಕರಣದ ಹಿನ್ನೆಲೆ
ಲಕ್ಷ್ಮಿ ನಾರಾಯಣನ್ ಒಡಿಶಾದ ನುವಾಪಾಡಾ ಜಿಲ್ಲೆಯವರು ಅವರೊಬ್ಬ ರೈತ. ಇವರು ತಮ್ಮ ಜಮೀನಿನಲ್ಲಿ 38 ತಳಿಯ ಮಾವುಗಳನ್ನು ಬೆಳೆಸಿದ್ದಾರೆ. ಈ ಮಾವುಗಳೆಲ್ಲವು ದುಮಾರಿ ಮೊತ್ತದಾಗಿದೆ. ತಮ್ಮ ಮಾವಿನಹಣ್ಣಿನ ಅನನ್ಯ ಮೌಲ್ಯವನ್ನು ಅರಿತು, ಅವರು ಉತ್ಸಾಹದಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ನಿರ್ಧರಿಸಿದರು.
ಕಳ್ಳತನದ ಕೆಲವೇ ದಿನಗಳ ಮೊದಲು ತೋಟದ ಮಾಲೀಕ ತನ್ನ ಜಮೀನಿನಲ್ಲಿ ಬೆಳೆದ ಮಾವಿನ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದರಲ್ಲೂ ಹಣ್ಣು ಮಾರುಕಟ್ಟೆಯಲ್ಲಿ ಮಾರಾಟವಾಗುವ ದುಬಾರಿ ಬಲೆ ಮತ್ತು ಅದರ ಹಣ್ಣುಗಳ ಫೋಟೋವನ್ನು ಹೆಮ್ಮೆಯಿಂದ ಪೋಸ್ಟ್ ಮಾಡಿದ್ದಾರೆ.
ಫೋಟೋ ಪ್ರಕಟವಾದ ಒಂದು ದಿನದ ನಂತರ, ಅವರ ಜಮೀನಿನಲ್ಲಿ ನಾಲ್ಕು ಬೆಲೆಬಾಳುವ ಮಾವಿನ ಗಿಡಗಳಿಂ ಹಣ್ಣುಗಳನ್ನು ಕಳವು ಮಾಡಲಾಗಿದೆ. ಇದರಿಂದ ಬೆಚ್ಚಿಬಿದ್ದ ಲಕ್ಷ್ಮೀ ನಾರಾಯಣನ್ ಗ್ರಾಮಸ್ಥರ ಮುಂದೆ ಅಳಲು ತೋಡಿಕೊಂಡರು. ಈ ಕಳ್ಳತನದ ಘಟನೆಯು ಈ ಪ್ರದೇಶದಲ್ಲಿ ಮಾತ್ರವಲ್ಲದೆ ಒಡಿಶಾದಾದ್ಯಂತ ಕಾಳ್ಗಿಚ್ಚು ಹರಡಿತು. ಈಗಾಗಲೇ ಮಾರುಕಟ್ಟೆಯಲ್ಲಿ ಉತ್ಪನ್ನಕ್ಕೆ ಸಮರ್ಪಕ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇತ್ತೀಚೆಗೆ, ವಿಶ್ವದ ಅತ್ಯಂತ ದುಬಾರಿ ಜಪಾನೀಸ್ ಮಿಯಾಜಾಕಿ ಮಾವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಒಂದು ಮಾವು ಎಷ್ಟು ಜನಪ್ರಿಯವಾಗಿದೆ ಎಂದರೆ ಅದರ ಬೆಲೆ ಸುಮಾರು 40,000. ಕೆಂಪು ಚರ್ಮವನ್ನು ಹೊಂದಿರುವ ಈ ಮಾವನ್ನು ಸುವಾಸನೆಗಳ ರಾಜ ಎಂದೂ ಬಣ್ಣಿಸಲಾಗುತ್ತದೆ.
ಮಾವಿನಹಣ್ಣಿನ ಉತ್ಪಾದನೆಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ:
FY 2022-23 ರಲ್ಲಿ, ಭಾರತದ ಮಾವು ರಫ್ತು ಸುಮಾರು USD 3 ಬಿಲಿಯನ್ ಎಂದು ಅಂದಾಜಿಸಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕಳೆದ ಹಲವಾರು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ಮಾವಿನಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಿದೆ . ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಏಪ್ರಿಲ್-ಜೂನ್ ಚಕ್ರದಲ್ಲಿ ಅಲ್ಫೋನ್ಸಾ, ಕೇಸರ್ ಮತ್ತು ಪಂಗನಪಲ್ಲಿ ಮಾವಿನಹಣ್ಣಿನ ಭಾರತದ ರಫ್ತು ಯುಎಸ್‌ಗೆ ಎರಡು ಪಟ್ಟು ಹೆಚ್ಚಾಗಿದೆ.
ವಾಯು ಸರಕು ಸಾಗಣೆ ದರಗಳ ಸಾಮಾನ್ಯೀಕರಣವು US ಮತ್ತು UK ಗೆ ಮಾವಿನ ರಫ್ತುಗಳನ್ನು ಹೆಚ್ಚಿಸಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮಾವಿನ ಉತ್ಪಾದಕರಾಗಿದ್ದು, ಚೀನಾ ನಂತರದ ಸ್ಥಾನದಲ್ಲಿದೆ. ಆದಾಗ್ಯೂ, ಭಾರತವು ತನ್ನ ಉತ್ಪಾದನೆಯ 1% ಕ್ಕಿಂತ ಕಡಿಮೆ ರಫ್ತು ಮಾಡುತ್ತದೆ.
Image Source@pixabay
Share your comments